ಆ್ಯಪ್ನಗರ

ಸಚಿವ ಸಾರಾ ಹೆಸರಿನಲ್ಲಿ ಹಣ ವಂಚನೆ: ಇಬ್ಬರ ಸೆರೆ

ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ 1.01 ಲಕ್ಷ ರೂ. ವಂಚಿಸಿದ ಇಬ್ಬರು ಆರೋಪಿಗಳನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.

Vijaya Karnataka 23 Feb 2019, 8:58 pm
ಮಡಿಕೇರಿ: ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ 1.01 ಲಕ್ಷ ರೂ. ವಂಚಿಸಿದ ಇಬ್ಬರು ಆರೋಪಿಗಳನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web money fraud two captives
ಸಚಿವ ಸಾರಾ ಹೆಸರಿನಲ್ಲಿ ಹಣ ವಂಚನೆ: ಇಬ್ಬರ ಸೆರೆ


ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್‌ ತಾಲೂಕಿನ ಬ್ಯಾಡರಪೇಟೆ ನಿವಾಸಿ ಸಯ್ಯದ್‌ ಮುಬಾರಕ್‌ ಮತ್ತು ಅದೇ ಊರಿನ ಸಯ್ಯದ್‌ ಖಲೀಲ್‌ ಬಂಧಿತ ಆರೋಪಿಗಳು. ಇವರನ್ನು ತಮಿಳುನಾಡಿನ ಊಟಿಯಲ್ಲಿ ಬಂಧಿಸಿ ಕರೆತರಲಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಏನಿದು ಪ್ರಕರಣ?: ಬೆಂಗಳೂರಿನ ಶಿವಲಿಂಗಯ್ಯ ಎಂಬವರು 2018ರ ನ. 3ರಂದು ಕುಶಾಲನಗರದ ಕೂಡ್ಲೂರು ಗ್ರಾಮದಲ್ಲಿ ಹೊಂದಿರುವ ಜಮೀನಿಗೆ ದಾಖಲೆ ಮಾಡಿಸಲು ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದರು. ಈ ವೇಳೆ ಆರೋಪಿ ಸಯ್ಯದ್‌ ಮುಬಾರಕ್‌ ತಾನು ದಾಖಲಾತಿ ಮಾಡಿಸಿಕೊಡುವುದಾಗಿ ಹೇಳಿ ಸಚಿವ ಸಾ.ರಾ. ಮಹೇಶ್‌ ಗೆ ಕರೆ ಮಾಡುವಂತೆ ಇನ್ನೊಬ್ಬ ಆರೋಪಿ ಫೋನ್‌ ಮಾಡಿ ನಂಬಿಸಿ 1 ಲಕ್ಷ ದ 1 ಸಾವಿರ ರೂಪಾಯಿ ಪಡೆದುಕೊಂಡು ವಂಚಿಸಿದ್ದ. ಈ ಸಂಬಂಧ ದಾಖಲಾಗಿದ್ದ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಕೆ.ಆರ್‌. ಪುರಂ, ಕೆಂಗೇರಿ, ಕೋರಮಂಗಲ, ಮಡಿವಾಳ, ಜಯನಗರ, ಜಿಗಣಿ, ಮಾಲೂರು ಠಾಣೆಗಳಲ್ಲೂ ಈ ಇಬ್ಬರ ವಿರುದ್ಧ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್‌ಪಿ ಡಾ. ಸುಮನ ಡಿ. ಪನ್ನೇಕರ್‌ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಕೆ. ಸುಂದರ್‌ರಾಜ್‌, ವೃತ್ತ ನಿರೀಕ್ಷ ಕ ಅನೂಪ್‌ ಮಾದಪ್ಪ, ಠಾಣಾಧಿಕಾರಿ ಷಣ್ಮುಗಂ, ಕೆ.ಕೆ. ದಿನೇಶ್‌, ಸಿಬ್ಬಂದಿ ಮಧುಸೂದನ್‌, ನಾಗರಾಜ್‌, ಕಡಗಣ್ಣವರ್‌ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ