ಆ್ಯಪ್ನಗರ

ಕೋಳಿಕಾಡಿನಲ್ಲಿ ಅಕ್ರಮ ರೆಸಾರ್ಟ್‌ ನಿರ್ಮಾಣಕ್ಕೆ ಹುನ್ನಾರ: ಆರೋಪ

ತಲಕಾವೇರಿಯ ಕೋಳಿಕಾಡು ಎಂಬಲ್ಲಿ ಅಕ್ರಮವಾಗಿ ರೆಸಾರ್ಟ್‌ ನಿರ್ಮಾಣಕ್ಕೆ ಹುನ್ನಾರ ಮಾಡಲಾಗಿದ್ದು, ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಸ್ಥಳೀಯ ಗ್ರಾಪಂ ಕೈವಾಡವಿದೆ ಎಂದು ತಲಕಾವೇರಿ ಮೂಲ ಸ್ವರೂಪ ರಕ್ಷ ಣಾ ವೇದಿಕೆ ಅನುಮಾನ ವ್ಯಕ್ತಪಡಿಸಿದೆ.

Vijaya Karnataka 17 Aug 2019, 5:00 am
ಮಡಿಕೇರಿ: ತಲಕಾವೇರಿಯ ಕೋಳಿಕಾಡು ಎಂಬಲ್ಲಿ ಅಕ್ರಮವಾಗಿ ರೆಸಾರ್ಟ್‌ ನಿರ್ಮಾಣಕ್ಕೆ ಹುನ್ನಾರ ಮಾಡಲಾಗಿದ್ದು, ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಸ್ಥಳೀಯ ಗ್ರಾಪಂ ಕೈವಾಡವಿದೆ ಎಂದು ತಲಕಾವೇರಿ ಮೂಲ ಸ್ವರೂಪ ರಕ್ಷ ಣಾ ವೇದಿಕೆ ಅನುಮಾನ ವ್ಯಕ್ತಪಡಿಸಿದೆ.
Vijaya Karnataka Web plan to build illegal resort
ಕೋಳಿಕಾಡಿನಲ್ಲಿ ಅಕ್ರಮ ರೆಸಾರ್ಟ್‌ ನಿರ್ಮಾಣಕ್ಕೆ ಹುನ್ನಾರ: ಆರೋಪ


ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಲಕಾವೇರಿ ಮೂಲ ಸ್ವರೂಪ ರಕ್ಷ ಣಾ ವೇದಿಕೆಯ ಸದಸ್ಯ ಉಳ್ಳಿಯಡ ಎಂ ಪೂವಯ್ಯ, ''ಭಾಗಮಂಡಲ ಹೋಬಳಿ ಚೇರಂಗಾಲ ಕೋಳಿಕಾಡು ಗ್ರಾಮದ ಹತ್ತಾರು ಎಕರೆ ಜಾಗದಲ್ಲಿ ನೂತನ ರೆಸಾರ್ಟ್‌ ನಿರ್ಮಾಣಗೊಳ್ಳುತ್ತಿದ್ದು, ಅನುಮತಿ ಪಡೆಯದೆ ಅಕ್ರಮ ಕೃತ್ಯಕ್ಕೆ ಇಳಿದಿದ್ದರೆ ಕಾನೂನಿನಡಿ ಅಪರಾಧವಾಗುತ್ತದೆ. ಸುಮಾರು 2-3 ತಿಂಗಳಿನಿಂದ ನಿರಂತರವಾಗಿ ಕಾಮಗಾರಿ ನಡೆಯುತ್ತಿದ್ದರೂ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷ ಕರು, ತಹಸೀಲ್ದಾರರು, ಅರಣ್ಯಾಧಿಕಾರಿಗಳು ಮೌನ ವಹಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ,'' ಎಂದರು.

''ಎರಡು ಬೃಹತ್‌ ಫುಟ್‌ಬಾಲ್‌ ಮೈದಾನದಷ್ಟು ಜಾಗವನ್ನು ಮಟ್ಟ ಮಾಡಲು, ಪ್ರತ್ಯೇಕವಾಗಿ ಬೃಹತ್‌ ಕೆರೆ ನಿರ್ಮಿಸಲು, ಕಾಟೇಜ್‌ ನಿರ್ಮಿಸಲು ಸಾಕಷ್ಟು ಬೆಟ್ಟಗಳನ್ನು ಕೊರೆದಿದ್ದಾರೆ. ಇದಕ್ಕೆ ಪರಿಸರ ಇಲಾಖೆಯ ಅನುಮತಿ ಇದೆಯೇ,'' ಎಂದು ಪ್ರಶ್ನಿಸಿದ ಅವರು, ''ಕಾನೂನನ್ನು ಗೌರವಿಸಬೇಕಾಗಿರುವ ಸರಕಾರಿ ನೌಕರರೇ ಕಾನೂನು ಬಾಹಿರ ಕೃತ್ಯಕ್ಕೆ ಕೈ ಹಾಕಿರುವುದು ವಿಪರ್ಯಾಸ,'' ಎಂದರು.

''ಪವಿತ್ರ ಸ್ಥಾನದ ಸಮೀಪದಲ್ಲೇ ವ್ಯಾಪಾರೋದ್ಯಮಗಳ ಮೂಲಕ ಪುಣ್ಯಕ್ಷೇತ್ರವನ್ನು ವ್ಯಾಪಾರೀಕರಣಗೊಳಿಸಲು ಹವಣಿಸಿರುವ ಕಾರ್ಯ ಖಂಡನೀಯ. ಜೆಸಿಬಿ ಯಂತ್ರ ಬಳಸಿ ಮಣ್ಣು ಕೊರೆದು ಕಟ್ಟಡ ನಿರ್ಮಿಸುವುದರಿಂದ ಮುಂದೆ ಶಿಖರವೇ ಕುಸಿಯುವ ಸಾಧ್ಯತೆಯೂ ಇದೆ. ಇದರಿಂದ ಬ್ರಹ್ಮಕುಂಡಿಕೆ ಸೇರಿದಂತೆ ತಲಕಾವೇರಿಯ ಪವಿತ್ರ ತೀರ್ಥ ಕೇಂದ್ರಕ್ಕೆ ಅಪಾಯ ಬಂದೊದಗುತ್ತದೆ. ಭಕ್ತಾದಿಗಳ ಎಲ್ಲಾ ಪ್ರಶ್ನೆಗಳಿಗೂ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟವರು ಉತ್ತರಿಸಬೇಕು,'' ಎಂದು ಒತ್ತಾಯಿಸಿದರು.

''ಅಕ್ರಮ ಕೃತ್ಯಕ್ಕೆ ಕುಮ್ಮಕ್ಕು ನೀಡಿರಬಹುದಾದ ಜವಾಬ್ದಾರಿಯುತ ಸ್ಥಾನದಲ್ಲಿರುವವರ ವಿರುದ್ಧ ಕಠಿಣ ಶಿಸ್ತು ಕ್ರಮ ವಹಿಸಬೇಕು. ಶೀಘ್ರದಲ್ಲೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದೇ ಇದ್ದಲ್ಲಿ ಪ್ರತಿಭಟನೆ, ಸತ್ಯಾಗ್ರಹ ಮತ್ತು ನ್ಯಾಯಾಲಯದ ಮೊರೆ ಹೋಗಲಾಗುವುದು,'' ಎಂದು ಎಚ್ಚರಿಸಿದರು.

ವೇದಿಕೆಯ ಸಂಚಾಲಕ ಕೊಕ್ಕಲೆರ ಎ ಕಾರ್ಯಪ್ಪ ಮಾತನಾಡಿ, ''ಭಕ್ತರ ನಂಬಿಕೆಗೆ ದ್ರೋಹವೆಸಗಿ ಅಕ್ಷ ಮ್ಯ ಅಪರಾಧ ಎಸಗಿರುವವರ ವಿರುದ್ಧ ತನಿಖೆಗೆ ಆದೇಶಿಸಿದರೆ ಸಾಲದು, ಕಾಮಗಾರಿ ಸ್ಥಗಿತಗೊಳಿಸಿ ಕಠಿಣ ಕ್ರಮಕ್ಕೆ ಮುಂದಾಗಬೇಕು,'' ಎಂದು ಆಗ್ರಹಿಸಿದರು. ವೇದಿಕೆಯ ಸದಸ್ಯರಾದ ಪುಡಿಯಂಡ ಮುತ್ತಣ್ಣ, ಮಣವಟ್ಟಿರ ದೊರೆ ಸೋಮಣ್ಣ, ಮಣವಟ್ಟಿರ ಪಾಪು ಚಂಗಪ್ಪ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ