ಆ್ಯಪ್ನಗರ

ನವೆಂಬರ್‌ 10, ಕೊಡಗು ಬಂದ್‌ಗೆ ಕರೆ

ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ನವೆಂಬರ್‌ 10ರಂದು ಕೊಡಗು ಬಂದ್‌ಗೆ ಕರೆ ನೀಡಲಾಗಿದೆ.

ವಿಕ ಸುದ್ದಿಲೋಕ 7 Nov 2016, 12:55 pm
ಮಡಿಕೇರಿ: ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ನವೆಂಬರ್‌ 10ರಂದು ಕೊಡಗು ಬಂದ್‌ಗೆ ಕರೆ ನೀಡಲಾಗಿದೆ.
Vijaya Karnataka Web november 10 kodagu bandh
ನವೆಂಬರ್‌ 10, ಕೊಡಗು ಬಂದ್‌ಗೆ ಕರೆ


ಟಿಪ್ಪು ವಿರೋಧಿ ಹೋರಾಟ ಸಮಿತಿ ಬಂದ್‌ಗೆ ಕರೆ ನೀಡಿದ್ದು, ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಕುಟ್ಟಪ್ಪ ಹುತಾತ್ಮ ದಿನಾಚರಣೆಗೆ ಎಲ್ಲ ಸಂಘಟನೆಗಳಿಂದ ಸಮಿತಿ ಬೆಂಬಲ ಕೋರಿದೆ.

ಡಿಸಿ ಭೇಟಿ ಮಾಡಿದ ಟಿಪ್ಪು ವಿರೋಧಿ ಸಮಿತಿ ಸದಸ್ಯರು, 'ನಮ್ಮನ್ನು ಬೆದರಿಸಬೇಡಿ, 107 ಸೆಕ್ಷನ್‌ ಅಡಿ ಕ್ರಮ ಜರುಗಿಸಿದರೆ ಇಡೀ ಕೊಡಗಿನ ಮಂದಿ ಬಂಧನಕ್ಕೆ ಸಿದ್ಧ,' ಎಂದಿದ್ದಾರೆ.

ಮಂಗಳವಾರ ನಡೆಸಲು ಉದ್ದೇಶಿಸಿರುವ ಬಿಜೆಪಿ ಪ್ರತಿಭಟನಾ ಮೆರವಣಿಗೆಗೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದಾರೆ.

ಜೈಲ್‌ ಭರೋಗೆ ಸಿದ್ಧ ಎಂದಿರುವ ಬಿಜೆಪಿ ಕಾರ್ಯಕರ್ತರು ಜಿಲ್ಲಾಡಳಿತದ ಬೆದರಿಕೆಗೆ ಬಗ್ಗುವುದಿಲ್ಲ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ