ಆ್ಯಪ್ನಗರ

ಮೂವರ ವಿರುದ್ಧ ವರದಕ್ಷಿಣೆ ಕಿರುಕುಳ ದೂರು

ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಪತಿ ಸೇರಿದಂತೆ ಮೂವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ.

Vijaya Karnataka Web 15 Sep 2019, 5:00 am
ಬಂಗಾರಪೇಟೆ: ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಪತಿ ಸೇರಿದಂತೆ ಮೂವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ.
Vijaya Karnataka Web dowry harassment complaint against three
ಮೂವರ ವಿರುದ್ಧ ವರದಕ್ಷಿಣೆ ಕಿರುಕುಳ ದೂರು


ಪಟ್ಟಣದ ವಿಜಯನಗರ ನಿವಾಸಿ ಫಸೀನಾ ಸುಲ್ತಾನಾ ಎಂಬಾಕೆ 2016ರಂದು ಸೈಯದ್‌ ಇಮ್ರಾನ್‌ ಅಹ್ಮದ್‌ ಎಂಬುವರನ್ನು ವಿವಾಹ ಮಾಡಿಕೊಂಡಿದ್ದು ಅಂದು ವರದಕ್ಷಿಣೆಯಾಗಿ 5 ಲಕ್ಷ ರೂ ಬೆಲೆಬಾಳುವ ಬಂಗಾರದ ಒಡವೆಗಳು, ನಗದು 1 ಲಕ್ಷ ರೂ ನೀಡಲಾಗಿತ್ತು. ಏಳು ತಿಂಗಳ ನಂತರ ಪತಿ ಸೈಯದ್‌ ಇಮ್ರಾನ್‌ ಅಹ್ಮದ್‌, ಸೈಯದ್‌ ಅಹ್ಮದ್‌ ಹಾಗೂ ಪರ್ವಿನ್‌ ತಾಜ್‌ ಎಂಬುವರು ಮನೆಯಿಂದ ಹೆಚ್ಚುವರಿ ವರದಕ್ಷಿಣೆ ತರುವಂತೆ ದೈಹಿಕ, ಮಾನಸಿಕವಾಗಿ ಕಿರುಕುಳ ನೀಡಿದ್ದರು. ಆಗ 3 ಲಕ್ಷ ರೂ., ದ್ವಿಚಕ್ರ ವಾಹನ ನೀಡಿದ್ದರೂ ಪುನಃ 5 ಲಕ್ಷ ರೂ. ತರುವಂತೆ ತವರು ಮನೆಗೆ ಕಳುಹಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ