ಆ್ಯಪ್ನಗರ

ವಯಸ್ಕರು ವರ್ಷಕ್ಕೆ 2 ಬಾರಿ ರಕ್ತದಾನ ಮಾಡಿ; ಜಿಪಂ ಸಿಇಒ ದರ್ಶನ್‌

ರಕ್ತದಾನ ಮಹತ್ವದ ದಾನವಾಗಿದ್ದು, ಪ್ರತಿಯೊಬ್ಬ ವಯಸ್ಕರೂ ವರ್ಷದಲ್ಲಿಕನಿಷ್ಠ 2 ಬಾರಿಯಾದರೂ ರಕ್ತದಾನ ಮಾಡಬೇಕಲ್ಲದೆ ಇದರ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿಸಬೇಕೆಂದು ಜಿಪಂ ಸಿಇಒ ಎಚ್‌.ವಿ. ದರ್ಶನ್‌ ತಿಳಿಸಿದರು.

Vijaya Karnataka 2 Oct 2019, 3:50 pm
ಕೋಲಾರ: ರಕ್ತದಾನ ಮಹತ್ವದ ದಾನವಾಗಿದ್ದು, ಪ್ರತಿಯೊಬ್ಬ ವಯಸ್ಕರೂ ವರ್ಷದಲ್ಲಿಕನಿಷ್ಠ 2 ಬಾರಿಯಾದರೂ ರಕ್ತದಾನ ಮಾಡಬೇಕಲ್ಲದೆ ಇದರ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿಸಬೇಕೆಂದು ಜಿಪಂ ಸಿಇಒ ಎಚ್‌.ವಿ. ದರ್ಶನ್‌ ತಿಳಿಸಿದರು.
Vijaya Karnataka Web adults donate blood 2 times a year darshan ceo of gpm
ವಯಸ್ಕರು ವರ್ಷಕ್ಕೆ 2 ಬಾರಿ ರಕ್ತದಾನ ಮಾಡಿ; ಜಿಪಂ ಸಿಇಒ ದರ್ಶನ್‌


ನಗರ ಹೊರವಲಯದಲ್ಲಿನ ಎಸ್‌.ಡಿ.ಸಿ ಕಾಲೇಜಿನಲ್ಲಿಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಏಡ್ಸ್‌ ನಿಯಂತ್ರಣಾ ಘಟಕ, ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್‌ಷನ್‌ ಸೊಸೈಟಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತದಾನ ಮಾಡುವುದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ. ಮನುಷ್ಯ ರಕ್ತ ನೀಡುವುದರಿಂದ ಸಣ್ಣಗಾಗುತ್ತಾನೆ ಎಂಬ ತಪ್ಪು

ಭಾವನೆಯನ್ನು ಬಿಡಬೇಕು. ರಕ್ತದಾನದಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ. ಅಷ್ಟೇ ಅಲ್ಲದೆ, ಉತ್ತಮ ಆರೋಗ್ಯ ದೊರೆಯುತ್ತದೆ. ಅದರಂತೆ ನಾನು ಸಹ ಸುಮಾರು 12 ರಿಂದ 13 ಬಾರಿ ರಕ್ತದಾನ ಮಾಡಿದ್ದೇನೆ ಎಂದು ಹೇಳಿದರು.

ರಕ್ತದಾನ ಮಾಡುವುದರಿಂದ ಆ ರಕ್ತದ ಮೂಲಕ ಒಂದು ಜೀವವನ್ನು ಉಳಿಸಲು ಸಾಧ್ಯ. ಹೀಗೆ ನಾವು ಉಳಿಸಿದ ಜೀವವು ಸಾಕಷ್ಟು ಜೀವಗಳನ್ನು ಉಳಿಸುತ್ತದೆ. ಕಾಣದ ಕುಟುಂಬಕ್ಕೆ ನಾವು ಮಾಡುವ ರಕ್ತದಾನದಿಂದ ಉಪಯೋಗವಾಗುತ್ತದೆ. ಹಾಗಾಗಿ ಎಲ್ಲರೂ ರಕ್ತದಾನ ಮಾಡಲು ಪಣ ತೊಡಬೇಕು ಎಂದು ಕರೆ ನೀಡಿದರು.

ಡಿಎಚ್‌ಒ ಡಾ.ವಿಜಯ್‌ಕುಮಾರ್‌ ಮಾತನಾಡಿ, ಈ ವರ್ಷ ಜೀವಿತಾವಧಿಯಲ್ಲಿಒಮ್ಮೆಯಾದರೂ ರಕ್ತದಾನ ಮಾಡಿ ಎಂಬ ಘೋಷವಾಕ್ಯದಡಿ ರಕ್ತದಾನ ದಿನಾಚರಣೆ ಆಚರಿಸಲಾಗುತ್ತಿದೆ. ಈ ಮೂಲಕ ರಕ್ತದಾನದ ಮಹತ್ವ, ಅದರ ಅವಶ್ಯಕತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲೆಯಲ್ಲಿಪ್ರತಿ ವರ್ಷ 16 ಸಾವಿರ ಯುನಿಟ್‌ ರಕ್ತದ ಅವಶ್ಯಕತೆ ಇದೆ. ಇದೀಗ 11 ರಿಂದ 12 ಸಾವಿರ ಯುನಿಟ್‌ ರಕ್ತ ಸಂಗ್ರಹಣೆ ಆಗುತ್ತಿದ್ದು ಇನ್ನೂ 4 ರಿಂದ 5 ಸಾವಿರ ಯುನಿಟ್‌ ರಕ್ತದ ಅವಶ್ಯಕತೆ ಇದೆ. ಹಾಗಾಗಿ 18 ರಿಂದ 60 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವಂತಾಗಬೇಕು ಎಂದು ತಿಳಿಸಿದರು.

ಜಿಲ್ಲಾಏಡ್ಸ್‌ ಮತ್ತು ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್‌ ಮಾತನಾಡಿ, ಸ್ವಯಂ ಪ್ರೇರಿತ ರಕ್ತದಾನವನ್ನು ದೇಶದಲ್ಲಿ1975 ರಿಂದ ಪ್ರಾರಂಭಿಸಲಾಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿಶೇ.1ರಷ್ಟು ಮಂದಿಗೆ ರಕ್ತದ ಅವಶ್ಯಕತೆ ಇದೆ. ಇದನ್ನು ಪೂರೈಸಲು ರಕ್ತವನ್ನು ಬೇರೆ ಮೂಲಗಳಿಂದ ಕಂಡು ಹಿಡಿಯಲು ಸಾಧ್ಯವಿಲ್ಲ. ಹಾಗಾಗಿ ಎಲ್ಲರೂ ರಕ್ತದಾನ ಮಾಡಿ ಇತರರ ಜೀವನಕ್ಕೆ ಅನುಕೂಲವಾಗಬೇಕು ಎಂದರು.

ಇದೇ ಸಂದರ್ಭದಲ್ಲಿಹೆಚ್ಚು ಬಾರಿ ರಕ್ತದಾನ ಮಾಡಿದವರಿಗೆ ಸನ್ಮಾನ ಮಾಡಲಾಯಿತು. ಜತೆಗೆ ರಕ್ತದಾನದ ಬಗ್ಗೆ ಏರ್ಪಡಿಸಿದ್ದ ಭಿತ್ತಿ ಚಿತ್ರಗಳ ಸ್ಪರ್ಧೆಯಲ್ಲಿವಿಜೇತರಾದವರಿಗೆ ಬಹುಮಾನ ನೀಡಲಾಯಿತು.

ಜಿಲ್ಲಾಆರ್‌ಸಿಎಚ್‌ ಅಧಿಕಾರಿ ಡಾ.ಚಂದನ್‌, ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ಪ್ರಸನ್ನ, ಜಿಲ್ಲಾಮೇಲ್ವಿಚಾರಕಿ ಎಚ್‌. ಹೇಮಲತಾ, ಎಸ್‌.ಡಿ.ಸಿ ಕಾಲೇಜಿನ

ಕಾರ್ಯದರ್ಶಿ ಉಷಾ ಗಂಗಾಧರ್‌ ಹಾಗೂ ಪ್ರಾಂಶುಪಾಲರಾದ ಪುಷ್ಪಲತಾ ಮತ್ತಿತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ