ಆ್ಯಪ್ನಗರ

ಕಾಡಾನೆ ದಾಳಿ: ಫಸಲು ನಾಶ

ಈರಳೆವಳಮುಡಿ ಗ್ರಾಮದ ತೋಟಕ್ಕೆ ನುಗ್ಗಿದ್ದ ಕಾಡಾನೆ ಹಿಂಡು ಅಪಾರ ಪ್ರಮಾಣದ ಫಸಲಿಗೆ ನಷ್ಟ ಉಂಟುಮಾಡಿವೆ.

Vijaya Karnataka 15 Feb 2019, 5:00 am
ಸುಂಟಿಕೊಪ್ಪ: ಈರಳೆವಳಮುಡಿ ಗ್ರಾಮದ ತೋಟಕ್ಕೆ ನುಗ್ಗಿದ್ದ ಕಾಡಾನೆ ಹಿಂಡು ಅಪಾರ ಪ್ರಮಾಣದ ಫಸಲಿಗೆ ನಷ್ಟ ಉಂಟುಮಾಡಿವೆ.
Vijaya Karnataka Web wild elephant attack
ಕಾಡಾನೆ ದಾಳಿ: ಫಸಲು ನಾಶ


ಗ್ರಾಮದ ಬಿ.ಕೆ.ಪದ್ಮಿನಿ ಎಂಬುವವರ ತೋಟಕ್ಕೆ ಮಧ್ಯರಾತ್ರಿ ವೇಳೆ ಆಹಾರ ಅರಸಿ ಆಗಮಿಸಿದ್ದ ಕಾಡಾನೆಗಳು, ಅಪಾರ ಪ್ರಮಾಣದ ಕೃಷಿ ಫಸಲನ್ನು ಧ್ವಂಸಗೊಳಿಸಿವೆ.

ಬಿ.ಕೆ.ಪದ್ಮಿನಿ ಅವರಿಗೆ ಸೇರಿದ 10 ಎಕರೆ ಜಾಗದಲ್ಲಿದ್ದ ಕಾಫಿ, ಅಡಕೆ ಸಿಲ್ವರ್‌ ಗಿಡ ಬೆಳೆಸಲಾಗಿತ್ತು. ಫಸಲು ಸೇರಿದಂತೆ ಪಂಪ್‌ಸೆಟ್‌ ಅನ್ನು ತುಳಿದು ನಾಶಗಳಿಸಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ತೋಟದ ಮಾಲೀಕರು ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದಾರೆ.

ಕಾಡಾನೆಗಳ ಹಿಂಡು ತೋಟದಲ್ಲಿ ವಾಸ್ತವ್ಯ ಹೂಡಿದ್ದು , ಕೆಲಸಕ್ಕೆ ಬರುವ ಕಾರ್ಮಿಕರು, ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಭಯಗೊಂಡಿದ್ದಾರೆ. ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ಕೃಷಿ ಫಸಲನ್ನು ತಿಂದು, ಧ್ವಂಸಗೊಳಿಸುತ್ತಿವೆ ಎಂದು ಕೃಷಿಕರು ಪತ್ರಿಕೆಯಲ್ಲಿ ತಮ್ಮ ಆಳಲನ್ನು ತೋಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ