ಆ್ಯಪ್ನಗರ

ಟಿಂಬರ್‌ ಲಾರಿ ಸಂಚಾರ: ರಸ್ತೆಗೆ ಹಾನಿ

ತಾಲೂಕಿನ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಗ್ರಾಮೀಣ ರಸ್ತೆ ಟಿಂಬರ್‌ ಲಾರಿ ಸಂಚಾರದಿಂದ ಹದಗೆಟ್ಟಿದೆ.

Vijaya Karnataka 29 Jun 2018, 5:00 am
ಸೋಮವಾರಪೇಟೆ: ತಾಲೂಕಿನ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಗ್ರಾಮೀಣ ರಸ್ತೆ ಟಿಂಬರ್‌ ಲಾರಿ ಸಂಚಾರದಿಂದ ಹದಗೆಟ್ಟಿದೆ.
Vijaya Karnataka Web timber lorry movement road damaged
ಟಿಂಬರ್‌ ಲಾರಿ ಸಂಚಾರ: ರಸ್ತೆಗೆ ಹಾನಿ


ಹೊಸತೋಟದಿಂದ ಗರಗಂದೂರು ಗ್ರಾಮವನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದು, 8.50 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ನಿತ್ಯ ಈ ರಸ್ತೆಯಲ್ಲಿ 25 ಟನ್‌ ತೂಕಕ್ಕೂ ಅಧಿಕ ಸಾಮರ್ಥ್ಯ‌ವುಳ್ಳ ಮರಗಳನ್ನು ತುಂಬಿಸಿಕೊಂಡು ಲಾರಿಗಳು ಸಂಚರಿಸುತ್ತಿವೆ. ಕುಂಬಾರಬಾಣೆ ಎಂಬಲ್ಲಿ ರಸ್ತೆ ಬದಿಯಲ್ಲಿ ಹೊನ್ನೆ, ನಂದಿ, ಸಿಲ್ವರ್‌ ಮರಗಳನ್ನು ನಾಟಾಗಳನ್ನಾಗಿ ಪರಿವರ್ತಿಸಿ, ರಸ್ತೆ ಬದಿಯಲ್ಲೆ ಸಂಗ್ರಹಿಸಿದ್ದಾರೆ. ಇದರಿಂದ ಕೋಟಿ ವೆಚ್ಚದ ಗ್ರಾಮೀಣ ರಸ್ತೆ ಹಾಳಾಗುತ್ತಿದ್ದು, ಲೋಕೋಪಯೋಗಿ ಇಲಾಖೆ ಮೌನಕ್ಕೆ ಶರಣಾಗಿದೆ.

ಗ್ರಾಮೀಣ ರಸ್ತೆಯಲ್ಲಿ 8 ಟನ್‌ ಮತ್ತು ರಾಜ್ಯಹೆದ್ದಾರಿಯಲ್ಲಿ 25 ಟನ್‌ ಸಾಮರ್ಥ್ಯ‌ದ ವಾಹನಗಳು ಮಾತ್ರ ಸಂಚರಿಸಬೇಕೆಂದು ಲೋಕೋಪಯೋಗಿ ಇಲಾಖೆ ನಾಮಫಲಕ ಸೂಚಿಸುತ್ತದೆ. ಆದರೆ, ನಿಯಮಗಳನ್ನು ಮೀರಿ ಟಿಂಬರ್‌ ಲಾರಿಗಳು ಸಂಚರಿಸುತ್ತಿದ್ದು, ಇದರಿಂದ ಬಹುತೇಕ ರಸ್ತೆಗಳು ಹಾಳಾಗುತ್ತಿದ್ದು, ಸರಕಾರದ ಕೋಟ್ಯಾಂತರ ರೂ.ಹಣ ಪೋಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಭಾಗದಲ್ಲಿ ಅಧಿಕ ಸಾವåರ್ಥ್ಯ‌ದ ಟಿಂಬರ್‌ ಲಾರಿಗಳು ಸಂಚರಿಸುತ್ತಿರುವುದರಿಂದ ರಸ್ತೆ ಹಾಳಾಗುವುದರೊಂದಿಗೆ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಇದರ ಬಗ್ಗೆ ಪೊಲೀಸ್‌ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಟಿಂಬರ್‌ ಲಾಬಿ ಕೊಡಗಿನಲ್ಲಿ ಬಲಿಷ್ಠವಾಗಿದೆ ಎಂಬುದಕ್ಕೆ ಇದೊಂದು ಸಾಕ್ಷಿ ಎಂದು ಗರಗಂದೂರಿನ ಕೆ.ಎಂ.ಲಕ್ಷ ್ಮಣ ಹೇಳಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ