ಆ್ಯಪ್ನಗರ

ಇಲಿ, ಹೆಗ್ಗಣಗಳ ಪಾಲಾಗುತ್ತಿದೆ ಸಂತ್ರಸ್ತರ ಆಹಾರ ಪದಾರ್ಥ !

ಪ್ರಕೃತಿ ವಿಕೋಪ ಸಂತ್ರಸ್ತರಿಗೆ ವಿತರಿಸಲು ಸರಕಾರ ನೀಡಿದ ವಿಶೇಷ ಅನ್ನಭಾಗ್ಯ ಯೋಜನೆಯ ಉಚಿತ ಆಹಾರ ಕಿಟ್‌ಗಳು ಗ್ರಾಪಂ ಕೊಠಡಿಯಲ್ಲಿ ಕೊಳೆಯುತ್ತಿದ್ದು, ಇಲಿ, ಹೆಗ್ಗಣಗಳ ಪಾಲಾಗುತ್ತಿದೆ.

Vijaya Karnataka 22 Dec 2018, 5:00 am
ನೆಲ್ಯಹುದಿಕೇರಿ ಗ್ರಾಪಂನಲ್ಲಿ ಕೊಳೆಯುತ್ತಿವೆ ಆಹಾರ ಧಾನ್ಯಗಳು
Vijaya Karnataka Web rat eats to victims food
ಇಲಿ, ಹೆಗ್ಗಣಗಳ ಪಾಲಾಗುತ್ತಿದೆ ಸಂತ್ರಸ್ತರ ಆಹಾರ ಪದಾರ್ಥ !


ಮುಬಾರಕ್‌ ಸಿದ್ದಾಪುರ

ಪ್ರಕೃತಿ ವಿಕೋಪ ಸಂತ್ರಸ್ತರಿಗೆ ವಿತರಿಸಲು ಸರಕಾರ ನೀಡಿದ ವಿಶೇಷ ಅನ್ನಭಾಗ್ಯ ಯೋಜನೆಯ ಉಚಿತ ಆಹಾರ ಕಿಟ್‌ಗಳು ಗ್ರಾಪಂ ಕೊಠಡಿಯಲ್ಲಿ ಕೊಳೆಯುತ್ತಿದ್ದು, ಇಲಿ, ಹೆಗ್ಗಣಗಳ ಪಾಲಾಗುತ್ತಿದೆ.

ಸರಕಾರ ಸಂತ್ರಸ್ತರಿಗೆ ನೀಡಿದ ಕಿಟ್‌ನಲ್ಲಿ 10 ಕೆ.ಜಿ. ಅಕ್ಕಿ, ಒಂದು ಕೆ.ಜಿ. ಸಕ್ಕರೆ, ಒಂದು ಕೆ.ಜಿ. ಉಪ್ಪು, ಒಂದು ಕೆ.ಜಿ. ಬೇಳೆ ಕಾಳು, 1 ಲೀಟರ್‌ ಅಡುಗೆ ಎಣ್ಣೆ ನೀಡಿದ್ದರು. ಆದರೆ ಅವುಗಳನ್ನು ಸಂತ್ರಸ್ತರಿಗೆ ಸಮರ್ಪಕವಾಗಿ ವಿತರಣೆ ಮಾಡದ ಅಧಿಕಾರಿಗಳು ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಕೊಠಡಿಯಲ್ಲಿ ತುಂಬಿದ್ದಾರೆ.

ಹಲವು ದಿನಗಳಿಂದ ಕೊಠಡಿಯಲ್ಲಿ ಆಹಾರ ಪದಾರ್ಥಗಳನ್ನು ಇಟ್ಟಿರುವುದರಿಂದ, ಅವು ಇಲಿ-ಹೆಗ್ಗಣಗಳ ಪಾಲಾಗುತ್ತಿದೆ. ಈ ಬಗ್ಗೆ ಕಂಡು ಕಾಣದಂತೆ ಗ್ರಾಪಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ಬಡ ಕುಟುಂಬಗಳಿಗೆ ವಿತರಣೆಯಾಗಬೇಕಿದ್ದ 171 ಕಿಟ್‌ಗಳು ಪಂಚಾಯಿತಿ ಸಭಾಂಗಣದ ಮೂಲೆ ಸೇರಿದೆ. ಇನ್ನೂ ಸಾಕಷ್ಟು ಅರ್ಹ ಫಲಾನುಭವಿಗಳಿಗೆ ಆಹಾರ ಕಿಟ್‌ಗಳು ತಲುಪಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಕಾವೇರಿ ನದಿ ಪ್ರವಾಹ ಸಂದರ್ಭ ಬಹುತೇಕ ಮನೆಗಳು ಹಾನಿಯಾಗಿದ್ದು, ಹಲವು ಕುಟುಂಬಗಳು ಇನ್ನೂ ಸಂಕಷ್ಟದಲ್ಲಿವೆ. ಕೂಲಿ ಕೆಲಸ ಮಾಡಿ ಜೀವನ ನಡೆಸುವ ಬಡವರಿಗೆ ಆಹಾರ ಕಿಟ್‌ ವಿತರಣೆ ಮಾಡಿಲ್ಲ. ಆಹಾರ ಇಲಾಖೆಯ ನಿರ್ದೇಶನದಂತೆ ಕೆಲವರಿಗೆ ಮಾತ್ರ ವಿತರಣೆಯಾಗಿದೆ. ಗ್ರಾಮದ ಕಡು ಬಡವರ್ಗದ ಜನರಿಗೆ ಆಹಾರ ಕಿಟ್‌ ವಿತರಣೆ ಮಾಡಬೇಕೆಂದು ಸ್ಥಳೀಯರು ಇಲಾಖೆಯನ್ನು ಒತ್ತಾಯಿಸಿದ್ದಾರೆ.

-----------

ಸರಕಾರ ಸಂತ್ರಸ್ತರಿಗೆ ಕೊಟ್ಟಿರುವ ಕಿಟ್‌ಗಳನ್ನು ಜಿಲ್ಲಾಡಳಿತದ ಮೂಲಕ ಸಮರ್ಪಕವಾಗಿ ವಿತರಣೆಯಾಗದೆ, ಅಲ್ಲಲ್ಲಿ ಕೊಳೆಯುತ್ತಿದೆ. ಶೇಖರಿಸಿ ಇಡಲಾಗಿರುವ ಕಿಟ್‌ಗಳನ್ನು ಆದಷ್ಟು ಬೇಗ ಕಡುಬಡ ಕುಟುಂಬಗಳಿಗೆ ವಿತರಣೆ ಮಾಡಬೇಕು.
- ವಸಂತ್‌ಕುಮಾರ್‌, ಹೊಸಮನೆ ನೆಲ್ಯಹುದಿಕೇರಿ.

-----------

ಗ್ರಾಮ ಪಂಚಾಯಿತಿಗೆ 1242 ಕಿಟ್‌ ಬಂದಿದೆ. ಇಲಾಖೆಯಿಂದ ಬಂದ ಮಾಹಿತಿ ಪಟ್ಟಿಯಲ್ಲಿರುವ 1071 ಕುಟುಂಬಗಳಿಗೆ ಮಾತ್ರ ಕಿಟ್‌ ನೀಡಲಾಗಿದೆ. ಇನ್ನೂ 171 ಉಳಿದ ಕಿಟ್‌ ಆಹಾರ ಇಲಾಖೆ ನಿರ್ದೇಶನದಂತೆ ವಾಪಸ್‌ ತೆಗೆದುಕೊಂಡು ಹೋಗಲು ಪಂಚಾಯಿತಿಯಿಂದ ಪತ್ರ ಕಳಿಸಲಾಗಿದೆ.
- ನಂಜುಂಡಸ್ವಾಮಿ, ಪಿಡಿಒ ನೆಲ್ಯಹುದಿಕೇರಿ ಗ್ರಾಪಂ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ