ಆ್ಯಪ್ನಗರ

ಸಂದೇಶಗಳಲ್ಲಿದೆ ದೇಶಪ್ರೇಮಿಯಾಗಿಸುವ ಶಕ್ತಿ

ಸ್ವಾಮಿ ವಿವೇಕಾನಂದರ ಸಂದೇಶ ಯುವಜನತೆಯನ್ನು ಪ್ರಬುದ್ದ ನಾಗರಿಕ, ಅಪ್ರತಿಮ ದೇಶಪ್ರೇಮಿಯಾಗಿಸುವ ಶಕ್ತಿ ಹೊಂದಿದೆ ಎಂದು ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಬೋಧ ಸ್ವರೂಪಾನಂದಜಿ ಅಭಿಪ್ರಾಯಪಟ್ಟರು.

Vijaya Karnataka 14 Jan 2019, 5:00 am
ಕುಶಾಲನಗರ
Vijaya Karnataka Web patriotic power in message
ಸಂದೇಶಗಳಲ್ಲಿದೆ ದೇಶಪ್ರೇಮಿಯಾಗಿಸುವ ಶಕ್ತಿ


ಸ್ವಾಮಿ ವಿವೇಕಾನಂದರ ಸಂದೇಶ ಯುವಜನತೆಯನ್ನು ಪ್ರಬುದ್ದ ನಾಗರಿಕ, ಅಪ್ರತಿಮ ದೇಶಪ್ರೇಮಿಯಾಗಿಸುವ ಶಕ್ತಿ ಹೊಂದಿದೆ ಎಂದು ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಬೋಧ ಸ್ವರೂಪಾನಂದಜಿ ಅಭಿಪ್ರಾಯಪಟ್ಟರು.

ಗಾಯತ್ರಿ ಸಭಾಂಗಣದಲ್ಲಿ ಟುಲಿಪ್‌ ಟ್ರಸ್ಟ್‌, ವಿಕಾಸ ಜನಸೇವಾ ಟ್ರಸ್ಟ್‌ ಮತ್ತು ಜೀವನದಾರಿ ಟ್ರಸ್ಟ್‌ ಸಹಯೋಗದಲ್ಲಿ ನಡೆದ ವಿವೇಕಾನಂದರ 156ನೇ ಜನ್ಮದಿನಾಚರಣೆ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ವಿವೇಕಾನಂದರ ಆದರ್ಶಗಳು ಯುವಶಕ್ತಿಗೆ ಪ್ರತೀಕ. ಅವರ ತತ್ತ್ವ, ಸಿದ್ಧಾಂತಗಳ ಅಧ್ಯಯನ ಜೀವನ್ಕ ಪಾವನವಾಗಲಿದೆ. ಸರಕಾರಗಳು ಯುವಸಮೂಹದಲ್ಲಿ ವಿವೇಕಾನಂದರ ಜೀವನ ಸಂದೇಶ ಬಿತ್ತರಿಸುವ ಕಾರ್ಯಕ್ರಮ ಹೆಚ್ಚಾಗಿ ಆಯೋಜಿಸಬೇಕು ಎಂದರು.

ಅಧ್ಯಕ್ಷ ತೆ ವಹಿಸಿದ್ದ ಬಿ.ಜಿ.ಅನಂತಶಯನ, ಪ್ರತಿಯೊಬ್ಬರಲ್ಲಿ ಕ್ರಾಂತಿಕಾರಿ ಚಿಂತನೆ ಹೊರಬರಬೇಕಾಗಿದೆ. ದೈವತ್ವ, ಆಧ್ಯಾತ್ಮದ ಬಗ್ಗೆ ಅರಿವು ಪಡೆಯುವುದು ಕಡ್ಡಾಯವಾಗಿದೆ. ನಂಬಿಕೆ ಇದ್ದಲ್ಲಿ ಆತ್ಮಶಕ್ತಿ ಪಡೆಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಕ್ಕಳಿಗೆ ಸಂಸ್ಕಾರಯುತ ಬದುಕು ಸಾಗಿಸಲು ಪೋಷಕರು ಸೂಕ್ತ ಮಾರ್ಗದರ್ಶನ ನೀಡಬೇಕು. ದೈವಸಂಭೂತರಾದ ಸಾಧು, ಸಂತರನ್ನು ಗೌರವಿಸುವ ಮೂಲಕ ದೈವಶಕ್ತಿಯ ಆರಾಧನೆ ಮಾಡಬೇಕು ಎಂದರು.

ಅತಿಥಿಯಾಗಿದ್ದ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಸಾಮಾಜಿಕ ಕಾರ್ಯಕರ್ತ ಎಸ್‌.ಮುರುಗೇಶ್‌ ಮಾತನಾಡಿದರು.

ಅತಿಥಿಗಳಿಗೆ ಟ್ರಸ್ಟ್‌ ನಿಂದ ಗೌರವಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ನಡೆದ ಚರ್ಚಾ, ನಾಟಕ ಮತ್ತು ಚಿತ್ರಕಲೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಟ್ರಸ್ಟ್‌ ಅಧ್ಯಕ್ಷ ಚಂದನ್‌, ಕಾರ್ಯದರ್ಶಿ ಸಹನಾ, ಖಜಾಂಚಿ ಜಗ್ಗೇಶ್‌, ಟ್ರಸ್ಟಿ ನಿರಂಜನ್‌, ವಿಕಾಸ ಜನಸೇವಾ ಟ್ರಸ್ಟ್‌ ಅಧ್ಯಕ್ಷ ರಮೇಶ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ