ಆ್ಯಪ್ನಗರ

ನೆರೆ ಪರಿಹಾರಕ್ಕೆ ವಿಚಾರದಲ್ಲಿ ಕಾಂಗ್ರೆಸ್ ಹಳೇ ಗ್ರಾಮ ಫೋನ್ ಕ್ಯಾಸೆಟ್ ಹಾಕುತ್ತಿದೆ: ಸಿಟಿ ರವಿ ವ್ಯಂಗ್ಯ

ಕೊಪ್ಪಳದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೆರೆ ಪರಿಹಾರ ವಿಚಾರದಲ್ಲಿ ತನ್ನ ಹಳೇ ಚಾಳಿ ಮುಂದುವರೆಸಿದೆ. ಆದರೆ ಕಾಂಗ್ರೆಸ್ ಪುಡಿಗಾಸು ನೀಡುತ್ತಿತ್ತು ಎಂದಿದ್ದಾರೆ.

Vijaya Karnataka Web 21 Oct 2020, 12:14 pm
ಕೊಪ್ಪಳ: ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಳೇ ಗ್ರಾಮ ಫೋನ್ ಕ್ಯಾಸೆಟ್ ಹಾಕುತ್ತಿದೆ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
Vijaya Karnataka Web gavi mutt koppal
ಕೊಪ್ಪಳ ಗವಿ ಮಠಕ್ಕೆ ಭೇಟಿ ನೀಡಿದ ಸಿಟಿ ರವಿ


ಇಲ್ಲಿನ ಗವಿಮಠಕ್ಕೆ ಭೇಟಿ‌ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಯುಪಿಎ ಕೊಟ್ಟಿದ್ದ ನಾಲ್ಕು ಪಟ್ಟು ಹಣ ಆರು ವರ್ಷದಲ್ಲಿ ಎನ್ ಡಿಎ ಸರಕಾರದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ. ಎನ್ ಡಿಎ ಸರಕಾರ 1650 ಕೋಟಿ ರೂ. ಬಿಡುಗಡೆಗೊಳಿಸಿದೆ. ಯುಪಿಎ ಸರಕಾರ ಹಿಂದೆಲ್ಲ 130 ಕೋಟಿ ಬಿಡುಗಡೆಗೊಳಿಸುತ್ತಿತ್ತು. ಕಾಂಗ್ರೆಸ್ ಪುಡಿಗಾಸು ನೀಡುತ್ತಿತ್ತು. ಸ್ವಾಮಿನಾಥನ್ ವರದಿಯ ಬಹುತೇಕ ಅಂಶಗಳನ್ನು ಅನುಷ್ಟಾನ ಗೊಳಿಸುತ್ತಿರುವುದು ಬಿಜೆಪಿ ಸರಕಾರ.

ಎನ್ ಡಿಆರ್ ಎಫ್, ಎಸ್ ಟಿಆರ್ ಎಫ್ ಯೋಜನೆಯಲ್ಲಿ ರಾಜ್ಯ ಸರಕಾರಕ್ಕೆ ಕೇಂದ್ರ ಮೋಸ ಮಾಡುವುದಿಲ್ಲ. ರಾಜ್ಯದ ಪಾಲನ್ನು ನೆರೆ ಸಂತ್ರಸ್ತರಿಗೆ ಹೆಚ್ಚು ಅನುದಾನ ನೀಡುತ್ತಿದೆ. ವಿಶ್ವಾಸವಿರುವ ಕಡೆ ಧೈರ್ಯ ಪ್ರದರ್ಶಿಸುವ ಅವಶ್ಯಕತೆ ಇಲ್ಲ. ಮೋದಿ ಮೇಲೆ ಸಂಸದರಿಗೆ ವಿಶ್ವಾಸವಿದೆ. ಆದರೆ ಕಾಂಗ್ರೆಸ್ ನವರು ಸಂಸದರಿಗೆ ಧೈರ್ಯವಿಲ್ಲ ಎಂದು ಹೇಳುತ್ತಿದ್ದಾರೆ.

ಉತ್ತರ ಕರ್ನಾಟಕ ನೆರೆ ಪರಿಹಾರ ವಿಚಾರದಲ್ಲಿ ಸಿಎಂ ಮಲತಾಯಿ ಧೋರಣೆ: ಈಶ್ವರ ಖಂಡ್ರೆ ಆರೋಪ

ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸಮಗ್ರ ಕರ್ನಾಟಕಕ್ಕೆ ಯೋಗ್ಯ ಹಾಗೂ ಯೋಗ್ಯತೆ ಇರುವ ಯಾರಾದರೂ ಸಿಎಂ ಆಗಬಹುದು. ನಾನು ಯತ್ನಾಳ್ ಅವರಷ್ಟು ಬುದ್ಧಿವಂತನಲ್ಲ. ಆದರೆ ಸಮಗ್ರ‌ ಕರ್ನಾಟಕಕ್ಕೆ ನಾಯಕತ್ವ ಕೊಡುವ ಸಾಮರ್ಥ್ಯ ಉತ್ತರ ಕರ್ನಾಟಕಕ್ಕೆ ಇದೆ. ಈ ಕುರಿತು ಸಿಎಂ ಕರೆದು ಮಾತನಾಡುವೆ ಎಂದು ಹೇಳಿದ್ದಾರೆ.

ನೆರೆ ಪರಿಹಾರ ಆದ್ಯತೆಯಾಗಲಿ, ಜನಪ್ರತಿನಿಧಿಗಳು ಜನರ ಜೊತೆಗಿರಬೇಕು

ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಇಂಟಲಿಜೆನ್ಸ್ ವರದಿ, ಮತದಾರರ ಒಲವು ನೋಡಿದರೆ ಬಿಜೆಪಿ ಗೆಲುವು ನಿಶ್ಚಿತವಾಗಿದೆ. ಹಿಂದಿನ ಚುನಾವಣೆ ಹಾಗೂ ಪ್ರಸ್ತುತ ಚುನಾವಣೆ ವ್ಯತ್ಯಾಸವಿದೆ. ಹಿಂದಿನ ಚುನಾವಣೆ ಹಣ ಹಾಗೂ ಜಾತಿ ಆಧಾರದ ಮೇಲೆ ನಡೆಯುತ್ತಿತ್ತು. ಈಗ ಜನ ಜಾಗೃತಿಯಾಗಿದ್ದು ದೇಶದ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಆದ್ದರಿಂದ ಬಿಜೆಪಿ ಗೆಲುವು ನಿಶ್ಚಿತವಾಗಿದೆ.

ಸೆಪ್ಟೆಂಬರ್‌ ಮಹಾ ಮಳೆಗೆ ಬೆಳಗಾವಿಯಲ್ಲಿ 96 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾ

ನೆರೆ ನಿರೀಕ್ಷೆಯಿಂದ ಬಂದಿಲ್ಲ. ನೆರೆ, ಕೊರೊನಾ ಅನರೀಕ್ಷಿತ ಅಘಾತವಾಗಿದೆ. ಸರಕಾರದ ಸ್ಪಂದಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸ್ಪಂದಿಸುತ್ತಿದ್ದಾರೆ. ಸಿಎಂ ವಿಡಿಯೊ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಕೆಲ ಸಚಿವರು ಹಾಗೂ ಕುಟುಂಗಾಯದ ಮೇಲೆ‌ಬರೆ ಎಳೆದಂತಾಗಿದೆ. ಆದ್ದರಿಂದ ನೆರೆ ಪೀಡಿತ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ