ಆ್ಯಪ್ನಗರ

ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ಬಂದಿದ್ದ ಪ್ರವಾಸಿ ನೀರುಪಾಲು

ಮಲ್ಲಳ್ಳಿ ಜಲಪಾತ ವೀಕ್ಷ ಣೆಗೆ ಬಂದಿದ್ದ ಪ್ರವಾಸಿಗರೊಬ್ಬರು ಮಂಗಳವಾರ ಸಂಜೆ ನೀರುಪಾಲಾಗಿದ್ದಾರೆ.

Vijaya Karnataka 10 Oct 2018, 5:00 am
ಸೋಮವಾರಪೇಟೆ (ಕೊಡಗು ಜಿಲ್ಲೆ): ಮಲ್ಲಳ್ಳಿ ಜಲಪಾತ ವೀಕ್ಷ ಣೆಗೆ ಬಂದಿದ್ದ ಪ್ರವಾಸಿಗರೊಬ್ಬರು ಮಂಗಳವಾರ ಸಂಜೆ ನೀರುಪಾಲಾಗಿದ್ದಾರೆ.
Vijaya Karnataka Web tourist dead is a sight to visit mallalli falls
ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ಬಂದಿದ್ದ ಪ್ರವಾಸಿ ನೀರುಪಾಲು


ಸಕಲೇಶಪುರ ತಾಲೂಕಿನ ಅರೆಹಳ್ಳಿ ಗ್ರಾಮದ ನಿವಾಸಿ ಜಾವೇದ್‌ (29) ನೀರಿನಲ್ಲಿ ಕೊಚ್ಚಿಹೋದವರು. ನೀರಿನ ಮಧ್ಯೆ ಕಲ್ಲುಬಂಡೆಯ ಮೇಲೆ ಸಿಲುಕಿ ಪ್ರಾಣಾಪಾಯದಲ್ಲಿದ್ದ ಫಾಜಿಲ್‌ ಎಂಬುವವರನ್ನು ಗ್ರಾಮದ ದೇಶ್‌ ಮತ್ತು ಯುವಕರ ತಂಡ ತಂಡ ರಕ್ಷಿಸಿದೆ.

ಅರೆಹಳ್ಳಿ ಗ್ರಾಮದ ಐವರು ಯುವಕರು ಜಲಪಾತ ವೀಕ್ಷ ಣೆಗೆ ಬಂದಿದ್ದರು. ಸಂಜೆ 6ರಲ್ಲಿ ಜಲಪಾತದ ಕೆಳಗೆ ತಂತಿಬೇಲಿಯನ್ನು ದಾಟಿದ ಇಬ್ಬರು ನೀರು ಹರಿಯುವ ಹೊಳೆಯ ಕಲ್ಲುಬಂಡೆ ಮೇಲೆ ಕುಳಿತಿದ್ದರು. ಜಲಪಾತದ ಸ್ವಲ್ಪ ದೂರದಲ್ಲಿರುವ ಮಿನಿ ಜಲವಿದ್ಯುತ್‌ ಘಟಕದಿಂದ ಏಕಾಏಕಿ ನೀರು ಬಿಟ್ಟಿದ್ದರಿಂದ ಹರಿವು ಜಾಸ್ತಿಯಾಗಿ, ಜಾವೇದ್‌ ಕೊಚ್ಚಿ ಹೋದರು ಎಂದು ಅವರ ಸ್ನೇಹಿತರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.

ಸೋಮವಾರಪೇಟೆ ಪೊಲೀಸ್‌ ಠಾಣೆಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಲಾಗಿದ್ದು, ಜಲಪಾತದ ಸ್ಥಳದಲ್ಲಿ ನೆಟ್‌ವರ್ಕ್‌ ಇಲ್ಲದಿರುವುದು ಹಾಗೂ ಕತ್ತಲೆಯಾಗಿ ಮಳೆ ಸುರಿಯುತ್ತಿರುವುದರಿಂದ ಕಾರ್ಯಾಚರಣೆಗೆ ತೊಡಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ