ಆ್ಯಪ್ನಗರ

ಕೇಂದ್ರದ ವಿರುದ್ಧ ಬಸವೇಶ್ವರ ಭಕ್ತ ಮಂಡಳಿ ಆಕ್ರೋಶ

ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳಿಗೆ ಕೇಂದ್ರ ಸರಕಾರ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸದಿರುವುದು ಖಂಡನೀಯ ಎಂದು ಜಿಲ್ಲಾ ಬಸವೇಶ್ವರ ಭಕ್ತ ಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ.

Vijaya Karnataka 27 Jan 2019, 5:00 am
ಕೋಲಾರ: ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳಿಗೆ ಕೇಂದ್ರ ಸರಕಾರ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸದಿರುವುದು ಖಂಡನೀಯ ಎಂದು ಜಿಲ್ಲಾ ಬಸವೇಶ್ವರ ಭಕ್ತ ಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ.
Vijaya Karnataka Web bharath ratna basaveshwara bhakta mandali angry about center
ಕೇಂದ್ರದ ವಿರುದ್ಧ ಬಸವೇಶ್ವರ ಭಕ್ತ ಮಂಡಳಿ ಆಕ್ರೋಶ


ತಮ್ಮ ಸುಮಾರು 79 ವರ್ಷಗಳ ಕಾಲ ಸಿದ್ಧಗಂಗಾ ಮಠದಲ್ಲಿ ಅವಿರಹಿತವಾಗಿ ಕಾಯಕವೇ ಕೈಲಾಸವೆಂದು ನಡೆದಾಡುವ ದೇವರಾದ ಶ್ರೀ ಶಿವಕುಮಾರ ಸ್ವಾಮಿಯವರಿಗೆ ಭಾರತ ರತ್ನವಲ್ಲ ವಿಶ್ವರತ್ನ ಕೊಟ್ಟರೂ ಸಹ ಕಡಿಮೆಯೇ.

ಶ್ರೀಗಳ ಸುದೀರ್ಘ ಕಾಲದ ಜಾತ್ಯತೀತ ಸೇವೆಯನ್ನು ಕೇಂದ್ರ ಸರಕಾರವು ಕಂಡೂ ಕಾಣದಂತೆ ಜಾಣ ಕುರುಡು ತೋರಿರುವುದು ರಾಜ್ಯದ ಜನತೆಗೆ ದುರಂತ ವಿಷಯವಾಗಿದೆ ಎಂದು ಪದಾಧಿಕಾರಿಗಳಾದ ಕೆ.ಬಿ.ಬೈಲಪ್ಪ, ಕೆ.ಎನ್‌. ಪರಮೇಶ್‌, ಟಿ.ಎಸ್‌.ರಾಜಶೇಖರ್‌, ಬಸವರಾಜ್‌, ಚಿಕ್ಕದೇವರಾಜ್‌, ಜೈಪ್ರಕಾಶ್‌, ಚಿಕ್ಕಣ ಪ್ರಕಾಶ್‌, ಶರಣೆಯರ ಬಳಗ ಸುಮ ಜಗದೀಶ್‌, ಪಾರ್ವತಮ್ಮ, ಪಾರ್ವತಿ ದೇವರಾಜ್‌, ದಾಕ್ಷಾಯಿಣಿ , ಸರಳ, ರಾಜೇಶ್ವರಿ, ಶೋಭಾ, ಗಿರಿಜಮ್ಮ ಮತ್ತಿತರರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ