ಆ್ಯಪ್ನಗರ

ಸಾಹಿತ್ಯ ಸಮ್ಮೇಳನ ವೆಚ್ಚ 10 ಲಕ್ಷ ರೂ.

ಡಿ. 22 ಮತ್ತು 23ರಂದು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 10,22,860 ರೂ. ಖರ್ಚಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಎಸ್‌.ಲೋಕೇಶ್‌ ಸಾಗರ್‌ ತಿಳಿಸಿದರು.

Vijaya Karnataka 15 Jan 2019, 9:11 pm
ನಾಪೋಕ್ಲು: ಡಿ. 22 ಮತ್ತು 23ರಂದು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 10,22,860 ರೂ. ಖರ್ಚಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಎಸ್‌.ಲೋಕೇಶ್‌ ಸಾಗರ್‌ ತಿಳಿಸಿದರು.
Vijaya Karnataka Web literary conference cost rs 10 lakh
ಸಾಹಿತ್ಯ ಸಮ್ಮೇಳನ ವೆಚ್ಚ 10 ಲಕ್ಷ ರೂ.


ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಮತ್ತು ಸಾಹಿತ್ಯ ಸಮ್ಮೇಳನದ ಆಹಾರ ಸಮಿತಿ ಅಧ್ಯಕ್ಷ ಪಾಡಿಯಮ್ಮಂಡ ಮುರುಳಿ ಕರುಂಬಮ್ಮಯ್ಯ ಅವರ ಅಧ್ಯಕ್ಷ ತೆಯಲ್ಲಿ ನಡೆದ ಲೆಕ್ಕಪತ್ರ ಮಂಡನಾ ಸಭೆಯಲ್ಲಿ ಅವರು ಮಾತನಾಡಿದರು. ಸಮ್ಮೇಳನಕ್ಕೆ ಸಂಬಂಧಿಸಿದ ಪೂರ್ವಭಾವಿ ಸಭೆಯಲ್ಲಿ ಊಟೋಪಚಾರ ವೆಚ್ಚವನ್ನು ನಾಪೋಕ್ಲುವಿನ ದಾನಿಗಳ ಸಹಕಾರದಿಂದ ನಡೆಸಿಕೊಡಬೇಕೆಂಬ ಕೋರಿಕೆಯಂತೆ ಅದರ ಉಸ್ತುವಾರಿಯನ್ನು ವಹಿಸಿಕೊಂಡ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರುಳಿ ಕರುಂಬಮ್ಮಯ್ಯ ಮತ್ತು ಮಡಿಕೇರಿ ತಾಲೂಕು ಆರ್‌ಎಂಸಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಹಿರಿಯರ ಸಹಕಾರದೊಂದಿಗೆ ಊಟದ ಖರ್ಚು 2 ಲಕ್ಷ , ವಾದ್ಯ, ಕಾಪಳ ನೃತ್ಯ, ಅಡುಗೆಗೆ ನೀರು ಸೇರಿದಂತೆ ಇತರ ಖರ್ಚು 22,860 ರೂ. ಒಟ್ಟು 2,22,860 ರೂ.ಗಳನ್ನು ತಾವು ಮತ್ತು ದಾನಿಗಳ ಸಹಕಾರದಿಂದ ಸಂಗ್ರಹಿಸಿ ಕಾರ್ಯನಿರ್ವಹಿಸಿದ್ದಾರೆ. ಉಳಿದಂತೆ ವೇದಿಕೆ, ಅಧ್ಯಕ್ಷ ರ ಮೆರವಣಿಗೆ, ನೆನಪಿನ ಕಾಣಿಕೆ, ಸನ್ಮಾನ, ಇನ್ನಿತರ ಎಲ್ಲ್ಲ ವೆಚ್ಚಗಳು ಸೇರಿ 8 ಲಕ್ಷ ರೂ. ವೆಚ್ಚವಾಗಿದೆ. ಒಟ್ಟು ಸಮ್ಮೇಳನ ಖರ್ಚು 10,22,860 ರೂ.ಗಳಾಗಿದೆ ಎಂದು ಮಾಹಿತಿ ನೀಡಿದರು. ಸರಕಾರದಿಂದ 5 ಲಕ್ಷ ರೂ. ಮಾತ್ರ ಈ ಕಾರ್ಯಕ್ರಮಕ್ಕೆ ದೊರೆಯಲಿದೆ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಕಸಾಪ ಜಿಲ್ಲಾ ಸಮಿತಿ ಕೋಶಾಧ್ಯಕ್ಷ ಮುರುಳೀಧರ್‌, ಕ.ಸಾ.ಪದ ಹಿರಿಯ ಸದಸ್ಯ ಬೊಪ್ಪೇರ ಸಿ.ಕಾವೇರಪ್ಪ, ಸಮ್ಮೇಳನದ ಕಾರ್ಯದರ್ಶಿ ಮತ್ತು ಜಿಲ್ಲಾ ಸಮಿತಿ ಸದಸ್ಯೆ ಶಿಕ್ಷ ಕಿ ಕೆ.ಬಿ.ಉಷಾರಾಣಿ, ಉಪಪ್ರಾಂಶುಪಾರಲಾದ ಪಿ.ಕೆ.ನಳಿನಿ, ನಾಪೋಕ್ಲು ಹೋಬಳಿ ಕ.ಸಾ.ಪ ಅಧ್ಯಕ್ಷ ಸಿ.ಎಸ್‌.ಸುರೇಶ್‌, ಆಹಾರ ಸಮಿತಿ ಸದಸ್ಯ ಬೊಪ್ಪಂಡ ಡಾ. ಜಾಲಿ ಬೋಪಯ್ಯ, ಅರೆಯಡ ಡಿ.ಸೋಮಪ್ಪ, ಸಂಚಾಲಕ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ದಿನೇಶ್‌, ನಾಪೋಕ್ಲು ಕ.ಸಾ.ಪÜ.ದ ಪಿ.ವಿ.ಪ್ರಭಾಕರ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ