ಆ್ಯಪ್ನಗರ

ಪುಷ್ಪಗಿರಿಯ ಕೋಟೆ ಬೆಟ್ಟದಲ್ಲಿ ನೀಲಿ ಕುರಿಂಜಿ ಪುಷ್ಟ: 7 ವರ್ಷದ ಬಳಿಕ ಅರಳಿ ಜನಾಕರ್ಷಿಸುತ್ತಿರುವ ವಿಶಿಷ್ಟ ಹೂವು

​ಕುರಿಂಜಿ ಹೂವಿನ ಗಿಡ ಮೂವತ್ತರಿಂದ ಅರವತ್ತು ಸೆಂಟಿ ಮೀಟರ್‌ ಉದ್ದ ಬೆಳೆಯುತ್ತದೆ. ಹೂವು ಅರಳಿದಾಗ ಇದರ ಸೌಂದರ್ಯ ಸವಿಯಲು ಪ್ರಪಂಚದ ನಾನಾ ಭಾಗಗಳಿಂದಲೂ ಪರಿಸರಾಸಕ್ತರು ಬರುತ್ತಾರೆ. ಈ ಹೂವು ಕೊನೆಯದಾಗಿ 2006ರಲ್ಲಿ ಕೇರಳ ಹಾಗೂ ತಮಿಳುನಾಡಿನಲ್ಲಿ ಅರಳಿತ್ತು. 2018ರಲ್ಲಿ ಕುಮಾರಪರ್ವತದಲ್ಲೂ ಅರಳಿ ಗಮನ ಸೆಳೆದಿತ್ತು.

Vijaya Karnataka Web 15 Sep 2020, 9:52 pm
ತೇಲಪಂಡ ಕವನ್‌ ಕಾರ್ಯಪ್ಪ, ಸೋಮವಾರಪೇಟೆ
Vijaya Karnataka Web ಪುಷ್ಪ
ಪುಷ್ಪ


ಪುಷ್ಪಗಿರಿ ವ್ಯಾಪ್ತಿಯ ಕೋಟೆಬೆಟ್ಟ ಈಗ ನೀಲಿ ಬಣ್ಣ ಬಳಿದ ದೊಡ್ಡ ಗೋಡೆಯಂತೆ ಕಂಡುಬರುತ್ತಿದೆ.

7 ವರ್ಷಗಳ ನಂತರ ಇಲ್ಲಿ ಅಪರೂಪದ ಕುರಿಂಜಿ ಹೂವು ಅರಳಿರುವುದೇ ಇದಕ್ಕೆ ಕಾರಣ. ನಿಸರ್ಗದ ಕೌತುಕವನ್ನು ಸವಿಯಲು ಪರಿಸರ ಪ್ರಿಯರು ಕೋಟೆ ಬೆಟ್ಟದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.

ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಮಾತ್ರ ಕಾಣಸಿಗುವ ಅಪರೂಪದ ಕುರಿಂಜಿ ಹೂವು ಕೊಡಗಿನ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಕೋಟೆ ಬೆಟ್ಟ, ಕುಮಾರ ಪರ್ವತದಲ್ಲಿ ಅರಳುತ್ತದೆ. ಗುರ್ಗಿ ಎಂದೂ ಇದನ್ನು ಕರೆಯುತ್ತಾರೆ. ತಿಂಗಳುಗಳ ಕಾಲ ಸೌಂದರ್ಯ ಸವಿಯಬಹುದಾಗಿದೆ. ಈ ಹೂವಿಗೆ ಧಾರ್ಮಿಕವಾಗಿಯೂ ಇತಿಹಾಸವಿದೆ. ಪ್ರೇಮದ ಸಂಕೇತವಾಗಿ 'ಪ್ರೇಮದ ಹೂ' ಎಂದೂ ಕರೆಯುತ್ತಾರೆ.

2018ರಲ್ಲಿ 12 ವರ್ಷಕ್ಕೊಮ್ಮೆ ಅರಳುವ ಕುರಿಂಜಿ ಕುಮಾರ ಪರ್ವತ ಪ್ರದೇಶದಲ್ಲಿಅರಳಿ ನಿಂತು ಆಕರ್ಷಕವಾಗಿತ್ತು. ಈಗ ಅರಳಿರುವ ಕುರಿಂಜಿ 7 ವರ್ಷಕ್ಕೊಮ್ಮೆ ಅರಳುವ ಹೂವಾಗಿದೆ. ರಸ್ತೆ ಬದಿಗಳಲ್ಲಿ ಮತ್ತು ಬೆಟ್ಟದ ಮೈದಾನ ಪ್ರದೇಶದಲ್ಲಿ ಅರಳಿದ್ದು, ಜನಾಕರ್ಷಕವಾಗಿದೆ.
ಶಶಿ, ಡಿಆರ್‌ಎಫ್‌ಒ, ಪುಷ್ಪಗಿರಿ ವೈಲ್ಡ್‌ಲೈಫ್‌

ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿ ಸಮತೋಲನವಾಗಿದ್ದಾಗ ಮಾತ್ರ ಈ ಹೂ ಅರಳುತ್ತದೆ ಎನ್ನುತ್ತಾರೆ ಹಿರಿಯರು. ಈ ಹೂವು ಅರಳಿ ನಿಂತಾಗ ಕಾಂಡಗಳಲ್ಲಿ ಔಷಧೀಯ ಗುಣಗಳಿರುವುದರಿಂದ ವಿವಿಧ ಕಾಯಿಲೆಗೂ ಬಳಸುತ್ತಾರೆ.

ಇದರ ವೈಜ್ಞಾನಿಕ ಹೆಸರು ಸ್ಟೋರಬಿಲಂಥೆಸ್‌ ಕುಂತಿಯಾನ. ನೀಲಗಿರಿ ಬೆಟ್ಟವನ್ನು ಆ ಹೆಸರಿನಲ್ಲಿ ಗುರುತಿಸಲು ಈ ಹೂವೇ ಕಾರಣ. ಕುರಿಂಜಿ ಹೂವು 250 ಜಾತಿಗಳಲ್ಲಿ ಕಂಡು ಬರುತ್ತದೆ. ಈ ಪೈಕಿ 46 ಜಾತಿಯ ಹೂವುಗಳು ಭಾರತದಲ್ಲಿ ಇದೆ. 5, 7, 12, 14, 16 ವರ್ಷಗಳಿಗೆ ಒಮ್ಮೆ ಅರಳುವ ಜಾತಿಗಳೂ ಇದರಲ್ಲಿದೆ.

ಕುಮಾರ ಪರ್ವತದಲ್ಲಿ ಜನರಿಗೆ ಪ್ರವೇಶ ನಿಷೇಧ ಇರುವುದರಿಂದ ಸ್ಥಳಕ್ಕೆ ತೆರಳಿ ನೋಡುವ ಅವಕಾಶವಿಲ್ಲ. 7 ವರ್ಷ ಹಾಗೂ 12 ವರ್ಷಕ್ಕೊಮ್ಮೆ ಅರಳುವ ಕುರಿಂಜಿ ಹೂವಿನ ಸೊಬಗನ್ನು ಸವಿಯಲು ಎಲ್ಲರಿಗೂ ಅನುಕೂಲವಾದರೆ ಸಾಕಷ್ಟು ಪ್ರವಾಸಿಗರು ಈ ಸಮಯದಲ್ಲಿ ಆಗಮಿಸಿ ಸಂಭ್ರಮಿಸಲು ಸಾಧ್ಯ.
ಹಾ.ತಿ. ಜಯಪ್ರಕಾಶ್‌, ಪರಿಸರ ಪ್ರೇಮಿ

ಕುರಿಂಜಿ ಹೂವಿನ ಗಿಡ ಮೂವತ್ತರಿಂದ 60 ಸೆಂಟಿ ಮೀಟರ್‌ ಉದ್ದ ಬೆಳೆಯುತ್ತದೆ. ಹೂವು ಅರಳಿದಾಗ ಇದರ ಸೌಂದರ್ಯ ಸವಿಯಲು ಪ್ರಪಂಚದ ನಾನಾ ಭಾಗಗಳಿಂದಲೂ ಪರಿಸರಾಸಕ್ತರು ಬರುತ್ತಾರೆ. ಈ ಹೂವು ಕೊನೆಯದಾಗಿ 2006ರಲ್ಲಿ ಕೇರಳ ಹಾಗೂ ತಮಿಳುನಾಡಿನಲ್ಲಿ ಅರಳಿತ್ತು. 2018ರಲ್ಲಿ ಕುಮಾರಪರ್ವತದಲ್ಲೂ ಅರಳಿ ಗಮನ ಸೆಳೆದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ