ಆ್ಯಪ್ನಗರ

ಗ್ರಾಮ ಸಭೆಯಲ್ಲಿ ಮೂಲ ಸೌಕರ‌್ಯದ್ದೇ ಸದ್ದು

ಕಸ ವಿಲೇವಾರಿ ಸೇರಿದಂತೆ ಮೂಲ ಸೌಲಭ್ಯ ಒದಗಿಸಬೇಕು ಎಂದು ಸಾರ್ವಜನಿಕರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರನ್ನು ಮನವಿ ಮಾಡಿದರು.

Vijaya Karnataka Web 27 Nov 2016, 5:15 am
ಗೋಣಿಕೊಪ್ಪಲು: ಕಸ ವಿಲೇವಾರಿ ಸೇರಿದಂತೆ ಮೂಲ ಸೌಲಭ್ಯ ಒದಗಿಸಬೇಕು ಎಂದು ಸಾರ್ವಜನಿಕರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರನ್ನು ಮನವಿ ಮಾಡಿದರು.
Vijaya Karnataka Web the village meeting was the sound of the original saukaryadde
ಗ್ರಾಮ ಸಭೆಯಲ್ಲಿ ಮೂಲ ಸೌಕರ‌್ಯದ್ದೇ ಸದ್ದು


ಸ್ವತಂತ್ರ್ಯ ಹೋರಾಟಗಾರರ ಸ್ಮಾರಕ ಭವನದಲ್ಲಿ ಪಂಚಾಯಿತಿ ಅಧ್ಯಕ್ಷೆ ಸೆಲ್ವಿ ನೇತೃತ್ವದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಪಂಚಾಯಿತಿ ಆಡಳಿತ ದಲ್ಲಿ ಕುಂದು ಕೊರತೆ ಮತ್ತು ನಡೆಯಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತೀವ್ರ ಚರ್ಚೆ ನಡೆಯುವ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯರು ನಮ್ಮ ಗ್ರಾಮದಲ್ಲಿ ಕಸ ವಿಲೇವಾರಿ ಸಮಸ್ಯೆ ಬಗೆಹರಿಸಿ, ಬಸ್ ನಿಲ್ದಾಣ, ಶೌಚಾಲಯ, ಚರಂಡಿ ವ್ಯವಸ್ಥೆ ಕಲ್ಪಸಿ ಎಂದು ಮನವಿ ಮಾಡಿದರು.

ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸುವಂತೆ, ಬಸ್ ನಿಲ್ದಾಣ, ಶೌಚಾಲಯ, ಚರಂಡಿ ವ್ಯವಸ್ಥೆ, ಮಕ್ಕಳ ಕಳ್ಳರ ಬಗ್ಗೆ ಪೊಲೀಸರು ನಿಗಾ ಇಡುವಂತೆ, ಪಟ್ಟಣದ ಶುಚಿತ್ವದ ಬಗ್ಗೆ, ಬೀದಿ ನಾಯಿ ಹಾವಳಿ ತಡೆಗಟ್ಟುವಂತೆ, ವಸತಿ ರಹಿತರಿಗೆ ಮನೆಗಳ ನಿರ್ಮಾಣಕ್ಕೆ ಮುಂದಾಗಲು ಪಂಚಾಯ್ತಿ ರಾಜಕೀಯ ರಹಿತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಕಳ್ಳರ ಆತಂಕ: ಮಕ್ಕಳ ಕಳ್ಳತನದ ಬಗ್ಗೆ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣ ವಾಗಿದೆ. ಪಟ್ಟಣದ ಶಾಲೆಗಳಲ್ಲಿ ಬೆಳಗ್ಗೆ ಮತ್ತು ಸಂಜೆಯ ಸಮಯ ಮಕ್ಕಳ ಭದ್ರತೆಗೆ ಒಬ್ಬ ಪೊಲೀಸ್ ಸಿಬ್ಬಂದಿ ನೇಮಿಸಬೇಕು. ಪಂಚಾಯಿತಿ ಇದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಮಾಜಿ ಅಧ್ಯಕ್ಷೆ ರಾಣಿ ನಾರಾಯಣ್ ಸಭೆಯ ಗಮನಕ್ಕೆ ತಂದರು.

ಪಟ್ಟಣದಲ್ಲಿ ಬಸ್ ನಿಲ್ದಾಣ, ಸೂಕ್ತ ಶೌಚಾಲಯಗಳಿಲ್ಲದೆ ವೃದ್ದರು, ಮಹಿಳೆ ಮತ್ತು ಮಕ್ಕಳಿಗೆ ಸಮಸ್ಯೆ ಉಂಟಾಗುತ್ತಿದೆ. ತಾತ್ಕಾಲಿಕ ಬಸ್ ನಿಲ್ದಾಣವನ್ನು ನಿರ್ಮಿಸಬೇಕು. ಬಸ್ ನಿಲ್ದಾಣ ನಿರ್ಮಿಸುವ ಬಗ್ಗೆ ಪಂಚಾಯ್ತಿ ಸದಸ್ಯರಲ್ಲಿ ಒಗ್ಗಟ್ಟು ಕಾಣದೆ ಗೊಂದಲ ಏರ್ಪಟ್ಟಿದೆ. ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಲು ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಪರಶುರಾಮ್ ಒತ್ತಾಯಿಸಿದರು.

ಬಡಾವಣೆ ನಿರ್ಮಿಸಲು ಅನುಮತಿ ಪಡೆ ಯಲು ಬಂದಾಗ ಬಡಾವಣೆಯ ಕಸ ವಿಲೇವಾರಿ ಜವಾಬ್ದಾರಿಯನ್ನು ಬಡಾವಣೆ ಮಾಲೀಕರಿಗೆ ಒಪ್ಪಿಸಬೇಕು. ತಮ್ಮ ಮನೆಯ ಕಸಗಳನ್ನು ತಾವೆ ಸುಟ್ಟು ಹಾಕುವ ಮೂಲಕ ಕಸದ ಸಮಸ್ಯೆ ಬಗೆಹರಿಸಲು ಸಹಕರಿಸಬೇಕು ಎಂದು ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಸಭೆಯಲ್ಲಿ ಚರ್ಚಿಸಿದರು.

ಹಕ್ಕು ಪತ್ರ ನೀಡಿ: 32 ವರ್ಷಗಳಿಂದ 198 ಮನೆಗಳಿಗೆ ಹಕ್ಕು ಪತ್ರ ನೀಡಲು ಪಂಚಾಯಿತಿ ಮುಂದಾಗಿಲ್ಲ. ಈ ಬಗ್ಗೆ ಗಮನ ಹರಿಸಿ, ಹಕ್ಕು ಪತ್ರ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ನಾರಾಯಣ ಸ್ವಾಮಿ ನಾಯ್ಡು ಒತ್ತಾಯಿಸಿದರು.
ಪಟ್ಟಣದ ಅಭಿವೃದ್ದಿಗೆ ಸರಕಾರದಿಂದ ಅನುದಾನವನ್ನು ಸಮರ್ಪಕವಾಗಿ ಬಳಸಿ ಅಭಿವೃದ್ದಿಗೆ ಮುಂದಾಗಬೇಕು. ಪಂಚಾಯಿತಿ ಅಧ್ಯಕ್ಷರು ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಬೇಕು. ವಾರ್ಡ್‌ಗಳಲ್ಲಿ ನೀರಿನ ಅಭಾವ ಎದುರಾಗಿದೆ. ವಿದ್ಯುತ್ ಕೊರತೆ ಎದುರಾಗಿದೆ. ಈ ಬಗ್ಗೆ ಗಮನ ಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸುನಿಲ್ ಮಾದಪ್ಪ, ಪಿ.ಕೆ. ಪ್ರವೀಣ್ , ಕುಮಾರ ಮಾಹದೇವ್, ಸುಮಿ ಸುಬ್ಬಯ್ಯ ಸಭೆಯಲ್ಲಿ ಕುಂದು ಕೊರತೆ ಮತ್ತು ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದರು.

ಗೊಂದಲ: ಸಭೆ ಪ್ರಾರಂಭಕ್ಕೂ ಮೊದಲೇ ಗ್ರಾಪಂ ಸದಸ್ಯರು ಅವಿಶ್ವಾಸ ವ್ಯಕ್ತವಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸಭೆ ನಡೆಸಿಕೊಡಲು ಮುಂದಾಗದೆ ಕೊನೆಯ ಸ್ಥಾನದಲ್ಲಿ ಕುಳಿತು ಸಭೆಯನ್ನು ಬಹಿಷ್ಕರಿಸಲು ಮುಂದಾದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ಸಭೆಯ ನಡವಳಿಕೆಯ ಬಗ್ಗೆ ಅರಿತು ಸಭೆಗೆ ಮತ್ತು ಗ್ರಾಮಸ್ಥರಿಗೆ ಗೌರವ ನೀಡುವುದನ್ನು ಕಲಿತುಕೊಳ್ಳಬೇಕು ಎಂದು ಗ್ರಾಮಸ್ಥರು ಸದಸ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಪಂಚಾಯಿತಿ ಅಭಿವೃದ್ಧಿಯ ಬಗ್ಗೆ ಗಮನ ಹರಿಸೆ ಗ್ರಾಮಸ್ಥರನ್ನು ಸಭೆಗೆ ಕರೆದು ಅವಮಾನ ಮಾಡುತ್ತೀದ್ದಿರಾ ವೇದಿಕೆಯಲ್ಲಿ ಕುಳಿತು ಸಮಸ್ಯೆ ಪರಿಹರಿಸಿ ಎಂದು ಗ್ರಾಮಸ್ಥರಾದ ಕೇಶವ ಕಾಮತ್, ಸುನಿಲ್ ಮಾದಪ್ಪ ಆಗ್ರಹಿಸಿದರು. ಇವರ ಒತ್ತಾಯಕ್ಕೆ ಮಣಿದು ವೇದಿಕೆಯಲ್ಲಿ ಕುಳಿತುಕೊಂಡ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷರ ವಿರುದ್ಧ ಆರೋಪಗಳನ್ನು ಮುಂದಿಟ್ಟರು. ಅಧ್ಯಕ್ಷರು ಸದಸ್ಯರಿಗೆ ಗೌರವ ನೀಡುತ್ತಿಲ್ಲ. ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ ಎಂದು ಸಭೆಯಲ್ಲಿ ಸದಸ್ಯರು ಬಿ.ಎನ್. ಪ್ರಕಾಶ್, ಮುರುಗ, ಸೋಮಣ್ಣ, ಪ್ರಭಾವತಿ, ಮಂಜುಳ, ಧ್ಯಾನ್ ಸುಬ್ಬಯ್ಯ ರಾಜೇಶ್ ಪ್ರಮೋದ್ ಗಣಪತಿ ಗಮನಕ್ಕೆ ತಂದರು.
ಸಭೆಯಲ್ಲಿ ಕೆ.ಪಿ. ಬೋಪಣ್ಣ, ರತಿ ಅಚ್ಚಪ್ಪ, ಸುರೇಶ್ ರೈ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ