ಆ್ಯಪ್ನಗರ

ಜಿ.ಪಂ ಸದಸ್ಯ ಕಾಣೆ, ಹುಡುಕಿಕೊಡುವಂತೆ ಗ್ರಾಮಸ್ಥರಿಂದ ಪೊಲೀಸರಿಗೆ ದೂರು..!!

ಕೊಡಗು ಜಿಲ್ಲೆಯಲ್ಲಿ ವಿಭಿನ್ನವಾದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಿಲ್ಲಾ ಪಂಚಾಯತ್ ಸದಸ್ಯ ಕಾಣೆಯಾಗಿದ್ದಾನೆ ಹುಡುಕಿ ಕೊಡಿ ಎಂದು ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Vijaya Karnataka Web 1 Oct 2019, 12:39 pm
ಕೊಡಗು: ಜಿಲ್ಲೆಯಲ್ಲಿ ವಿಶೇಷವಾದ, ವಿಭಿನ್ನವಾದ ಕಣ್ಮರೆ ಪ್ರಕರಣವೊಂದು ದಾಖಲಾಗಿದೆ. ಜಿ.ಪಂ‌ ಸದಸ್ಯರನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಯಲ್ಲಿ ಗ್ರಾಮಸ್ಥರು ದೂರು ದಾಖಲಿಸಿದ್ದಾರೆ.
Vijaya Karnataka Web kumar (1)


‘ಶಾಶ್ವತ ಸೂರು ಕೊಡಿ’: ಕೊಡಗಿನಲ್ಲಿ ಮೊಳಗಿದ ಪ್ರವಾಹ ಸಂತ್ರಸ್ತರ ಕೂಗು

ಸಂಪಾಜೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಕೆ ಕುಮಾರ್ ಕಾಣೆಯಾಗಿದ್ದಾರೆ . ಕಳೆದ ಆರು ತಿಂಗಳುಗಳಿಂದ ಸದಸ್ಯ ಕೆ.ಕೆ ಕುಮಾರ್ ಸಾರ್ವಜನಿಕವಾಗಿ ಕಾಣ ಸಿಗುತ್ತಿಲ್ಲ. ಬೇಂಗೂರು ಚೇರಂಬಾಣೆ ಗ್ರಾಮ ಪಂಚಾಯತ್ ಸಭೆಗೂ ಹಾಜರಾಗುತ್ತಿಲ್ಲ ಎಂದು ಸಾರ್ವಜನಿಕರ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಹೆಬ್ಬಟಗೇರೆ ಗೋರಿ ಮಾಡಿದ ನೆರೆ: 35 ಕುಟುಂಬಗಳ್ಳಿದ್ದ ಗ್ರಾಮದಲ್ಲೀಗ ಕೇವಲ 8 ಜನರ ವಾಸ!

ಈ ಕಾರಣಕ್ಕೆ ಸ್ಥಳೀಯರು ಕೂಡ ಗ್ರಾಮ ಸಭೆಯನ್ನು ಬಹಿಷ್ಕರಿಸಿದ್ದು, ಗ್ರಾಮ ಸಭೆ ಕೂಡ ಮುಂದೂಡಲಾಗಿದೆ. ಗ್ರಾಮದ ಸಮಸ್ಯೆ ಕೇಳೋರಿಲ್ಲ. ಜನರ ಸಮಸ್ಯೆಗೆ ಸ್ಪಂದಿಸುವ ಪ್ರತಿನಿಧಿ ಇಲ್ಲ. ಆದ್ದರಿಂದ ಮುಂದಿನ ಗ್ರಾಮ ಸಭೆಯೊಳಗೆ ಜಿ.ಪಂ ಸದಸ್ಯರನ್ನು ಪತ್ತೆ ಹಚ್ಚಿ ಕೊಡಿ ಎಂದು ಸಾರ್ವಜನಿಕರು ಭಾಗಮಂಡಲ ಪೊಲೀಸ್ ಠಾಣೆಯ ಅಧಿಕಾರಿಗೆ ದೂರು ಸಲ್ಲಿಸಿ ಮನವಿ ಮಾಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ