ಆ್ಯಪ್ನಗರ

ಬರದ ನಾಡಿನಲ್ಲಿಮಿಶ್ರಬೇಸಾಯದಿಂದ ಲಾಭ ಕಂಡ ರೈತ

ಬೈರಕೂರು ಹೋಬಳಿ ಗಡ್ಡೂರು ಗ್ರಾ.ಪಂ ವ್ಯಾಪ್ತಿಗೆ ಸೇರಿದ ಟಿ.ಕುರುಬರಹಳ್ಳಿ ಗ್ರಾಮದ ರೈತ ಕೆ.ಜಿ. ಧನಂಜಯ ಎಂಬುವವರು ಕೊಳವೆ ಬಾವಿಯಲ್ಲಿಸಿಗುವ ಅಲ್ಪಸ್ವಲ್ಪ ನೀರಿಗೆ ತಮ್ಮ ಜಮೀನಿನಲ್ಲಿಮಿಶ್ರ ಬೇಸಾಯ ಮಾಡಲು ಮುಂದಾಗಿದ್ದು, ಉತ್ತಮ ಫಸಲು ಕೈಗೆ ಸಿಗುವುದರ ಜತೆಗೆ ಆರ್ಥಿಕವಾಗಿ ಸದೃಢರಾಗಿದ್ದಾರೆ. ಕೆಜಿ...

Vijaya Karnataka 24 Aug 2019, 5:00 am
ನಂಗಲಿ: ಬೈರಕೂರು ಹೋಬಳಿ ಗಡ್ಡೂರು ಗ್ರಾ.ಪಂ ವ್ಯಾಪ್ತಿಗೆ ಸೇರಿದ ಟಿ.ಕುರುಬರಹಳ್ಳಿ ಗ್ರಾಮದ ರೈತ ಕೆ.ಜಿ. ಧನಂಜಯ ಎಂಬುವವರು ಕೊಳವೆ ಬಾವಿಯಲ್ಲಿಸಿಗುವ ಅಲ್ಪಸ್ವಲ್ಪ ನೀರಿಗೆ ತಮ್ಮ ಜಮೀನಿನಲ್ಲಿಮಿಶ್ರ ಬೇಸಾಯ ಮಾಡಲು ಮುಂದಾಗಿದ್ದು, ಉತ್ತಮ ಫಸಲು ಕೈಗೆ ಸಿಗುವುದರ ಜತೆಗೆ ಆರ್ಥಿಕವಾಗಿ ಸದೃಢರಾಗಿದ್ದಾರೆ.
Vijaya Karnataka Web a farmer who has benefited from a mixed farm
ಬರದ ನಾಡಿನಲ್ಲಿಮಿಶ್ರಬೇಸಾಯದಿಂದ ಲಾಭ ಕಂಡ ರೈತ


ಒಟ್ಟಾರೆ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿನಿಗದಿತ ಬೆಲೆ ಸಿಗುವುದು ತುಂಬಾ ವಿರಳ. ಕೆಲವೊಮ್ಮೆ ಗುಣಮಟ್ಟದ ಫಸಲು ಸಿಕ್ಕರೆ ಮಾರುಕಟ್ಟೆಯಲ್ಲಿಬೆಲೆ ಇರುವುದಿಲ್ಲ. ಹಲವು ಭಾರಿ ಮಾರುಕಟ್ಟೆಯಲ್ಲಿಬೆಲೆ ಇದ್ದರೆ ಫಸಲು ಇರುವುದಿಲ್ಲಇಂತಹ ಸನ್ನಿವೇಶಗಳಲ್ಲಿರೈತ ಕೈಕೈ ಇಸುಕಿಕೊಂಡು ಬಂಡವಾಳ ಗಿಟ್ಟಿಸಿಕೊಳ್ಳಲು ಸಾಧ್ಯವಾಗದೆ ನಷ್ಟ ಅನುಭವಿಸುತ್ತಾನೆ.

ಇತ್ತೀಚಿನ ದಿನಗಳಲ್ಲಿವೈಜ್ಞಾನಿಕವಾಗಿ ಕೃಷಿ ಚಟುವಟಿಕೆಗಳನ್ನು ಮಾಡುವಲ್ಲಿಯೋಚನೆ ಮಾಡಿ ಮಿಶ್ರ ಬೇಸಾಯ

ಪದ್ಧತಿ ಅಳವಡಿಸಿಕೊಂಡಿದ್ದಾರೆ. ಇದರಿಂದ ಒಂದು ಬೆಳೆ ಕೈ ಕೊಟ್ಟರೂ ಮತ್ತೊಂದು ಬೆಳೆ ಕೈ ಹಿಡಿಯುವುದೆಂಬ ನಂಬಿಕೆಯಿಂದ ಬಂಡವಾಳ ಹೂಡಿ ಕೃಷಿ ಮುಂದುವರಿಸಿದ್ದಾರೆ.

ಟಿ.ಕುರುಬರಹಳ್ಳಿ ಗ್ರಾಮದ ರೈತ ಧನಂಜಯ ತನ್ನ ಎರಡುವರೆ ಎಕರೆ ಜಮೀನಿನಲ್ಲಿ3ವರ್ಷ ಹಿಂದೆ ಮಾವಿನ ಗಿಡಗಳನ್ನು ನಾಟಿ ಮಾಡಿದ್ದು, ಕಾಲಾಂತರದಲ್ಲಿ1200 ಅಡಿ ಕೊಳವೆ ಬಾವಿ ಕೊರೆಸಿದ್ದಾರೆ. ನಂತರದ ದಿನಗಳಲ್ಲಿಟೊಮೇಟೊ,ಬದನೆ,ಬೀನ್ಸ್‌,ಆಲುಗಡ್ಡೆ, ಕೊತ್ತಂಬರಿ ಸೊಪ್ಪು ಮತ್ತಿತರೆ ಬೆಳೆಗಳಲ್ಲಿನಷ್ಟ ಅನುಭವಸಿದ ಮೇಲೆ ಇದೇ

ಭೂಮಿಯಲ್ಲಿಮಾವಿನ ಜತೆಗೆ ಟೊಮೇಟೊ, ಸೌತೆಕಾಯಿ ಸೇರಿದಂತೆ ಮಿಶ್ರ ಬೆಳೆ ಬೆಳೆಯಲು ಮುಂದಾಗಿದ್ದಾರೆ.

ಜಿಲ್ಲೆ ಸತತವಾಗಿ ಬರಗಾಲ ಎದುರಿಸುತ್ತಿದ್ದು, 1500 ಅಡಿ ಆಳಕ್ಕೆ ಅಂತರ್ಜಾಲ ಕುಸಿದಿದೆ.ಆದ್ದರಿಂದ ಇತ್ತೀಚಿನ ದಿನಗಳಲ್ಲಿನೀರಿನ ಅಭಾವ ತಲೆ ದೂರಿದ್ದು, ಅಂತರ್ಜಲ ಪಾತಾಳಕ್ಕೆ ಹೋಗಿರುವುದರಿಂದ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಬಿಟ್ಟು ಕೂಲಿ ಕೆಲಸಕ್ಕೆ ಗುಳೆ ಹೋಗುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿರೈತ ಧನಂಜಯ ಮಿಶ್ರ ಬೇಸಾಯ ಮಾಡುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.


ಮಿಶ್ರ ಬೇಸಾಯ ಪದ್ಧತಿಗೆ ಹನಿ ನೀರಾವರಿ ಅಳವಡಿಸಿಕೊಂಡಿರುವ ಕಾರಣದಿಂದ ನೀರಿನ ಸಮಸ್ಯೆಯಾಗುತ್ತಿಲ್ಲ. ಅಲ್ಲದೆ, ನೀರು ಪೋಲಾಗುತ್ತಿಲ್ಲ. ಟೊಮೇಟೊ ಮತ್ತು ಸೌತೆಕಾಯಿ ಬೆಳೆಗೆ ನೀಡುವ ನೀರು, ರಸಗೊಬ್ಬರ ಸೇರಿದಂತೆ ಫಲವತ್ತತೆ ಮಾವಿನ ಗಿಡಗಳಿಗೂ ಸಿಗುತ್ತಿರುವುದರಿಂದ ಮಾವಿನ ಗಿಡ ಉತ್ತಮ ಫಸಲು ನೀಡುತ್ತಿವೆ.ಇದರಿಂದ ಮಾರುಕಟ್ಟೆಯಲ್ಲಿಒಂದಲ್ಲಒಂದು ಫಸಲಿಗೆ ನಿಗದಿತ ಬೆಲೆ ಸಿಗುತ್ತಿದೆ.


ತರಕಾರಿ ಬೆಳೆಗಳಿಗೆ ಸಾವಿರಾರು ರೂ. ಬಂಡವಾಳ ಹಾಕಿ ಬೆಳೆ ಮಾಡಿ ಮಾರುಕಟ್ಟೆಗೆ ಹಾಕಿದರೆ ಕೆಲವೊಮ್ಮೆ ವೈಜ್ಞಾನಿಕ ಬೆಲೆ ಇಲ್ಲದೆ ನಷ್ಟ ಅನುಭವಿಸಬೇಕಾಗುತ್ತದೆ. ಯಾವ ಸಮಯಕ್ಕೆ ಯಾವ ಬೆಳೆಗೆ ಬೆಲೆ ಸಿಗುತ್ತದೆಂಬ ಲೆಕ್ಕಾಚಾರ ಹಾಕಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಹನಿ ನೀರಾವರಿ ಅಳವಡಿಸಿಕೊಂಡು ಮಿಶ್ರ ಬೇಸಾಯ ಪದ್ಧತಿ ಮಾಡಲಾಗುತ್ತಿದೆ.

ಧನಂಜಯ, ಟಿ.ಕುರುಬರಹಳ್ಳಿ ರೈತ,



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ