ಆ್ಯಪ್ನಗರ

ಹಸು ಮೇಲೆ ಹುಲಿ ದಾಳಿ

ತಿತಿಮತಿ ಮರಪಾಲ ಸಮೀಪದ ನರವತ್ತು ಎಸ್ಟೇಟ್‌ ಬಳಿ ಮೇಯುತ್ತಿದ್ದ ಹಸುವೊಂದರ ಮೇಲೆ ಹುಲಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.

Vijaya Karnataka 14 May 2019, 5:00 am
ಗೋಣಿಕೊಪ್ಪಲು: ತಿತಿಮತಿ ಮರಪಾಲ ಸಮೀಪದ ನರವತ್ತು ಎಸ್ಟೇಟ್‌ ಬಳಿ ಮೇಯುತ್ತಿದ್ದ ಹಸುವೊಂದರ ಮೇಲೆ ಹುಲಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.
Vijaya Karnataka Web tiger attack on cow
ಹಸು ಮೇಲೆ ಹುಲಿ ದಾಳಿ


ಸೋಮವಾರ ಮಧ್ಯಾಹ್ನ ಸಮಯದಲ್ಲಿ ಹಸುಗಳನ್ನು ಅಡಕೆ ತೋಟದಲ್ಲಿ ಮಾಲೀಕರು ಮೇಯಲು ಬಿಟ್ಟಿದ್ದರು. ಈ ಸಂದರ್ಭ ಹುಲಿ ಎಕಾಏಕಿ ಹಸುಗಳ ಮೇಲೆ ದಾಳಿ ನಡೆಸಿದೆ.

ಹುಲಿ ದಾಳಿಗೆ ಗಬ್ಬದ ಹಸುವೊಂದು ಗಂಭೀರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದೆ. ನರವತ್ತು ಎಸ್ಟೇಟ್‌ನ ವ್ಯವಸ್ಥಾಪಕ ಡಿ.ಬಿ. ರವಿ ಅವರ ಹಸುಗಳಾಗಿದ್ದು, ನಾಲ್ಕು ಹಸುಗಳನ್ನು ಮೇಯಲು ಬಿಟ್ಟ ಸಂದರ್ಭ ಹುಲಿ ಗಬ್ಬದ ಹಸುವಿನ ಮೇಲೆ ದಾಳಿ ನಡೆಸಿದೆ.

ಹಸು ಮೇಯಿಸುತ್ತಿದ್ದ ವ್ಯಕ್ತಿ ಹುಲಿಯನ್ನು ಕಂಡು ಗಾಬರಿಯಿಂದ ಕಿರುಚಿಕೊಂಡು ಓಡಿ ಹೋಗಿ ಮಾಲೀಕನಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಸ್ಥಳೀಯರು ಬಂದು ಪಟಾಕಿ ಸಿಡಿಸಿದಾಗ ಅಲ್ಲೇ ಅವಿತು ಕುಳಿತ್ತಿದ್ದ ಹುಲಿ ಪಟಾಕಿ ಶಬ್ದಕ್ಕೆ ಓಡಿ ಹೋಗಿದೆ ಎಂದು ಗ್ರಾಪಂ ಸದಸ್ಯ ಎನ್‌.ಎನ್‌. ಅನೂಪ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಗಾಯಗೊಂಡ ಹಸು ಮುಂದಿನ ನಾಲ್ಕೈದು ದಿನದೊಳಗೆ ಕರು ಹಾಕುವ ಸಾಧ್ಯ ಇತ್ತು. ಮಾಲೀಕ ರವಿ ಅವರ ಮಾಹಿತಿ ಪ್ರಕಾರ ಈ ಹಸು ಸುಮಾರು 60 ಸಾವಿರ ರೂಪಾಯಿ ಬೆಲೆ ಬಾಳುತ್ತಿತ್ತು.

ಹುಲಿ ಹಸುವಿನ ಮೇಲೆ ದಾಳಿ ನಡೆಸುತ್ತಿದ್ದ ಸಂದರ್ಭವೇ ಮತ್ತೊಂದು ಬದಿಯಲ್ಲಿ ಸುಮಾರು 35ಕ್ಕೂ ಹೆಚ್ಚು ತೋಟ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಹುಲಿ ದಾಳಿ ನಡೆಸಿದಾಗ ಹಸುಗಳ ಕೂಗಾಟ ಕೇಳಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಅಲ್ಲಿಗೆ ಧಾವಿಸಿದ್ದರು. ಜನರ ಆಗಮನವನ್ನು ಗ್ರಹಿಸಿದ ಹುಲಿ ತೋಟದೊಳಗೆ ಓಡಿ ಹೋಗಿದೆ ಎಂದು ಮಾಲೀಕ ರವಿ ತಿಳಿಸಿದ್ದಾರೆ.

ಸ್ಥಳಕ್ಕೆ ಅರಣ್ಯಾಧಿಕಾರಿ ಶ್ರೀಪತಿ, ವಲಯ ಅರಣ್ಯಾಧಿಕಾರಿ ಅಶೋಕ್‌ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತಿಗೋಡು ವನ್ಯ ಜೀವಿ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಹುಲಿ ಪತ್ತೆಗಾಗಿ ತೋಟದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಗಾಯಗೊಂಡ ಹಸುವಿಗೆ ಪಶುವೈದ್ಯಾಧಿಕಾರಿ ಚಿಕಿತ್ಸೆ ನೀಡಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ