ಆ್ಯಪ್ನಗರ

ಕಾಫಿ ಮಂಡಳಿ ಅಧಿಕಾರಿ ಆತ್ಮಹತ್ಯೆ

ನಗರದ ಅಪ್ಪಯ್ಯ ಸ್ವಾಮಿ ರಸ್ತೆಯೊಂದರ ಮನೆಯಲ್ಲಿ ಕೇಂದ್ರ ಕಾಫಿ ಮಂಡಳಿಯ ವಿಸ್ತರಣಾಧಿಕಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

Vijaya Karnataka 14 Oct 2018, 5:00 am
ವಿರಾಜಪೇಟೆ: ನಗರದ ಅಪ್ಪಯ್ಯ ಸ್ವಾಮಿ ರಸ್ತೆಯೊಂದರ ಮನೆಯಲ್ಲಿ ಕೇಂದ್ರ ಕಾಫಿ ಮಂಡಳಿಯ ವಿಸ್ತರಣಾಧಿಕಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
Vijaya Karnataka Web news/kodagu/madikeri
ಕಾಫಿ ಮಂಡಳಿ ಅಧಿಕಾರಿ ಆತ್ಮಹತ್ಯೆ


ಜಿ.ರಮೇಶ್‌ (35) ತಮ್ಮ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡವರು.

ವಿರಾಜಪೇಟೆ ಗಾಂಧಿನಗರ ರಸ್ತೆಯಲ್ಲಿರುವ ಕೇಂದ್ರ ಕಾಫಿ ಮಂಡಳಿ ಕಚೇರಿಯಲ್ಲಿ ವಿಸ್ತಾರಣಾಧಿಕಾರಿಯಾಗಿದ್ದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಲೇಟ್‌ ಗಂಗಯ್ಯ ಅವರ ಪುತ್ರ ರಮೇಶ್‌ ಅ.11ರಂದು ರಾತ್ರಿ ತಮ್ಮ ಸ್ನೇಹಿತನಿಗೆ ದೂರವಾಣಿ ಕರೆ ಮಾಡಿ ನನಗೆ ಬದುಕಲು ಸಾಧ್ಯವಿಲ್ಲ ಸಾಯುತ್ತೇನೆ ಎಂದು ತಿಳಿಸಿದ್ದರು ಎನ್ನಲಾಗಿದೆ.

ಶುಕ್ರವಾರ ಕಚೇರಿಗೆ ಅಗಮಿಸದೇ ಇದ್ದುದರಿಂದ ಸ್ನೇಹಿತರು ರಮೇಶ್‌ಗೆ ಕರೆ ಮಾಡಿದ್ದರು. ಪ್ರತಿಕ್ರಿಯೆ ಬಾರದ ಕಾರಣ ಸಂಶಯದಿಂದ ಮನೆಗೆ ತೆರಳಿ ನೋಡಿದಾಗ ಫ್ಯಾನ್‌ಗೆ ಸೀರೆಯಿಂದ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ರಮೇಶ್‌ ಕೆಲವು ದಿನಗಳಿಂದ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಪ್ರಕಾಶ್‌ ಎಂಬುವವರು ನೀಡಿದ ದೂರಿನ ಮೇರೆಗೆ ಪಟ್ಟಣ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ