ಆ್ಯಪ್ನಗರ

ಕೂಡಿಗೆ ಶಾಲೆಯಲ್ಲಿ ತರಬೇತಿ ಕಾರ್ಯಾಗಾರ

ಕೂಡಿಗೆ ಸೈನಿಕ ಶಾಲೆಯಲ್ಲಿ ಶಿಕ್ಷಕರಿಗೆ ರಾಷ್ಟ್ರೀಯ ಮಟ್ಟದ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.

Vijaya Karnataka Web 31 May 2018, 5:00 am
ಕುಶಾಲನಗರ: ಕೂಡಿಗೆ ಸೈನಿಕ ಶಾಲೆಯಲ್ಲಿ ಶಿಕ್ಷಕರಿಗೆ ರಾಷ್ಟ್ರೀಯ ಮಟ್ಟದ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.
Vijaya Karnataka Web training workshop in koodige school
ಕೂಡಿಗೆ ಶಾಲೆಯಲ್ಲಿ ತರಬೇತಿ ಕಾರ್ಯಾಗಾರ


5 ದಿನಗಳ ಕಾರ್ಯಗಾರವನ್ನು ನಿರ್ಗಮಿತ ಬ್ರಿಗೇಡಿಯರ್‌ ಎಂ.ಎ. ದೇವಯ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಶಿಕ್ಷ ಕರು ಮಕ್ಕಳ ಅಭಿರುಚಿ ಅರ್ಥಮಾಡಿಕೊಂಡು ಬೋಧನೆ ಮಾಡಬೇಕಿದೆ. ರಾಷ್ಟ್ರೀಯ ರಕ್ಷ ಣಾ ಇಲಾಖೆಗೆ, ದೇಶ ಕಟ್ಟುವಂಥ ಸಮರ್ಥ ಅಧಿಕಾರಿಗಳನ್ನು ಸೃಷ್ಟಿಸುವಲ್ಲಿ ಸೈನಿಕ ಶಾಲೆಗಳ ಪಾತ್ರದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇಂದಿನ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಹಲವಾರು ಅವಕಾಶಗಳಿರುವುದರಿಂದ ರಕ್ಷ ಣಾ ಇಲಾಖೆಗೆ ಸೇರುವ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಶಾಲೆಯ ಪ್ರಾಂಶುಪಾಲ ಗ್ರೂಪ್‌ ಕ್ಯಾಪ್ಟನ್‌ ಆರ್‌.ಆರ್‌. ಲಾಲ್‌, ಕ್ಯಾ.ಯೋಗೇಶ್‌, ಸೈನಿಕ ಶಾಲೆ ಆಂಗ್ಲ ಭಾಷಾ ಮಾಜಿ ಶಿಕ್ಷ ಕ ಜೇಸುದಾಸ್‌ ಮಾತನಾಡಿದರು. ಕಾರ್ಯಾಗಾರದಲ್ಲಿ 26 ಸೈನಿಕ ಶಾಲೆಗಳ ಶಿಕ್ಷ ಕರು ಪಾಲ್ಗೊಂಡಿದ್ದರು.

ಶಾಲೆಯ ನೂತನ ಉಪಪ್ರಾಂಶುಪಾಲರಾದ ಲೆ.ಕರ್ನಲ್‌ ಶೀಮಾ ತ್ರಿಪಾಠಿ, ಶಾಲೆಯ ಶಿಕ್ಷ ಕ ಮತ್ತು ಆಡಳಿತ ವರ್ಗ ಪಾಲ್ಗೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ