ಆ್ಯಪ್ನಗರ

ಮನೆಯಲ್ಲಿ ಕಳವು ಮಾಡಿದ್ದವನ ಬಂಧನ

ಕುಟ್ಟ ಪೊಲೀಸ್‌ ಠಾಣಾ ವ್ಯಾಪ್ತಿಯ ತೈಲಾ ಗ್ರಾಮದಲ್ಲಿಚಕ್ಕೇರ ಸುನಿಲ್‌ ಮಂದಪ್ಪ ಎಂಬರವರ ಮನೆ ಬಾಗಿಲು ಒಡೆದು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Vijaya Karnataka Web 9 Sep 2019, 5:00 am
ಮಡಿಕೇರಿ: ಕುಟ್ಟ ಪೊಲೀಸ್‌ ಠಾಣಾ ವ್ಯಾಪ್ತಿಯ ತೈಲಾ ಗ್ರಾಮದಲ್ಲಿಚಕ್ಕೇರ ಸುನಿಲ್‌ ಮಂದಪ್ಪ ಎಂಬರವರ ಮನೆ ಬಾಗಿಲು ಒಡೆದು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅದೇ ಗ್ರಾಮದ ತೀತೀರ ದೇವಯ್ಯ ಆಲಿಯಾಸ್‌ ಬ್ರೌನ್‌ (47) ಬಂಧಿಸಲಾಗಿದೆ. ಬಂಧಿತನಿಂದ ಒಟ್ಟು 4.5 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
Vijaya Karnataka Web thief arrested
ಮನೆಯಲ್ಲಿ ಕಳವು ಮಾಡಿದ್ದವನ ಬಂಧನ


ಆ.8 ರಂದು ಚಕ್ಕೇರ ಸುನೀಲ್‌ ಮಂದಪ್ಪ ಕುಟುಂಬ ಸಮೇತ ಮೈಸೂರಿಗೆ ತೆರಳಿದ್ದ ವೇಳೆಯಲ್ಲಿಆರೋಪಿ ಮನೆಯ ಹಿಂಬಾಗಿಲು ಒಡೆದು ಮನೆಯಲ್ಲಿದ್ದ ಸುಮಾರು 420 ಗ್ರಾಂ ಚಿನ್ನದ ಆಭರಣಗಳನ್ನು ಕಳವು ಮಾಡಿದ್ದ. ಈ ಬಗ್ಗೆ ಕುಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಿಲ್ಲಾಎಸ್‌ಪಿ ಡಾ. ಸುಮನ್‌ ಡಿ.ಪಿ., ವಿರಾಜಪೇಟೆ ಡಿವೈಎಸ್‌ಪಿ ಸಿ.ಟಿ. ಜಯಕುಮಾರ್‌ ಮಾರ್ಗದರ್ಶನದಲ್ಲಿಕುಟ್ಟ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಕುಟ್ಟ ಪೊಲೀಸ್‌ ಠಾಣೆಯ ಸಿಬ್ಬಂದಿ ಎಎಸ್‌ಐ ಮೊಹಿದ್ದೀನ್‌, ದಿನೇಶ್‌, ರಂಜಿತ್‌, ಮಧು, ಕೃಷ್ಣಮೂರ್ತಿ, ಶ್ರೀನಿವಾಸ, ಉದಯ, ಸುಕುಮಾರ ಹಾಗೂ ಗಣಪತಿ ಕಾರ್ಯಾಚರಣೆಯಲ್ಲಿಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ