ಆ್ಯಪ್ನಗರ

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ: ವೀರಯ್ಯ

ಬಿಜೆಪಿ ಪಕ್ಷ ವು ನನ್ನನ್ನು ಮೂಲೆ ಗುಂಪು ಮಾಡಿದೆ. ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಎಸ್‌.ಮುನಿಸ್ವಾಮಿ ಅವರನ್ನು ಘೋಷಿಸಲಾಗಿದ್ದು, ತಾವು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಟಿಕೆಟ್‌ ವಂಚಿತ ಡಿ.ಎಸ್‌.ವೀರಯ್ಯ ತಿಳಿಸಿದರು.

Vijaya Karnataka 25 Mar 2019, 5:00 am
ಕೋಲಾರ : ಬಿಜೆಪಿ ಪಕ್ಷ ವು ನನ್ನನ್ನು ಮೂಲೆ ಗುಂಪು ಮಾಡಿದೆ. ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಎಸ್‌.ಮುನಿಸ್ವಾಮಿ ಅವರನ್ನು ಘೋಷಿಸಲಾಗಿದ್ದು, ತಾವು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಟಿಕೆಟ್‌ ವಂಚಿತ ಡಿ.ಎಸ್‌.ವೀರಯ್ಯ ತಿಳಿಸಿದರು.
Vijaya Karnataka Web bjp nominates as rebel candidate veerayya
ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ: ವೀರಯ್ಯ


ನಗರ ಹೊರವಲಯದ ಕುಂಬಾರಹಳ್ಳಿ ಗೇಟ್‌ ಬಳಿಯ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯ ಬಿಜೆಪಿ ನಾಯಕರು ತಮ್ಮನ್ನು ಕಡೆಗಣಿಸಿದ್ದಾರೆ. ಪರಿಶಿಷ್ಟ ಜಾತಿಯ ನಾಯಕನನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಈಗಲೂ ನನಗೆ ಬಿಜೆಪಿ ಪಕ್ಷ ದಿಂದ ಬಿ ಫಾರಂ ಸಿಗುವ ಸಾಧ್ಯತೆ ಇರುವುದರಿಂದಾಗಿ ಹಾಗೂ ಎಸ್‌.ಮುನಿಸ್ವಾಮಿ ಬದಲಾವಣೆ ಆಗುವ ಬಗ್ಗೆ ಮಾಹಿತಿ ಇರುವುದರಿಂದಾಗಿ ನಾನು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.

ನಾನು ಯಾವುದೇ ಕಾರಣಕ್ಕೆ ಬಿಜೆಪಿ ಪಕ್ಷ ವನ್ನು ಬಿಡುವ ಮಾತಿಲ್ಲ. ಕೇಂದ್ರದ ನಾಯಕರು ತಮ್ಮ ನಿರ್ಧಾರ ಬದಲಿಸುವ ಸಾಧ್ಯತೆಯಿದ್ದು, ಅದಕ್ಕಾಗಿ ಕಾದು ನೋಡುತ್ತೇನೆ ಎಂದ ಅವರು, ಜಿಲ್ಲಾ ಬಿಜೆಪಿಗೆ ಯಾವುದೇ ಕೊಡುಗೆಯನ್ನು ನೀಡದ ಎಸ್‌.ಮುನಿಸ್ವಾಮಿ ಅವರಿಗೆ ಟಿಕೆಟ್‌ ನೀಡಿರುವುದು ಅಚ್ಚರಿ ತಂದಿದೆ.

ಸೋಮವಾರ ನಾಮಪತ್ರ ಸಲ್ಲಿಸಿ, ಎರಡು ದಿನಗಳ ಬಳಿಕ ಕಾದು ನೋಡುತ್ತೇನೆ. ಆ ನಂತರ ಕಾರ್ಯಕರ್ತರ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ