ಆ್ಯಪ್ನಗರ

ಕಾಫಿ ಬೆಳೆಗಾರನ ಕುಟುಂಬಕ್ಕೆ ಪರಿಹಾರ ಒದಗಿಸಿ

ಸಾಲ ಭಾದೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಕಾಫಿ ಬೆಳೆಗಾರ ನಲ್ಲೂರು ಗ್ರಾಮದ ಕೊಟ್ಟಂಗಡ ದಿನೇಶ್ ಕುಟುಂಬಕ್ಕೆ ಸರಕಾರ ಕೂಡಲೇ ಪರಿಹಾರ ಒದಗಿಸಬೇಕೆಂದು ಜಿಲ್ಲಾ ರೈತ ಸಂಘ ಆಗ್ರಹಿಸಿದೆ.

ವಿಕ ಸುದ್ದಿಲೋಕ 25 Mar 2016, 4:34 am
ಗೋಣಿಕೊಪ್ಪಲು: ಸಾಲ ಭಾದೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಕಾಫಿ ಬೆಳೆಗಾರ ನಲ್ಲೂರು ಗ್ರಾಮದ ಕೊಟ್ಟಂಗಡ ದಿನೇಶ್ ಕುಟುಂಬಕ್ಕೆ ಸರಕಾರ ಕೂಡಲೇ ಪರಿಹಾರ ಒದಗಿಸಬೇಕೆಂದು ಜಿಲ್ಲಾ ರೈತ ಸಂಘ ಆಗ್ರಹಿಸಿದೆ. ಕಾರ್ಮಾಡು ಗ್ರಾಮದ ಮೃತ ದಿನೇಶ್ ಕುಟುಂಬದ ಪತ್ನಿ ಶೋಭಾರನ್ನು ಜಿಲ್ಲಾ ರೈತ ಸಂಘ ಭೇಟಿ ಮಾಡಿ ಸಾಂತ್ವನ ಹೇಳಿತು.
Vijaya Karnataka Web provide compensation to the family of coffee farmers
ಕಾಫಿ ಬೆಳೆಗಾರನ ಕುಟುಂಬಕ್ಕೆ ಪರಿಹಾರ ಒದಗಿಸಿ

ಈ ಸಂದರ್ಭ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಸುಜಾಯ್ ಬೋಪಯ್ಯ, ಮೃತ ದಿನೇಶ್ ಕೇವಲ ಒಂದು ಎಕರೆ ಆಸ್ತಿ ಹೊಂದಿದ್ದು, ಬಡ ರೈತನಾಗಿ ಜೀವನ ಸಾಗಿಸುತ್ತಿದ್ದ. ಇತ್ತೀಚೆಗೆ ಸ್ಥಳೀಯ ಬ್ಯಾಂಕ್ ಹಾಗೂ ತನ್ನ ಒಡವೆಗಳನ್ನು ಖಾಸಗಿ ಸಂಸ್ಥೆಯಲ್ಲಿ ಅಡವಿಟ್ಟು ತೊಂದರೆಯಲ್ಲಿ ಸಿಲುಕಿದ್ದ. ಸ್ಥಳೀಯ ಬ್ಯಾಂಕ್ ದಿನೇಶ್ ಪಡೆದ ಸಾಲವನ್ನು ಮರುಪಾವತಿ ಮಾಡುವಂತೆ ನೋಟೀಸ್ ಜಾರಿ ಮಾಡಿತ್ತು. ತನ್ನ ಸುತ್ತ ಮುತ್ತ ಆತ್ಮೀಯರಿಂದ ಸಾಲ ಪಡೆದು ಮರುಪಾವತಿಸಲಾಗದೆ ತೊಂದರೆಯಲ್ಲಿ ಸಿಲುಕಿ ನೇಣಿಗೆ ಶರಣಾಗಿದ್ದಾನೆ. ಕೂಡಲೇ ಸರಕಾರ ಈತನ ಕುಟುಂಬದ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದರು.
ರೈತ ಮುಖಂಡ ಚಿಮ್ಮಂಗಡ ಗಣೇಶ್ ಮಾತನಾಡಿ, ದಿನೇಶ್ ನೇಣಿಗೆ ಶರಣಾದ ಸಂದರ್ಭ ಆತನ ಪತ್ನಿ ನೋವಿನ ಮಡುವಿನಲ್ಲಿದ್ದಳು. ಈ ಸಂದರ್ಭ ಪೊಲೀಸರಿಗೆ ಸರಿಯಾದ ಮಾಹಿತಿ ನೀಡಲು ತೊಂದರೆಯಾಗಿತ್ತು. ಇದೀಗ ಚೇತರಿಸಿಕೊಂಡಿರುವ ದಿನೇಶ್‌ನ ಪತ್ನಿ ಶೋಭಾಳ ಮರು ಹೇಳಿಕೆಯನ್ನು ಪಡೆದು ರೈತರಿಗೆ ಆದ ತೊಂದರೆಯನ್ನು ನೀಗಿಸಲು ಪೊಲೀಸ್ ಇಲಾಖೆ ಹಾಗೂ ರೆವಿನ್ಯೂ ಇಲಾಖೆ ಕ್ರಮಕೈಗೊಳ್ಳಬೇಕು ಎಂದರು.
ಜಿಲ್ಲಾ ಹಿತ ರಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಅರಮಾಣಮಾಡ ಸತೀಶ್ ದೇವಯ್ಯ ಮಾತನಾಡಿ, ಸಾಲ ಭಾದೆಯಿಂದ ರೈತ ಮೃತಪಟ್ಟಿದ್ದಾನೆ ಎಂಬುದನ್ನು ಪೊಲೀಸರು ಪ್ರಥಮ ವರದಿಯಲ್ಲಿ ಕೈಬಿಡಲಾಗಿದೆ. ಇದೀಗ ಮೃತ ಕುಟುಂಬದವರಿಂದ ಮರು ಹೇಳಿಕೆ ಪಡೆದು ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಲು ಮನವಿ ಮಾಡಿದರು.
ಗಾನಂಗಡ ಸುಧಾ, ಕಳ್ಳಂಗಡ ಶಾಂತು, ಸುರಚಿಮ್ಮಂಗಡ ಗಣೇಶ್, ಮಚ್ಚಮಾಡ ರಂಜಿ, ಜಿಲ್ಲಾ ಹಿತರಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ, ಸ್ಥಳೀಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪೋರಂಗಡ ಪವನ್ ಚಿಟ್ಟಿಯಪ್ಪ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ