ಆ್ಯಪ್ನಗರ

ಹುಲಿ ದಾಳಿಗೆ ಹಸು ಬಲಿ

ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಬಲಿ ತೆಗೆದುಕೊಂಡಿರುವ ಘಟನೆ ಬುಧವಾರವೂ ತಿತಿಮತಿ ಸಮೀಪದ ನೊಕ್ಯದಲ್ಲಿ ನಡೆದಿದೆ.

Vijaya Karnataka 7 Mar 2019, 5:00 am
ಮುಂದುವರಿದ ವ್ಯಾಘ್ರ ದಾಳಿ: ಆತಂಕದಲ್ಲಿ ಜನತೆ
Vijaya Karnataka Web tiger kills cattle
ಹುಲಿ ದಾಳಿಗೆ ಹಸು ಬಲಿ


ಗೋಣಿಕೊಪ್ಪಲು: ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಬಲಿ ತೆಗೆದುಕೊಂಡಿರುವ ಘಟನೆ ಬುಧವಾರವೂ ತಿತಿಮತಿ ಸಮೀಪದ ನೊಕ್ಯದಲ್ಲಿ ನಡೆದಿದೆ.

ರವೀಂದ್ರ ಎಂಬವರಿಗೆ ಸೇರಿದ ಹಸುವನ್ನು ಕೊಂದಿರುವ ಹುಲಿ ಕೊಟ್ಟಿಗೆಯಿಂದ ಅಂದಾಜು 200 ಮೀ. ನಷ್ಟು ಎಳೆದೊಯ್ದು ಬಿಟ್ಟು ಹೋಗಿದೆ. ಹಸುವಿನ ಮಾಲೀಕ ರವೀಂದ್ರ ಅವರು ಕೊಟ್ಟಿಗೆಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಮಂಗಳವಾರವೂ ಹಸುವೊಂದನ್ನು ಹುಲಿ ಗಾಯಗೊಳಿಸಿ ಬಿಟ್ಟು ಹೋಗಿತ್ತು. ಈ ಹಸು ಈಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಸತತ ಎರಡು ದಿನ ಹುಲಿ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಜನತೆ ಆತಂಕಗೊಂಡಿದ್ದು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ತೋಟಗಳಿಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಭಯಭೀತರಾಗಿದ್ದಾರೆ.

ಸ್ಥಳಕ್ಕೆ ತಿತಿಮತಿ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಇಲಾಖೆಯಿಂದ ಬರುವ ಪರಿಹಾರ ಧನವನ್ನು ಕೂಡಲೆ ನೀಡಲಾಗುವುದು ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ