ಆ್ಯಪ್ನಗರ

ಜಿಲ್ಲಾಕಾಂಗ್ರೆಸ್‌ನ 7 ಮಂದಿ ಮುಖಂಡರು ಅಮಾನತು

ಕೋಲಾರದ ಜಿಲ್ಲಾಕಾಂಗ್ರೆಸ್‌ನ ಏಳು ಮಂದಿ ಮುಖಂಡರನ್ನು ಅಮಾನತುಪಡಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ ಆದೇಶ ಹೊರಡಿಸಿದ್ದಾರೆ.

Vijaya Karnataka 19 Oct 2019, 2:50 pm
ಕೋಲಾರ: ಕೋಲಾರದ ಜಿಲ್ಲಾಕಾಂಗ್ರೆಸ್‌ನ ಏಳು ಮಂದಿ ಮುಖಂಡರನ್ನು ಅಮಾನತುಪಡಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ ಆದೇಶ ಹೊರಡಿಸಿದ್ದಾರೆ.
Vijaya Karnataka Web 7 leadersof district congress suspendedkolar news kannada news
ಜಿಲ್ಲಾಕಾಂಗ್ರೆಸ್‌ನ 7 ಮಂದಿ ಮುಖಂಡರು ಅಮಾನತು


ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಇತರರ ಕಾರ್ಯವೈಖರಿ ಟೀಕಿಸಿ ಗುರುವಾರ ಸುದ್ದಿಗೋಷ್ಠಿ ನಡೆಸಿದ್ದ ಕೆ.ಎಚ್‌.ಮುನಿಯಪ್ಪ ಬೆಂಬಲಿಗ ಮುಖಂಡರನ್ನು ಕಾಂಗ್ರೆಸ್‌ ಪಕ್ಷವು ಅಮಾನತು ಮಾಡಿದೆ.

ಕೋಲಾರ ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸಾದ್‌ಬಾಬು, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕುಮಾರ್‌, ಕೆಯುಡಿಎ ಮಾಜಿ ಅಧ್ಯಕ್ಷ ಅತಾವುಲ್ಲಾ, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಇಕ್ಬಾಲ್‌ ಅಹಮದ್‌, ಎಸ್ಸಿ ವಿಭಾಗದ ಜಿಲ್ಲಾಧ್ಯಕ್ಷ ಕೆ.ಜಯದೇವ್‌, ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ನಾಗರಾಜ್‌ ಹಾಗೂ ಮುಖಂಡ ಖಲೀಲ್‌ ಅಮಾನತ್ತುಗೊಂಡ ಮುಖಂಡರಾಗಿದ್ದಾರೆ.

ಕೋಲಾರ ಜಿಲ್ಲಾಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಬರೆದಿರುವ ಪತ್ರದ ಆಧಾರದ ಮೇಲೆ ಕೆಪಿಸಿಸಿ ಅಧ್ಯಕ್ಷ ವಿ.ವೈ.ಘೋರ್ಪಡೆ ಏಳು ಮಂದಿ ಮುಖಂಡರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆಯೆಂದು ತಿಳಿದುಬಂದಿದೆ.

ಗುರುವಾರದಂದು ನಗರದ ಪತ್ರರ್ಕರ ಭವನದಲ್ಲಿಸುದ್ದಿಗೋಷ್ಠಿ ನಡೆಸಿದ್ದ ಈ ಮುಖಂಡರು, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ, ಕೆಪಿಸಿಸಿ ಅಧ್ಯಕ್ಷರನ್ನು ಟೀಕಿಸಿದ್ದರು. ಅದಕ್ಕಾಗಿ ಇದೀಗ ಅಮಾನತ್ತು ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ