ಆ್ಯಪ್ನಗರ

ಪ್ರಕೃತಿ ವಿಕೋಪ: ಸಂತ್ರಸ್ತರಿಗೆ ಸಿಗದ ಪರಿಹಾರ

ಮಾದಾಪುರ ಗ್ರಾಮ ಪಂಚಾಯಿತಿ ಇಗೋಡ್ಲು ವ್ಯಾಪ್ತಿಯಲ್ಲಿ ಆಗಸ್ಟ್‌ನಲ್ಲಿ ಸಂಭವಿಸಿದ ಅತಿವೃಷ್ಟಿ ಅನಾಹುತದಿಂದ ಇನ್ನೂ ಸರಕಾರದಿಂದ ಪರಿಹಾರ ಸಿಗಲಿಲ್ಲ ಎಂದು ಸಂತ್ರಸ್ತರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Vijaya Karnataka 11 Oct 2018, 5:00 am
ಸುಂಟಿಕೊಪ್ಪ: ಮಾದಾಪುರ ಗ್ರಾಮ ಪಂಚಾಯಿತಿ ಇಗೋಡ್ಲು ವ್ಯಾಪ್ತಿಯಲ್ಲಿ ಆಗಸ್ಟ್‌ನಲ್ಲಿ ಸಂಭವಿಸಿದ ಅತಿವೃಷ್ಟಿ ಅನಾಹುತದಿಂದ ಇನ್ನೂ ಸರಕಾರದಿಂದ ಪರಿಹಾರ ಸಿಗಲಿಲ್ಲ ಎಂದು ಸಂತ್ರಸ್ತರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Vijaya Karnataka Web no compensation for natural disaster victim
ಪ್ರಕೃತಿ ವಿಕೋಪ: ಸಂತ್ರಸ್ತರಿಗೆ ಸಿಗದ ಪರಿಹಾರ


ಆ. 16ರಂದು ರಾತ್ರಿ ಜಲಪ್ರಳಯದಿಂದ ಗುಡ್ಡಕುಸಿದು ಇಗೋಡ್ಲು ಪರಿಶಿಷ್ಟ ಕಾಲೋನಿಯ ಕೆಲವರ ಮನೆಗಳಿಗೆ ಹಾನಿಯಾಗಿದೆ. ಕಾರ್ಯಪ್ಪ, ರೆಡ್ಡಿ ಕಾಫಿ ತೋಟ ಭೂ ಸಮಾಧಿಯಾಗಿದ್ದು, ಇನ್ನಿತರರ ತೋಟಗಳು ವರುಣನ ಆರ್ಭಟಕ್ಕೆ ನಾಶವಾಗಿದೆ. ಜಿಲ್ಲಾಧಿಕಾರಿಗಳು ಸಹ ಈ ಭಾಗಕ್ಕೆ ಒಮ್ಮೆ ಭೇಟಿ ನೀಡಿ ಪರಿಶೀಲಿಸಿದ್ದರು.

ಆದರೆ, ಕಂದಾಯ ಸೇರಿದಂತೆ ಕೃಷಿ, ತೋಟಗಾರಿಕಾ ಇಲಾಖೆ, ಕಾಫಿ ಮಂಡಳಿಯಿಂದ ಸೂಕ್ತ ಪರಿಹಾರ ಸಿಗಲಿಲ್ಲ ಎಂದು ಧೂಮಪ್ಪ, ಮಧು, ಪರಶು ಎಂಬುವವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೃಷಿ ಸಂಘದ ಚುನಾವಣೆ : ಬಿರುಸಿನ ಪ್ರಚಾರ

ಸುಂಟಿಕೊಪ್ಪ: ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ಜೆಡಿಎಸ್‌ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

ಆ. 19ರಂದು ನಡೆಯಬೇಕಿದ್ದ ಚುನಾವಣೆ ಅತಿವೃಷ್ಟಿಯಿಂದಾಗಿ ಅ.16ರಂದು ನಡೆಯಲಿದೆ.

2 ದಶಕಗಳಿಂದಲ್ಲೂ ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬಿಜೆಪಿ ವಶದಲಿದ್ದು, ಅಧಿಕಾರ ಕಸಿಯಲು ಜೆಡಿಸ್‌, ಕಾಂಗ್ರೆಸ್‌ ಮುಖಂಡರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ತಂತ್ರ ಹಣಿಯುತ್ತಿದೆ.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಸಂಘದ ಮಾಜಿ ಅಧ್ಯಕ್ಷ , ಹಾಲಿ ಸದಸ್ಯರು ಆಗಿರುವುದರಿಂದ ಬಿಜೆಪಿಗೆ ಮತ್ತೆ ಅಧಿಕಾರಕ್ಕೆ ಬರುವ ಧಾವಂತವಿದೆ.

ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿಯಿಂದ ಮಾಜಿ ಅಧ್ಯಕ್ಷ ಬಿ.ಎ.ಮೊಣ್ಣಪ್ಪ, ಮಾಜಿ ಉಪಾಧ್ಯಕ್ಷ ಪಿ.ಪಿ.ತಿಲಕ್‌ ಕುಮಾರ್‌, ಗ್ರಾ.ಪಂ.ಸದಸ್ಯ ಉಮೇಶ ಉತ್ತಪ್ಪ ಎನ್‌.ಎಂ., ಕರುಂಬಯ್ಯ ಬಿ.ಎ., ಕಾಳಪ್ಪ ಎನ್‌.ಸಿ. (ಸಚ್ಚಿ), ಎನ್‌.ಎಸ್‌.ಬೆಳ್ಯಪ್ಪ ಸ್ಪರ್ಧಿಸಿದ್ದಾರೆ. ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿಕೂಟದಿಂದ ಬೋಪಯ್ಯ ಕೆ.ಬಿ.(ದಾದು), ಎಂ.ಕೆ.ಜಗದೀಶ, ಮಾಜಿ ನಿರ್ದೇಶಕ ಸಿ.ಎ.ತಮ್ಮಯ್ಯ, ಎನ್‌.ಟಿ. ಗಣಪತಿ, ಟಿ.ಸಿ. ನೇತ್ರಾಜು ಹಾಗೂ ಮಾದಪ್ಪ ರಘು ಸ್ಪರ್ಧಾಕಣದಲ್ಲಿದ್ದಾರೆ.

ಸಾಲಗಾರರಲ್ಲದ 1 ಕ್ಷೇತ್ರದಿಂದ ಬಿಜೆಪಿಯಿಂದ ಎಂ.ವೈ.ಕೇಶವ, ಹಾಗೂ ಕಾಂಗ್ರೆಸ್‌ನಿಂದ ಎನ್‌.ಎಂ.ಬಿದ್ದಣ್ಣಿ (ಮಧು), ಸಾಲಗಾರರ ಹಿಂದುಳಿದ ಪ್ರವರ್ಗ ಎ ಕ್ಷೇತ್ರದ 1 ಸ್ಥಾನಕ್ಕೆ ಬಿಜೆಪಿಯಿಂದ ಬಿ.ಎ.ಧೂಮಪ್ಪ, ದೋಸ್ತಿ ಪಕ್ಷ ದಿಂದ ಎಂ.ಬಿ.ರಾಜ ಹಾಗೂ ಪಕ್ಷೇತರರಾಗಿ ಗ್ರಾ.ಪಂ.ಸದಸ್ಯ ಕೆ.ಎ.ಲತೀಫ್‌, ಸಾಲಗಾರರ ಮಹಿಳಾ 1 ಮಿಸಲು ಕ್ಷೇತ್ರದಿಂದ ಬಿಜೆಪಿಯಿಂದ.ಪಿ.ಪೊನ್ನವ್ವ (ಜೂಲಿ), ಕಾಂಗ್ರೆಸ್‌ನಿಂದ ಪಿ.ಐ.ನಳಿನಿ ಹಾಗೂ ಎಂ.ಬಿ.ಗೀತಾ, ಪರಿಶಿಷ್ಟ ಜಾತಿಯಿಂದ ರೇಣುಕಾ ಹಾಗೂ ಜೆ.ಆರ್‌.ಕೃಷ್ಣಪ್ಪ ಕಣದಲ್ಲಿದ್ದಾರೆ.

ಸಂಘವನ್ನು ವರ್ಷದಿಂದ ವರ್ಷಕ್ಕೆ ಲಾಭದತ್ತ ಕೊಂಡೊಯ್ಯತ್ತಿರುವುದೇ ಆಡಳಿತ ಮಂಡಳಿ ಹೆಗ್ಗಳಿಕೆ ಎಂದು ಬಿಜೆಪಿ ಆಭ್ಯರ್ಥಿಗಳು ಪ್ರಚಾರ ಮಾಡುತ್ತಿದ್ದಾರೆ.

ತೀವ್ರ ಜಿದ್ದಾ ಜಿದ್ದಿಯಿಂದ ಕೂಡಿದ ಚುನಾವಣೆಯಲ್ಲಿ ಯಾರ ಪಾಲಿಗೆ ವಿಜಯಮಾಲೆ ಒಲಿದು ಬರಲಿದೆಯೋ ಎಂದು ಕಾದು ನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ