ಆ್ಯಪ್ನಗರ

ಕೊಡವ ಸಾಹಿತ್ಯ ಅಕಾಡೆಮಿಯಿಂದ ದುಡಿ ವಿತರಣೆ

ಕಳೆದ ಮಳೆಗಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಏಳು ನಾಡು ಗ್ರಾಮಗಳಲ್ಲಿ ಜೀವ ಮತ್ತು ಜೀವನಾಧಾರವಾದ ತೋಟ, ಗದ್ದೆಗಳು ಹಾನಿಗೀಡಾಗಿರುವುದಲ್ಲದೇ ಕೊಡಗಿನ ಸಂಸ್ಕೃತಿ, ಆಚಾರ, ವಿಚಾರಕ್ಕೆ ಪೂರಕವಾದ ಪರಿಕರಗಳು ಕೂಡ ನೀರುಪಾಲಾಗಿದ್ದವು. ಇದನ್ನು ಮನಗಂಡ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ದುಡಿಪಾಟ್‌ ತಂಡ ಮತ್ತು ಉಮ್ಮತ್ತಾಟ್‌ ತಂಡಗಳಿಗೆ ದುಡಿ ಹಾಗೂ ತಾಳ ವಿತರಿಸುವ ಮೂಲಕ ನೆರವು ನೀಡಿತು.

Vijaya Karnataka 8 Mar 2019, 5:00 am
ಮಡಿಕೇರಿ: ಕಳೆದ ಮಳೆಗಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಏಳು ನಾಡು ಗ್ರಾಮಗಳಲ್ಲಿ ಜೀವ ಮತ್ತು ಜೀವನಾಧಾರವಾದ ತೋಟ, ಗದ್ದೆಗಳು ಹಾನಿಗೀಡಾಗಿರುವುದಲ್ಲದೇ ಕೊಡಗಿನ ಸಂಸ್ಕೃತಿ, ಆಚಾರ, ವಿಚಾರಕ್ಕೆ ಪೂರಕವಾದ ಪರಿಕರಗಳು ಕೂಡ ನೀರುಪಾಲಾಗಿದ್ದವು. ಇದನ್ನು ಮನಗಂಡ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ದುಡಿಪಾಟ್‌ ತಂಡ ಮತ್ತು ಉಮ್ಮತ್ತಾಟ್‌ ತಂಡಗಳಿಗೆ ದುಡಿ ಹಾಗೂ ತಾಳ ವಿತರಿಸುವ ಮೂಲಕ ನೆರವು ನೀಡಿತು.
Vijaya Karnataka Web kodava sahitya academy
ಕೊಡವ ಸಾಹಿತ್ಯ ಅಕಾಡೆಮಿಯಿಂದ ದುಡಿ ವಿತರಣೆ


ಮಡಿಕೇರಿಯ ಕರವಲೆ ಬಾಡಗ ಶ್ರೀಭಗವತಿ ದೇವಾಲಯ ಹಾಗೂ ಮೂವತ್ತೊಕ್ಲುವಿನ ಶ್ರೀಭದ್ರಕಾಳಿ ದೇವಾಲಯದ ದುಡಿಪಾಟ್‌ ತಂಡ ಮತ್ತು ಉಮ್ಮತ್ತಾಟ್‌ ತಂಡಗಳಿಗೆ ತಲಾ ನಾಲ್ಕು ದುಡಿ ಹಾಗೂ ತಲಾ ಹನ್ನೆರಡು ತಾಳಗಳನ್ನು ಅಕಾಡೆಮಿಯಿಂದ ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ, ಒಂದು ವರ್ಷ ಮೂರು ತಿಂಗಳಿನಿಂದ ಕೊಡವ ಆಚಾರ, ವಿಚಾರ, ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುವ ಅಕಾಡೆಮಿ ಅದರ ಒಂದು ಭಾಗವಾಗಿ ದುಡಿ ಮತ್ತು ತಾಳವನ್ನು ದೇವಾಲಯ ಹಾಗೂ ಸಂಘ, ಸಂಸ್ಥೆಗಳಿಗೆ ನೀಡುತ್ತ ಬರುತ್ತಿದೆ ಎಂದರು.

ಕಳೆದ ಮಳೆಗಾಲದಲ್ಲಿ ನಷ್ಟಕ್ಕೆ ಒಳಗಾದ ತಂಡಗಳಿಗೆ ಆರ್ಥಿಕ ನೆರವನ್ನು ನೀಡಲಾಗಿದ್ದು, ಇದೀಗ ದುಡಿ ಮತ್ತು ತಾಳ ವಿತರಿಸಲಾಗಿದೆ ಎಂದರು.

ಅಕಾಡೆಮಿ ಸದಸ್ಯರಾದ ಹಂಚೆಟ್ಟಿರ ಮನುಮುದ್ದಪ್ಪ, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ನಾಳಿಯಮಂಡ ಉಮೇಶ್‌ ಕೇಚಮಯ್ಯ, ಬೊಳ್ಳಜಿರ ಬಿ.ಅಯ್ಯಪ್ಪ,

ಕರವಲೆ ಶ್ರೀ ಭಗವತಿ ದೇವಾಲಯದ ಅಧ್ಯಕ್ಷ ಸುಬ್ಬಮಂಡ ಬೋಜಪ್ಪ, ಪ್ರಮುಖರಾದ ಮುದ್ದಂಡ ರಾಯ್‌ ತಮ್ಮಯ್ಯ, ಭದ್ರಕಾಳಿ ದೇವಾಲಯದ ಅಧ್ಯಕ್ಷ ನಾಗಂಡ ಸಚಿ ಕಾಳಪ್ಪ ಹಾಗೂ ಗ್ರಾಮಸ್ಥರು ಈ ಸಂದರ್ಭ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ