ಆ್ಯಪ್ನಗರ

ಅಭಿವೃದ್ಧಿ ಕಾಮಗಾರಿಗೆ 4 ಕೋಟಿ ರೂ. ಬಿಡುಗಡೆ

ನಗರಸಭೆ ವ್ಯಾಪ್ತಿಯಲ್ಲಿ ನಾನಾ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಮುಖ್ಯಮಂತ್ರಿಗಳ ವಿವೇಚನಾ ನಿಧಿ ಅಡಿಯಲ್ಲಿ ಎಸ್‌ಎಫ್‌ಸಿ ವಿಶೇಷ ಅನುದಾನವಾಗಿ 4 ಕೋಟಿ ರೂ. ಮಂಜುರಾಗಿದ್ದು, ಈ ಅನುದಾನದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಶಾಸಕ ಎಚ್‌. ನಾಗೇಶ್‌ ತಿಳಿಸಿದರು.

Vijaya Karnataka 10 Mar 2019, 5:00 am
ಮುಳಬಾಗಲು: ನಗರಸಭೆ ವ್ಯಾಪ್ತಿಯಲ್ಲಿ ನಾನಾ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಮುಖ್ಯಮಂತ್ರಿಗಳ ವಿವೇಚನಾ ನಿಧಿ ಅಡಿಯಲ್ಲಿ ಎಸ್‌ಎಫ್‌ಸಿ ವಿಶೇಷ ಅನುದಾನವಾಗಿ 4 ಕೋಟಿ ರೂ. ಮಂಜುರಾಗಿದ್ದು, ಈ ಅನುದಾನದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಶಾಸಕ ಎಚ್‌. ನಾಗೇಶ್‌ ತಿಳಿಸಿದರು.
Vijaya Karnataka Web 4 crore released for development work
ಅಭಿವೃದ್ಧಿ ಕಾಮಗಾರಿಗೆ 4 ಕೋಟಿ ರೂ. ಬಿಡುಗಡೆ


ನಗರದಲ್ಲಿರುವ ನೆಹರು ಪಾರ್ಕ್‌ನಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

25 ವರ್ಷಗಳಿಂದ ಸದರಿ ಪಾರ್ಕ್‌ ಅಧೋಗತಿಗೆ ತಲುಪಿತ್ತು. ಈ ಜಾಗ ಅನೈತಿಕ ಚಟುವಟಿಕೆಗಳಿಗೆ ಕಾರಣವಾಗಿದ್ದರಿಂದ ನಾಗರಿಕರ ಒತ್ತಾಯದ ಮೇರೆಗೆ ಸದರಿ ಪಾರ್ಕ್‌ನ್ನು ಅತ್ಯಂತ ಮಾದರಿಯಾಗಿ ಜೀರ್ಣೋದ್ಧಾರಗೊಳಿಸಲು ಈಗಾಗಲೇ ಗುತ್ತಿಗೆದಾರರಿಗೆ ಸೂಚಿಸಿದ್ದು, ಪಾರ್ಕ್‌ನಲ್ಲಿ ಜಿಮ್‌, ಮಕ್ಕಳ ಆಟಿಕೆಗಳು, ನೀರಿನ ಸೌಲಭ್ಯ, ವಾಕಿಂಗ್‌ ಪಾಥ್‌ ನಿರ್ಮಿಸಲು ಕ್ರಮ ತೆಗೆದುಕೊಳ್ಳಲಾಗುವುದು. ನೆಹರು ಪುತ್ಥಳಿಯನ್ನು ಮಂಟಪದಲ್ಲಿ ಅಳವಡಿಸಲಾಗುವುದು ಹಾಗೂ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ ಬೆಳಗಿನ ವೇಳೆ 4 ಗಂಟೆ, ಸಂಜೆ 4 ಗಂಟೆಗಳ ಕಾಲ ನಾಗರಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಶವಸಂಸ್ಕಾರ ವಾಹನ: ನಗರಸಭೆಗೆ ಶವ ಸಂಸ್ಕಾರ ವಾಹನ ಮತ್ತು ಶವ ಪೆಟ್ಟಿಗೆಯನ್ನು 15 ಲಕ್ಷ ರೂ. ವೆಚ್ಚದಲ್ಲಿ ಖರೀದಿ ಮಾಡಲಾಗುವುದು. ನಗರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಮುಖ್ಯದ್ವಾರಗಳಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಲು 10 ಲಕ್ಷ ರೂ., ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಸ್ವಾಗತ ಕಮಾನು ನಿರ್ಮಿಸಲು 10 ಲಕ್ಷ ರೂ.ಗಳನ್ನು ಮೀಸಲಿಟ್ಟದೆ ಎಂದರು.

ಒಕ್ಕಲಿಗರ ಸಮುದಾಯ ಭವನ ಉಳಿಕೆ ಅಭಿವೃದ್ಧಿ ಕಾಮಗಾರಿಗೆ 25 ಲಕ್ಷ ರೂ, ಬ್ರಾಹ್ಮಣ ಸಮುದಾಯ ಭವನ ಉಳಿಕೆ ಕಾಮಗಾರಿಗೆ 20 ಲಕ್ಷ ರೂ., ಕೈವಾರ ತಾತಯ್ಯನವರ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ., ವಿಶ್ವಕರ್ಮ ಸಮುದಾಯ ಭವನ ಉಳಿಕೆ ಕಾಮಗಾರಿಗೆ 10 ಲಕ್ಷ ರೂ., ನಗರದ ದೊಡ್ಡಭದ್ರೇಗೌಡ ಆಸ್ಪತ್ರೆಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ 35ಲಕ್ಷ ರೂ., ವಿಠಲಕುಂಟೆ ಎಡಬದಿಯಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ 5ಲಕ್ಷ ರೂ.ಗಳನ್ನು ವಿನಿಯೋಗಿಸಲಾಗುವುದು. ಅದೇ ರೀತಿ ನಗರದಲ್ಲಿ ಎಲ್‌ಇಡಿ ವಿದ್ಯುತ್‌ ಬೀದಿ ದೀಪ ಅಳವಡಿಸಲು 15 ಲಕ್ಷ ರೂ., ಕುರುಬರ ಸಮುದಾಯ ಭವನ ಉಳಿಕೆ ಕಾಮಗಾರಿಕೆ 25ಲಕ್ಷ ರೂ. ಹಾಗೂ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ 12 ಲಕ್ಷ ರೂಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಎಂ.ಆರ್‌. ಮುರಳಿ, ಆಯುಕ್ತ ಶ್ರೀನಿವಾಸ್‌ಮೂರ್ತಿ, ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್‌, ರಾಜ್ಯ ಕುಕ್ಕುಟ ಮಹಾಮಂಡಳಿಯ ಮಾಜಿ ಅಧ್ಯಕ್ಷ ಬಿ.ಕೆ. ವೆಂಕಟನಾರಾಯಣ್‌, ಕಾಂಗ್ರೆಸ್‌ ಪಕ್ಷ ದ ಹಿರಿಯರಾದ ಎನ್‌. ಪ್ರಭಾಕರ್‌ ಸದಾಶಿವ, ನಗರಸಭಾ ಸದಸ್ಯರಾದ ರಾಧಿಕ, ತ್ರಿವೇಣಿ, ಗಿರಿಜಾ, ಠಾಕೂರ್‌ಸಿಂಗ್‌, ಮಾಜಿ ಸದಸ್ಯ ಶಮೀಉಲ್ಲಾ, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಸಿ.ವಿ. ಶ್ರೀನಾಥ್‌, ಮುಖಂಡರಾದ ಶ್ರೀರಾಮಯ್ಯ, ಭೂಪತಿರೆಡ್ಡಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ