ಆ್ಯಪ್ನಗರ

ವೃತ್ತಿ ಶಿಕ್ಷ ಣವು ಮಕ್ಕಳ ಬದುಕಿಗೆ ಆಸರೆ: ರತ್ನಯ್ಯ

ಪಠ್ಯದ ಜತೆಯಲ್ಲೇ ಪಠ್ಯೇತರ ಚಟುವಟಿಕೆಗಳು ಸಹ ಸಮಗ್ರ ಶಿಕ್ಷ ಣದ ಭಾಗವಾಗಿದ್ದು, ಮಕ್ಕಳ ಮುಂದಿನ ಬದುಕಿಗೆ ಆಸರೆಯಾಗುವ ವೃತ್ತಿ ಶಿಕ್ಷ ಣಕ್ಕೆ ಒತ್ತು ನೀಡುವ ಅಗತ್ಯವಿದೆ ಎಂದು ಡಿಡಿಪಿಐ ಕೆ.ರತ್ನಯ್ಯ ಅಭಿಪ್ರಾಯಪಟ್ಟರು.

Vijaya Karnataka 17 Nov 2018, 5:00 am
ಕೋಲಾರ: ಪಠ್ಯದ ಜತೆಯಲ್ಲೇ ಪಠ್ಯೇತರ ಚಟುವಟಿಕೆಗಳು ಸಹ ಸಮಗ್ರ ಶಿಕ್ಷ ಣದ ಭಾಗವಾಗಿದ್ದು, ಮಕ್ಕಳ ಮುಂದಿನ ಬದುಕಿಗೆ ಆಸರೆಯಾಗುವ ವೃತ್ತಿ ಶಿಕ್ಷ ಣಕ್ಕೆ ಒತ್ತು ನೀಡುವ ಅಗತ್ಯವಿದೆ ಎಂದು ಡಿಡಿಪಿಐ ಕೆ.ರತ್ನಯ್ಯ ಅಭಿಪ್ರಾಯಪಟ್ಟರು.
Vijaya Karnataka Web career education supports childrens lives ratnaya
ವೃತ್ತಿ ಶಿಕ್ಷ ಣವು ಮಕ್ಕಳ ಬದುಕಿಗೆ ಆಸರೆ: ರತ್ನಯ್ಯ


ನಗರದ ಬಾಲಕಿಯರ ಜೂನಿಯರ್‌ ಕಾಲೇಜು ಆವರಣದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷ ಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲೆ ವೃತ್ತಿ ಶಿಕ್ಷ ಣ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಕಲಿಕೆ ಜತೆಗೆ ಗಳಿಕೆ ಹಾಗೂ ಸ್ವಾವಲಂಬಿ ಬದುಕಿಗೆ ದಾರಿ ತೋರುವ ವೃತ್ತಿ ಶಿಕ್ಷ ಣ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇಡೀ ಶಾಲೆ ಪರಿಸರ ಸಂರಕ್ಷ ಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ವೃತ್ತಿ ಶಿಕ್ಷ ಕರ ಪಾತ್ರ ಪಠ್ಯಕ್ಕೆ ಪೂರಕವಾಗಿದ್ದು, ಮಕ್ಕಳಲ್ಲಿ ನಿಸರ್ಗಸ್ನೇಹಿ ಭಾವನೆ ಬಲಗೊಳಿಸುವಲ್ಲಿ ಹೆಚ್ಚು ಸಹಕಾರಿಯಾಗಿದೆ ಎಂದರು.

ಶಿಕ್ಷ ಣಾಧಿಕಾರಿ ಸಿ.ಆರ್‌.ಅಶೋಕ್‌ ಗಾಂಧೀಜಿ ಕನಸಾದ ಗೃಹ ಕೈಗಾರಿಕೆಗಳನ್ನು ನಾವು ಮರೆತಿದ್ದರಿಂದಲೇ ಇಂದು ನಿರುದ್ಯೋಗ ತಾಂಡವವಾಡುತ್ತಿದೆ. ಬಾಪು ಕನಸಿಕನ ಮೂಲ ಶಿಕ್ಷ ಣವನ್ನು ನಾವು ಬಲಗೊಳಿಸಬೇಕಾಗಿದೆ ಎಂದು ತಿಳಿಸಿ, ವಸ್ತುಪ್ರದರ್ಶನ ಏರ್ಪಡಿಸಿದ್ದ ಶಾಲೆಗೆ 1ಸಾವಿರ ರೂ. ಬಹುಮಾನ ಘೋಷಿಸಿದರು.

ವೃತ್ತಿ, ದೈಹಿಕ ಶಿಕ್ಷ ಕರಾದರೂ ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿರುವ ಅನೇಕ ಶಿಕ್ಷ ಕರಿದ್ದಾರೆ, ಅವರಲ್ಲಿ ಜಿಲ್ಲೆಯ ಜಿ.ರಾಮಯ್ಯ, ಎಂ.ರಾಮಯ್ಯನವರು ಮಕ್ಕಳಲ್ಲಿ ನೈತಿಕತೆ ತುಂಬುವಲ್ಲಿ ನೀಡಿದ ಬೋಧನೆ ಮರೆಯುವಂತಿಲ್ಲ, ಅಂತಹ ಶಿಕ್ಷ ಕರಂತೆ ನೀವು ಮಕ್ಕಳ ಮನಸ್ಸಿನಲ್ಲಿ ಉಳಿಯುವ ರೀತಿ ಅವರಿಗೆ ಬದುಕು ರೂಪಿಸಿ ಎಂದರು.

ಜಿಲ್ಲಾ ನೌಕರರ ಸಂಘದ ಖಜಾಂಚಿ ಎಸ್‌.ಚೌಡಪ್ಪ, ರಾಜ್ಯ ದೈಹಿಕ ಶಿಕ್ಷ ಕರ ಸಂಘದ ಅಧ್ಯಕ್ಷ ಇ.ಶ್ರೀನಿವಾಸಗೌಡ, ವಿಷಯ ಪರಿವೀಕ್ಷ ಕರಾದ ಕೃಷ್ಣಪ್ಪ, ಗಾಯತ್ರಿ, ಶಶಿವಧನ ಅವರನ್ನು ವೃತ್ತಿ ಶಿಕ್ಷ ಕರ ಸಂಘದಿಂದ ಸನ್ಮಾನಿಸಲಾಯಿತು.

ವಿಷಯ ಪರಿವಿಕ್ಷ ಕ ನರಸಿಂಹರೆಡ್ಡಿ ಅಧ್ಯಕ್ಷ ತೆ ವಹಿಸಿದ್ದು, ಜಿಲ್ಲಾ ಸಹಶಿಕ್ಷ ಕರ ಸಂಘದ ಅಧ್ಯಕ್ಷ ಶಂಕರಪ್ಪ, ಮಾತನಾಡಿದರು.

ಸಂಘದ ಅಧ್ಯಕ್ಷ ವೆಂಕಟೇಶಬಾಬು, ಕಾರ್ಯದರ್ಶಿ ವೆಂಕಟೇಶಪ್ಪ, ಖಜಾಂಚಿ ಮಾರ್ಕಂಡೇಶ್ವರ್‌, ಪದಾಧಿಕಾರಿಗಳಾದ ಆಂಜಿನಪ್ಪ, ನಾಗರಾಜ್‌, ಆನಂದ್‌ ಶ್ರೀನಿವಾಸ್‌, ರಾಮಚಂದ್ರ, ಗೋಪಾಲಕೃಷ್ಣ, ವಿಶ್ವೇಶ್ವರಯ್ಯ, ಶ್ರೀನಿವಾಸಲು, ಪ್ರಕಾಶ್‌ ಬಾಬು, ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ