Please enable javascript.ರಾಜ್ಯದಲ್ಲಿ ಕ್ರಿಮಿನಲ್ ಆಡಳಿತ: ಆರೋಪ - The criminal regime, accused of - Vijay Karnataka

ರಾಜ್ಯದಲ್ಲಿ ಕ್ರಿಮಿನಲ್ ಆಡಳಿತ: ಆರೋಪ

ವಿಕ ಸುದ್ದಿಲೋಕ 11 Jul 2016, 5:15 am
Subscribe

ಕೊಡಗಿನಲ್ಲಿ ಕಾರ್ಮಿಕರ ಕೊರತೆ ಹಿನ್ನ್ನೆಲೆಯಲ್ಲಿ ಅಸ್ಸಾಮಿಗಳೇಂದು ಬಂದು ನೆಲೆಸುತ್ತಿರುವ ಬಾಂಗ್ಲಾ ದೇಶಿಕರ ಬಗ್ಗೆ ತೀವ್ರ ನಿಗಾ ವಹಿಸದೆ ಹೋದರೆ ಕೊಡಗು ಜಿಲ್ಲೆಗೆ ಮಾತ್ರವಲ್ಲದೆ, ದೇಶಕ್ಕೂ ಗಂಡಾಂತರವಿದೆ ಎಂದು ಶಾಸಕ ಸಿ.ಟಿ.ರವಿ ಎಚ್ಚರಿಸಿದರು.

the criminal regime accused of
ರಾಜ್ಯದಲ್ಲಿ ಕ್ರಿಮಿನಲ್ ಆಡಳಿತ: ಆರೋಪ
ವಿರಾಜಪೇಟೆ: ಕೊಡಗಿನಲ್ಲಿ ಕಾರ್ಮಿಕರ ಕೊರತೆ ಹಿನ್ನ್ನೆಲೆಯಲ್ಲಿ ಅಸ್ಸಾಮಿಗಳೇಂದು ಬಂದು ನೆಲೆಸುತ್ತಿರುವ ಬಾಂಗ್ಲಾ ದೇಶಿಕರ ಬಗ್ಗೆ ತೀವ್ರ ನಿಗಾ ವಹಿಸದೆ ಹೋದರೆ ಕೊಡಗು ಜಿಲ್ಲೆಗೆ ಮಾತ್ರವಲ್ಲದೆ, ದೇಶಕ್ಕೂ ಗಂಡಾಂತರವಿದೆ ಎಂದು ಶಾಸಕ ಸಿ.ಟಿ.ರವಿ ಎಚ್ಚರಿಸಿದರು.

ವಿರಾಜಪೇಟೆಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶಾಖಾ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ಕಾರ‌್ಯಕಾರಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಆಂತರಿಕ ಪ್ರಜಾಪ್ರಭುತ್ವಕ್ಕೆ ಒತ್ತು ನೀಡಿದ ಪಕ್ಷ ನಮ್ಮದಾಗಿದ್ದು, ತುರ್ತು ಪರಿಸ್ಥಿತಿ ಕಾಲದಲ್ಲಿ ಪ್ರಜಾ ಪ್ರಭುತ್ವವನ್ನು ಹತ್ತಿಕ್ಕಿದಾಗ ಅದನ್ನು ಉಳಿಸಿದ್ದು ಬಿಜೆಪಿ. ಆದ್ದರಿಂದ ನಾವು ಯಾರ ಧ್ವನಿ ಯನ್ನು ಹತ್ತಿಕ್ಕುವ ಕೆಲಸ ಮಾಡುವುದಿಲ್ಲ. ಯಾವ ವ್ಯಕ್ತಿಯ ಮೇಲೂ ಪಕ್ಷ ಅವಲಂಬಿತವಾಗದೆ, ಸಿದ್ಧಾಂತವನ್ನು ಅವಲಂಬಿಸಿದೆ ಎಂದರು.

ರಾಜ್ಯದಲ್ಲಿ ಅರಾಜಕತೆ : ರಾಜ್ಯದಲ್ಲಿ ಅರಾಜಕತೆ ತಾಂಡವಾಡುತ್ತಿದ್ದು, ಪ್ರಾಮಾಣಿಕ ಅಧಿಕಾರಿಗಳಿಗೆ ಕರ್ತವ್ಯ ನಿಭಾಯಿಸಲು ಆಗುತ್ತಿಲ್ಲ. ಜತೆಗೆ ಬದುಕುವ ಆಸೆಯನ್ನು ಈ ಸರಕಾರ ಉಳಿಸಿಲ್ಲ. ಡಿ.ಕೆ. ರವಿ ಪ್ರಕರಣ ಸೇರಿದಂತೆ ಇಲ್ಲಿವರೆಗೆ ನಡೆದಿರುವ ಅಧಿಕಾರಿಗಳ ಸಾವಿನ ರಹಸ್ಯ ಇನ್ನೂ ಬಯಲಾಗಿಲ್ಲ. ಮೈಸೂರು ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಆಪ್ತ ಮರಿಗೌಡ ಬೆದರಿಕೆ ಹಾಕಿದರೆ ಮುಖ್ಯಮಂತ್ರಿ ರಾಜಿ ಸಂಧಾನ ಮಾಡಲು ತಿಳಿಸುತ್ತಾರೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿತವಲ್ಲ, ಭ್ರಷ್ಟಾಚಾರವಲ್ಲ, ಕ್ರಿಮಿನಲ್ ಆಡಳಿತ ನಡೆಯುತ್ತಿದೆ ಎಂದು ಆರೋಪಿಸಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಇಂದು ಕೊಡಗಿನಲ್ಲಿ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಎಲ್ಲಾ ಕಡೆ ಬಿಜೆಪಿ ಅಧಿಕಾರದಲ್ಲಿದೆ. ಮುಂದೆ ಸಹ ಉತ್ತಮವಾಗಿ ಪಕ್ಷ ಸಂಘಟನೆ ಮಾಡಬೇಕು. ಮುಂದೆ ಸಹ ಸವಾಲಿನ ದಿನಗಳಿವೆ. ನಾವು ಯಡಿಯೂರಪ್ಪ ಅವರ ಸಾರಥ್ಯದಲ್ಲಿ ಗದ್ದೆ ಗೆಲ್ಲುವ ವಿಶ್ವಾಸವಿದ್ದರೂ, ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆಗೆ ಒತ್ತು ನೀಡಬೇಕಿದೆ ಎಂದರು.

ಸರಕಾರ ವಿಫಲ: ಕೊಡಗಿನಲ್ಲಿ ಕಾಡನೆ ಹಾವಳಿಗೆ 16 ಜನ ಪ್ರಾಣ ಕಳೆದುಕೊಂಡರು ಸರಕಾರ ಅದರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಅತ್ಯಂತ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ಎಂ.ಕೆ. ಗಣಪತಿ ಅಧಿಕಾರ ಶಾಹಿಯ ದುರಾಡಳಿತಕ್ಕೆ ಬಲಿಯಾಗಿದ್ದಾರೆ. ಸಚಿವ ಜಾರ್ಜ್ 2008 ರ ಚರ್ಚ್ ದಾಳಿಯ ಪ್ರಕರಣದಲ್ಲಿ ಅವರಿಗೆ ಇನ್ನಿಲ್ಲದ ಮಾಸಿಕ ತೊಂದರೆ ನೀಡಿದ್ದಾರೆ. ಇದೀಗ ಅವರಲ್ಲಿ ಕುಟುಂಬ ಕಲಹ ಇತ್ತು, ಗಣಪತಿಗೆ ಖಿನ್ನತೆ ಇತ್ತು ಎನ್ನುತ್ತಾ ಅವರ ಕುಟುಂಬ ಅಂತರಿಕ ವಿಚಾರಕ್ಕೆ ಕೈ ಹಾಕಿರುವ ಸರಕಾರಕ್ಕೆ ನಾಚಿಕೆಯಾಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ, ಶಾಸಕ ಅಪ್ಪಚ್ಚು ರಂಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ್ ಸಿಂಹ, ಜಿ.ಪಂ ಅಧ್ಯಕ್ಷ ಹರೀಶ್, ಬಿಜೆಪಿ ರಾಜ್ಯ ಸಮಿತಿಯ ಸದಸ್ಯೆ ರೀನಾ ಪ್ರಕಾಶ್, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಮಹಿಳಾ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ಮಡಿಕೇರಿ ತಾಲೂಕು ಅಧ್ಯಕ್ಷ ಕಿಸೋರ್ ಕುಮಾರ್, ಸೋಮವಾರ ಪೇಟೆ ತಾಲೂಕು ಅಧ್ಯಕ್ಷ ಕುಮಾರಪ್ಪ, ವಿರಾಜಪೇಟೆ ವಲಯ ಅಧ್ಯಕ್ಷ ಅರುಣ್ ಭಿಮಯ್ಯ ಇದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ