ಆ್ಯಪ್ನಗರ

ಬೀದಿ ನಾಯಿ ದಾಳಿ: ವೃದ್ಧೆಗೆ ಗಾಯ

ಪಟ್ಟಣ ಸಮೀಪದ ಟಿಬೆಟಿಯನ್‌ ಕ್ಯಾಂಪ್‌ನಲ್ಲಿ ವೃದ್ಧ ಮಹಿಳೆ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿವೆ.

Vijaya Karnataka 25 Jul 2019, 8:57 pm
ಕುಶಾಲನಗರ (ಕೊಡಗು ಜಿಲ್ಲೆ)
Vijaya Karnataka Web street dog attack woman injured
ಬೀದಿ ನಾಯಿ ದಾಳಿ: ವೃದ್ಧೆಗೆ ಗಾಯ


ಪಟ್ಟಣ ಸಮೀಪದ ಟಿಬೆಟಿಯನ್‌ ಕ್ಯಾಂಪ್‌ನಲ್ಲಿ ವೃದ್ಧ ಮಹಿಳೆ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿವೆ.

ಕಲ್ಲೂರು ಗ್ರಾಮದ ದೇವಕಿ (60) ಗಾಯಾಳು. ಬುಧವಾರ ಬೆಳಗ್ಗೆ ಟಿಬೆಟಿಯನ್‌ ಕ್ಯಾಂಪ್‌ನಲ್ಲಿರುವ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳುವ ಸಂದರ್ಭ ರಸ್ತೆಯಲ್ಲಿದ್ದ 5ಕ್ಕೂ ಹೆಚ್ಚು ಬೀದಿ ನಾಯಿಗಳು ಏಕಾಏಕಿ ಅವರ ಮೇಲೆ ಎರಗಿವೆ. ಕೈ, ಕಾಲು ಮತ್ತು ತೊಡೆಯ ಭಾಗಗಳನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ. ಸ್ಥಳೀಯರು ಆಗಮಿಸಿ ನಾಯಿಗಳನ್ನು ಓಡಿಸಿ ಗಾಯಾಳು ವೃದ್ಧೆಯನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆಗೆ ದಾಖಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ