ಆ್ಯಪ್ನಗರ

ತಲಕಾವೇರಿ ಬಳಿ ಭೂಕುಸಿತ ಪ್ರಕರಣ: ಮತ್ತೊಂದು ಮೃತದೇಹ ಪತ್ತೆ!

ಮೂರನೇ ಮೃತ ದೇಹ ಪತ್ತೆಯಾಗಿದೆ. ಘಟನೆ ನಡೆದು ಹತ್ತು ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಮೃತದೇಹ ಸಿಕ್ಕಿದೆ. ನಾಪತ್ತೆಯಾಗಿರುವ ಇನ್ನೂ ಇಬ್ಬರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಮಳೆ ಮತ್ತು ದಟ್ಟ ಮಂಜಿನ ನಡುವೆಯೂ ಕಳೆದ ಕೆಲವು ದಿನಗಳಿಂದ ಎನ್‌ಡಿಆರ್‌ಎಫ್‌ ಕಾರ್ಯಾಚರಣೆ ನಡೆಸುತ್ತಿದೆ.

Vijaya Karnataka 15 Aug 2020, 3:07 pm
ಕೊಡಗು: ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಭೂ ಕುಸಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಮೃತದೇಹ ಇದೀಗ ಪತ್ತೆಯಾಗಿದೆ. ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕ ನಾರಾಯಣ್‌ ಆಚಾರ್‌ ಹಾಗೂ ಅವರ ಸಹೋದರನ ಮೃತದೇಹ ಎನ್‌ಡಿಆರ್‌ಎಫ್‌ ಸಿಬ್ಬಂದಿಗೆ ಸಿಕ್ಕಿತ್ತು. ನಂತರ ಉಳಿದ ಮೂವರಿಗಾಗಿ ಎನ್‌ಡಿಆರ್‌ಎಫ್‌ ತಂಡ ಶೋಧ ಕಾರ್ಯ ಮುಂದುವರೆಸಿತ್ತು.
Vijaya Karnataka Web vijaya-karnataka (15)


ಇದೀಗ ಈ ಪೈಕಿ ಮೂರನೇ ಮೃತ ದೇಹ ಪತ್ತೆಯಾಗಿದೆ. ಘಟನೆ ನಡೆದು ಹತ್ತು ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಮೃತದೇಹ ಸಿಕ್ಕಿದೆ. ನಾಪತ್ತೆಯಾಗಿರುವ ಇನ್ನೂ ಇಬ್ಬರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಮಳೆ ಮತ್ತು ದಟ್ಟ ಮಂಜಿನ ನಡುವೆಯೂ ಕಳೆದ ಕೆಲವು ದಿನಗಳಿಂದ ಎನ್‌ಡಿಆರ್‌ಎಫ್‌ ಕಾರ್ಯಾಚರಣೆ ನಡೆಸುತ್ತಿದೆ.

ಘಟನಾ ಸ್ಥಳದಿಂದ ಸುಮಾರು 2 ಕಿಮೀ ದೂರದಲ್ಲಿ ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕ ನಾರಾಯಣ್‌ ಆಚಾರ್‌ ಅವರ ಮೃತದೇಹ ಪತ್ತೆಯಾಗಿತ್ತು. ನಾರಾಯಣ್‌ ಆಚಾರ್‌ ಅವರ ಸಹೋದರ ಆನಂದ್‌ ತೀರ್ಥ ಅವರ ಮೃತದೇಹ ಸಿಕ್ಕಿತ್ತು. ಇದೀಗ ಯಾರ ಮೃತದೇಹ ಎಂದು ಪೋಸ್ಟ್‌ ಮಾರ್ಟಂ ಬಳಿಕ ತಿಳಿಸಯಬೇಕಷ್ಟೆ.

ಇಂದಿನಿಂದ ಕಾವೇರಮ್ಮನಿಗೆ ಪೂಜೆ: ಭೂ ಕುಸಿತ ದುರಂತದಿಂದ ಸ್ಥಗಿತಗೊಂಡಿದ್ದ ನಿತ್ಯ ಪೂಜೆಗೆ ಮತ್ತೆ ಚಾಲನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ