ಆ್ಯಪ್ನಗರ

ಶಾಲೆಯಿಂದ ಹೊರಗುಳಿದ 22 ಮಕ್ಕಳು ದಾಖಲು

ಪಟ್ಟಣದ ಇಟ್ಟಿಗೆ ಕಾರ್ಖಾನೆಗಳು, ಗ್ಯಾರೇಜ್‌, ಗುಡಾರಗಳ ಮೇಲೆ ಪೊಲೀಸ್‌ ಉಪನಿರೀಕ್ಷ ಕ ರಂಗಸ್ವಾಮಿ ನೇತೃತ್ವದಲ್ಲಿ ಆಪರೇಷನ್‌ ಮುಸ್ಕಾನ್‌ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಶಾಲೆಯಿಂದ ಹೊರಗುಳಿದ 22 ಮಕ್ಕಳನ್ನು ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗೆ ದಾಖಲಿಸಿದ್ದಾರೆ.

Vijaya Karnataka 19 Jul 2019, 3:34 pm
ಮಾಲೂರು: ಪಟ್ಟಣದ ಇಟ್ಟಿಗೆ ಕಾರ್ಖಾನೆಗಳು, ಗ್ಯಾರೇಜ್‌, ಗುಡಾರಗಳ ಮೇಲೆ ಪೊಲೀಸ್‌ ಉಪನಿರೀಕ್ಷ ಕ ರಂಗಸ್ವಾಮಿ ನೇತೃತ್ವದಲ್ಲಿ ಆಪರೇಷನ್‌ ಮುಸ್ಕಾನ್‌ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಶಾಲೆಯಿಂದ ಹೊರಗುಳಿದ 22 ಮಕ್ಕಳನ್ನು ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗೆ ದಾಖಲಿಸಿದ್ದಾರೆ.
Vijaya Karnataka Web 22 dropouts re joins school
ಶಾಲೆಯಿಂದ ಹೊರಗುಳಿದ 22 ಮಕ್ಕಳು ದಾಖಲು


ಪಟ್ಟಣದಲ್ಲಿ ಗುರುವಾರ ಪೊಲೀಸ್‌ ಉಪನಿರೀಕ್ಷ ಕ ರಂಗಸ್ವಾಮಿ ಅವರು ತಾಲೂಕಿನ ನಾನಾ ಕಡೆಗಳಲ್ಲಿ ಆಪರೇಷನ್‌ ಮುಸ್ಕಾನ್‌ ಹೆಸರಿನಲ್ಲಿ ಪಟ್ಟಣದ ಇಟ್ಟಿಗೆ ಕಾರ್ಖಾನೆಗಳು, ಗ್ಯಾರೆಜ್‌, ಗುಡಾರಗಳ ಮೇಲೆ ಕಾರ್ಯಾಚರಣೆ ನಡೆಸಿದ್ದಾರೆ. 22 ಮಕ್ಕಳು ಶಾಲೆಯಿಂದ ಹೊರಗುಳಿರುವುದು ಪತ್ತೆ ಹಚ್ಚಿದ್ದಾರೆ.

ಪೋಷಕರ ಮನವೊಲಿಸಿ ಪುರಸನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ 11 ಮಕ್ಕಳು, ಸರ್ಕಾರಿ ಪ್ರಾಥಮಿಕ ಶಾಲೆಗೆ 3 ಮಕ್ಕಳನ್ನು ದಾಖಲಿಸಿದ್ದು, ಇನ್ನುಳಿದ 8 ಮಕ್ಕಳನ್ನು ಠಾಣೆಗೆ ಕರೆತಂದು ಮಕ್ಕಳ ಹಕ್ಕುಗಳ ಬಗ್ಗೆ ಮತ್ತು ಪ್ರಸ್ತುತ ಚಾಲ್ತಿಯಲ್ಲಿ ಕಾನೂನುಗಳ ಬಗ್ಗೆ ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿ ಮಕ್ಕಳ ಪೋಷಣೆಗೆ ಶಾಲೆಗೆ ಸೇರಿಸಲು ಸೂಕ್ತ ತಿಳಿವಳಿಕೆ ನೀಡಲಾಯಿತು. ಈ ಬಗ್ಗೆ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷ ಣವನ್ನು ನೀಡುವುದಾಗಿ ಮುಚ್ಚಳಿಕೆಯನ್ನು ಬರೆದುಕೊಟ್ಟರು.

ದಾಳಿಯಲ್ಲಿ ಕಾರ್ಮಿಕ ನಿರೀಕ್ಷ ಕ ಜೆ.ಲೋಕೇಶ್‌, ಜಿಲ್ಲಾ ಯೋಜನಾ ನಿರ್ದೇಶಕ ಎಂ.ಸಿ. ಲಕ್ಷ್ಮಿನಾರಾಯಣ, ಸಮಾಜ ಕಾರ್ಯಕರ್ತ ಪವಿತ್ರ ಎನ್‌.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಸಂಯೋಜಕಿ ಆರ್‌.ಪ್ರೇಮ ಹಾಗೂ ಪೊಲೀಸ್‌ ಸಿಬ್ಬಂದಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ