ಆ್ಯಪ್ನಗರ

45ನೇ ದಿನವೂ ಮುಂದುವರಿದ ಧರಣಿ

ಪೊನ್ನಂಪೇಟೆ ತಾಲೂಕು ಪುನರ್ ರಚನೆಗೆ ಆಗ್ರಹಿಸಿ 45ನೇ ದಿನದ ಪ್ರತಿಭಟನೆ ಸತ್ಯಾಗ್ರಹಕ್ಕೆ ವಿವಿಧ ಸಂಘಟನೆಯ ನೂರಾರು ಜನರು ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.

Vijaya Karnataka 16 Dec 2017, 5:15 am
ಶ್ರೀಮಂಗಲ: ಪೊನ್ನಂಪೇಟೆ ತಾಲೂಕು ಪುನರ್ ರಚನೆಗೆ ಆಗ್ರಹಿಸಿ 45ನೇ ದಿನದ ಪ್ರತಿಭಟನೆ ಸತ್ಯಾಗ್ರಹಕ್ಕೆ ವಿವಿಧ ಸಂಘಟನೆಯ ನೂರಾರು ಜನರು ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.
Vijaya Karnataka Web the 45th day is a continuous protest
45ನೇ ದಿನವೂ ಮುಂದುವರಿದ ಧರಣಿ


ಬೆಳ್ಳೂರು, ಹರಿಹರ ಗ್ರಾಮದ ಮುಕ್ಕಾಟಿರ ಕುಟುಂಬಸ್ಥರು, ಪೊನ್ನಂಪೇಟೆ ಸಮೀಪ ಹಳ್ಳಿಗಟ್ಟು ಬದರ್ ಜುಮಾ ಮಸೀದಿ, ಪೊನ್ನಂಪೇಟೆಯ ಶಾಪಿ ಜುಮಾ ಮಸೀದಿ, ಕಾಟ್ರಕೊಲ್ಲಿಯ ಮೊಹಿದ್ದೀನ್ ಜುಮಾ ಮಸೀದಿ, ಪೊನ್ನಂಪೇಟೆಯ ಹನಾಫಿ ಜಾಮಿಯಾ ಮಸೀದಿ ವತಿಯಿಂದ ಪ್ರತಿಭಟನೆಗೆ ಬೆಂಬಲ ವ್ಯಕ್ತವಾಗಿದೆ.

ಪೊನ್ನಂಪೇಟೆಯ ಶ್ರೀರಾಮಕಷ್ಣ ಆಶ್ರಮದಿಂದ ಸಂಘಟನೆಯ ವತಿಯಿಂದ ಮೆರವಣಿಗೆಯಲ್ಲಿ ಆಗಮಿಸಿದ ಪಧಾದಿಕಾರಿಗಳು ಮತ್ತು ಸದಸ್ಯರು ಘೋಷಣೆ ಕೂಗಿದರು. ಬಳಿಕ ತಾಲೂಕು ರಚನೆಗಾಗಿ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಆಗಮಿಸಿದರು.

ಪೊನ್ನಂಪೇಟೆ ಪಟ್ಟಣದಲ್ಲಿ ವ್ಯಾಪಾರ ನಡೆಸುತ್ತಿರುವ ಮುಸ್ಲಿಂ ಸಮುದಾಯದವರು ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಗಾಂಧಿ ಪ್ರತಿಮೆ ಎದುರು ಮಾನವ ಸರಪಳಿ ರಚನೆ ಮಾಡಿ ರಸ್ತೆ ತಡೆ ನಡೆಸಿದರು. ಜಿಲ್ಲಾ ವಕ್ಫ್ ಮಂಡಳಿಯ ಉಪಧ್ಯಕ್ಷ ಎರ್ಮು ಹಾಜಿ, ತಾಲೂಕು ಹೋರಾಟ ಸಮಿತಿಯ ಕಾರ್ಯಧ್ಯಕ್ಷ ಅರುಣ್ ಮಾಚಯ್ಯ, ತಾ.ಪಂ. ಮಾಜಿ ಉಪಾಧ್ಯಕ್ಷ ದಯಾ ಚಂಗಪ್ಪ, ಮುಕ್ಕಾಟಿರ ಕುಟುಂಬದ ಅದ್ಯಕ್ಷ ಉತ್ತಯ್ಯ, ಮಾದಪ್ಪ ಪಾಲ್ಗೊಂಡು ತಾಲೂಕು ರಚನೆಗೆ ಒತ್ತಾಯಿಸಿದರು.

ಹಳ್ಳಿಗಟ್ಟು ಬದರ್ ಜುಮಾ ಮಸೀದಿಯ ಅಧ್ಯಕ್ಷ ಅಹಮ್ಮದ್, ಕಾರ್ಯದರ್ಶಿ ಸಿ.ಕೆ. ಅಬ್ದುಲ್ಲಾ, ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯ ಸಿ.ಎ. ಅಹಮ್ಮದ್, ಕಾರ್ಯದರ್ಶಿ ಕೆ. ಅಹಮ್ಮದ್, ಮಾಜಿ ಗ್ರಾ.ಪಂ. ಅಧ್ಯಕ್ಷ ಪಿ.ಎ ಅಜೀಜ್, ಕಾಟ್ರಕೊಲ್ಲಿಯ ಮೊಹಿದ್ದೀನ್ ಜುಮಾ ಮಸೀದಿಯ ಅದ್ಯಕ್ಷ ಎಂ.ಎ ಆಲಿ, ಕಾರ್ಯ ದರ್ಶಿ ಆಲೀರ ಅಬ್ದುಲ್ಲಾ, ಮಾಜಿ ಅಧ್ಯಕ್ಷ ಹುಸೈನ್, ಗ್ರಾ.ಪಂ. ಉಪಾಧ್ಯಕ್ಷ ಅಜೀಜ್ ಎ.ಎ, ಪೊನ್ನಂಪೇಟೆ ಹನಾಫಿ ಜಮೀಯಾ ಮಸೀದಿ ಯ ಅದ್ಯಕ್ಷ ಮೊಹಿಸಿನ್, ಕಾರ್ಯದರ್ಶಿ ಎಂ.ಜಿ ಫಿರ್, ಆತಾವುಲ್ಲಾ, ಅಬ್ದುಲ್ ಮನ್ನನ್, ಸಲೀಂ, ಸಾಧಿಕ್ ಹಾಜರಿದ್ದರು.

19ಕ್ಕೆ ಬೆಂಬಲ: ಸಿ.ಪಿ.ಎಂ ಪಕ್ಷದಿಂದ ತಾಲೂಕು ಹೋರಾಟಕ್ಕೆ ಬೆಂಬಲ ನೀಡಿ ಡಿ.19ರ ಧರಣಿ ಸತ್ಯಾಗ್ರಹ ದಲ್ಲಿ ಪಾಲ್ಗೊಳ್ಳುವುದಾಗಿ ಪಕ್ಷದ ಮುಖಂಡರಾದ ದುರ್ಗಾ ಪ್ರಸಾದ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ