ಆ್ಯಪ್ನಗರ

ಮುದ್ರಾ ಯೋಜನೆ ಮಾಹಿತಿ ನೀಡದಿದ್ದರೆ ಕ್ರಿಮಿನಲ್‌ ಕೇಸ್‌

ಕೇಂದ್ರ ಸರಕಾರದ ಮುದ್ರಾ ಯೋಜನೆಯನ್ನು ಬ್ಯಾಂಕುಗಳಲ್ಲಿಸರಿಯಾಗಿ ಅನುಷ್ಠಾನಗೊಳಿಸದಿರುವ ಬಗ್ಗೆ ದೂರುಗಳು ಬಂದಿದ್ದು, ಯೋಜನೆ ಕುರಿತು ಸಮಗ್ರ ಮಾಹಿತಿಯನ್ನು 10 ದಿನಗಳ ಒಳಗೆ ನೀಡದಿದ್ದರೆ ಅಟ್ರಾಸಿಟಿ ಕಾಯಿದೆಯಡಿ ಕ್ರಿಮಿನಲ್‌ ಕೇಸು ದಾಖಲಿಸುತ್ತೇನೆ ಎಂದು ಸಂಸದ ಎಸ್‌.ಮುನಿಸ್ವಾಮಿ ಬ್ಯಾಂಕ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Vijaya Karnataka 14 Sep 2019, 3:34 pm
ಕೋಲಾರ: ಕೇಂದ್ರ ಸರಕಾರದ ಮುದ್ರಾ ಯೋಜನೆಯನ್ನು ಬ್ಯಾಂಕುಗಳಲ್ಲಿಸರಿಯಾಗಿ ಅನುಷ್ಠಾನಗೊಳಿಸದಿರುವ ಬಗ್ಗೆ ದೂರುಗಳು ಬಂದಿದ್ದು, ಯೋಜನೆ ಕುರಿತು ಸಮಗ್ರ ಮಾಹಿತಿಯನ್ನು 10 ದಿನಗಳ ಒಳಗೆ ನೀಡದಿದ್ದರೆ ಅಟ್ರಾಸಿಟಿ ಕಾಯಿದೆಯಡಿ ಕ್ರಿಮಿನಲ್‌ ಕೇಸು ದಾಖಲಿಸುತ್ತೇನೆ ಎಂದು ಸಂಸದ ಎಸ್‌.ಮುನಿಸ್ವಾಮಿ ಬ್ಯಾಂಕ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
Vijaya Karnataka Web criminal case if mudra scheme is not informed
ಮುದ್ರಾ ಯೋಜನೆ ಮಾಹಿತಿ ನೀಡದಿದ್ದರೆ ಕ್ರಿಮಿನಲ್‌ ಕೇಸ್‌


ನಗರದ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿಶುಕ್ರವಾರ ನಡೆದ ಬ್ಯಾಂಕ ಅಧಿಕಾರಿಗಳ ಸಭೆಯಲ್ಲಿಅವರು ಮಾತನಾಡಿದರು.

ಅಧಿಕಾರಿಗಳು ತಮಗೆ ಬೇಕಾದವರಿಗೆ ನೀಡಿ ಬಡವರಿಗೆ ಅನ್ಯಾಯ ಮಾಡುತ್ತಿದ್ದೀರಿ, ಈ ಯೋಜನೆಯ ಅನುಷ್ಟಾನ ಎಷ್ಟರ ಮಟ್ಟಿಗೆ ಆಗಿದೆ ಯಾರಾರ‍ಯರಿಗೆ ಸಾಲ ವಿತರಣೆ ಮಾಡಿದ್ದೀರಿ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡದಿದ್ದರೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಡವರ ಉದ್ಧಾ ಇಷ್ಟವಿಲ್ಲವೇ?: ಕೇಂದ್ರ ಸರಕಾರವು ಜನತೆಗೆ ಅನುಕೂಲ ಆಗಲೆಂದು ಮುದ್ರಾ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಬ್ಯಾಂಕ್‌ ಮ್ಯಾನೇಜರ್‌ಗಳು ಅದರ ಕಡೆ ಗಮನ ಕೊಡುತ್ತಿಲ್ಲ. ಬಡವರಿಗೆ ಬ್ಯಾಂಕುಗಳು ಸಾಲ ಕೊಡುವುದಿಲ್ಲ. ಕಳ್ಳರು ಮತ್ತು ದೇಶ ಬಿಟ್ಟು ಹೋಗುವವರಿಗೆ ಎಷ್ಟು ಬೇಕಾದರೂ ಹಣ ಕೊಡುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.

ಮುದ್ರಾ ಯೋಜನೆಯಲ್ಲಿಬೇರೆ ಜಿಲ್ಲೆಗಳಲ್ಲಿ1.5 ಲಕ್ಷ ಮಂದಿಗೆ ಸಾಲ ವಿತರಣೆ ಮಾಡಲಾಗಿದೆ ಆದರೆ ನಮ್ಮಲ್ಲಿಕೇವಲ 14 ಸಾವಿರ ಮಂದಿಗೆ ಮಾತ್ರ ಸಾಲ ವಿತರಣೆ ಆಗಿದೆ ಯಾಕೆ, ನಿಮಗೆ ಬಡವರಿಗೆ ಸಾಲ ಕೊಡಲು ಮನಸ್ಸಿಲ್ಲವೇ ಅವರು ಉದ್ಧಾರ ಆಗುವುದು ನಿಮಗೆ ಇಷ್ಟವಿಲ್ಲವೇ ಎಂದು ಕಿಡಿಕಾರಿದರು.

ನಿಮಗೆ ಶೋಷಿತ ವರ್ಗದವರ ಏಳಿಗೆ ಬೇಕಾಗಿಲ್ಲ. ನಿಮ್ಮ ಹಿಂದೆ ತಿರುಗಾಡುವವರು, ಮಧ್ಯವರ್ತಿಗಳು, ಗುತ್ತಿಗೆದಾರರಿಗೆ ಕೇಳಿದಷ್ಟು ಸಾಲ ಕೊಡುತ್ತೀರಿ ಬಡವರು ಬಂದರೆ ಬ್ಯಾಂಕಿನಿಂದ ಹೊರ ಹಾಕುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

್ಕಊyತರು, ಮಹಿಳೆಯರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು,ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಕಾರ ಅನೇಕ ಸಾಲ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಬ್ಯಾಂಕು ಅಧಿಕಾರಿಗಳು ಈ ಯೋಜನೆಗಳನ್ನು ಸರಿಯಾದ ಪ್ರಮಾಣದಲ್ಲಿಅನುಷ್ಠಾನಗೊಳಿಸುತ್ತಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಕೃಷಿ ಸಾಲಗಳನ್ನು ನೀಡಿ ಅವರನ್ನು ಆರ್ಥಿಕವಾಗಿ ಮೇಲೆ ತರಲು ಬ್ಯಾಂಕುಗಳು ಮುಂದಾಗಬೇಕು. ಆದರೆ ಶೇ.29ರಷ್ಟು ಕೃಷಿ ಸಾಲಗಳನ್ನು ನೀಡಿದರೆ ಅವರ ಆರ್ಥಿಕ ಮಟ್ಟ ಸುಧಾರಿಸುವುದು ಹೇಗೆ ಎಂದು ಕಿಡಿಕಾರಿದರು.

ಕೋಲಾರ ಜಿಲ್ಲೆಬರಗಾಲದ ಜಿಲ್ಲೆಇಲ್ಲಿಕಳೆದ 14 ವರ್ಷಗಳಿಂದಲೂ ಮಳೆ ಇಲ್ಲದಂತಾಗಿದೆ. ಇಲ್ಲಿನ ರೈತರು ಮತ್ತು ದಲಿತರು ಹಾಗೂ ಬಡವರ ಪರ ಕೆಲಸ ಮಾಡದ ಬ್ಯಾಂಕುಗಳು ನಮಗೆ ಬೇಕಾಗಿಲ್ಲ. ಜನ ಪರವಾಗಿ ಕೆಲಸ ಮಾಡದ ಬ್ಯಾಂಕುಗಳಿಂದ ನಮಗೇನು ಪ್ರಯೋಜನ? ಜನರಿಗಾಗಿ ಬ್ಯಾಂಕು ಬೇಕೇ ವಿನಃ, ಬ್ಯಾಂಕಿಗಾಗಿ ಜನರಲ್ಲಎಂದು ತರಾಟೆಗೆ ತೆಗೆದುಕೊಂಡರು.

ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿಎಟಿಎಂಗಳನ್ನು ಸ್ಥಾಪನೆ ಮಾಡುವಂತೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾತನಾಡಿ, ಪ್ರಧಾನ ಮಂತ್ರಿ ಫಸಲ್‌ ಬೀಮಾ ಯೋಜನೆಯಲ್ಲಿಬ್ಯಾಂಕುಗಳು ಕೇವಲ 16 ಸಾವಿರ ಮಂದಿಯಿಂದ ಬೆಳೆ ವಿಮೆ ಮಾಡಿಸಿರುವುದು ಸರಿಯಲ್ಲ. ಈ ಜಿಲ್ಲೆಯಲ್ಲಿಕನಿಷ್ಠ 1 ಲಕ್ಷ ಮಂದಿಯಿಂದ ಬೆಳೆ ವಿಮೆ ಮಾಡಿಸಬೇಕಿತ್ತು. ಜಿಲ್ಲೆಯಲ್ಲಿಎಷ್ಟು ಮಂದಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಕೊಟ್ಟಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಹೊಸಮಠ್‌, ಕೆನರಾ ಬ್ಯಾಂಕ್‌ ಮ್ಯಾನೇಜರ್‌ ಶ್ರೀನಿವಾಸ್‌ ವೇದಿಕೆಯಲ್ಲಿಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ