ಆ್ಯಪ್ನಗರ

ವರದಕ್ಷಿಣೆ ಕಿರುಕುಳ: ಹೆಂಡತಿ ಆತ್ಮಹತ್ಯೆ

ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿದ್ದ ಗೃಹಿಣಿ ನಂದಿನಿಬಾಯಿ ಶವಸಂಸ್ಕಾರವನ್ನು ಆರೋಪಿ ಗಂಡನ ಮನೆಯ ಮುಂದೆಯೇ ನೆರವೇರಿಸಿ ನಂತರ ಸಂಬಂಧಿಕರು ಆರೋಪಿ ಗಂಡನ ಮನೆಯ ಮೇಲೆ ದಾಳಿ ನಡೆಸಿ ಮನೆಯಲ್ಲಿದ್ದ ವಸ್ತುಗಳನ್ನು ನಾಶಪಡಿಸಿರುವ ಘಟನೆ ತಾಲೂಕಿನ ತಟ್ಟನಹಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.

Vijaya Karnataka 17 May 2019, 5:00 am
ಬಂಗಾರಪೇಟೆ: ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿದ್ದ ಗೃಹಿಣಿ ನಂದಿನಿಬಾಯಿ ಶವಸಂಸ್ಕಾರವನ್ನು ಆರೋಪಿ ಗಂಡನ ಮನೆಯ ಮುಂದೆಯೇ ನೆರವೇರಿಸಿ ನಂತರ ಸಂಬಂಧಿಕರು ಆರೋಪಿ ಗಂಡನ ಮನೆಯ ಮೇಲೆ ದಾಳಿ ನಡೆಸಿ ಮನೆಯಲ್ಲಿದ್ದ ವಸ್ತುಗಳನ್ನು ನಾಶಪಡಿಸಿರುವ ಘಟನೆ ತಾಲೂಕಿನ ತಟ್ಟನಹಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
Vijaya Karnataka Web dowry harassment wife commits suicide
ವರದಕ್ಷಿಣೆ ಕಿರುಕುಳ: ಹೆಂಡತಿ ಆತ್ಮಹತ್ಯೆ


ಗೃಹಿಣಿ ನಂದಿನಬಾಯಿ(26) ಬುಧುವಾರ ತನ್ನ ತವರುಮನೆ ತಾಲೂಕಿನ ಬೂರಮಾಕನಹಳ್ಳಿ ಗ್ರಾಮದಲ್ಲಿ ನೇಣಿಗೆ ಶರಣಾಗಿದ್ದಳು. ನಂತರ ಗುರುವಾರ ಪೋಷಕರು ಪೋಸ್ಟ್‌ಮಾರ್ಟ್‌ಂ ಮಾಡಿಸಿ ಗ್ರಾಮಕ್ಕೆ ಶವವನ್ನು ತಂದಿದ್ದರು. ನಂತರ ನಂದಿನಿಬಾಯಿ ಆತ್ಮಹತ್ಯೆಗೆ ಗಂಡ, ಅತ್ತೆ, ಮಾವ ಕಾರಣ, ಆಕೆಯ ಶವವನ್ನು ಗಂಡನ ಜಮೀನಿನಲ್ಲಿಯೇ ಸಂಸ್ಕಾರ ಮಾಡಬೇಕೆಂದು ತೀರ್ಮಾನಿಸಿ ಶವವನ್ನು ತಟ್ಟನಹಳ್ಳಿ ಗ್ರಾಮಕ್ಕೆ ತೆಗೆದುಕೊಂಡು ಆರೋಪಿ ಗಂಡ ಏಕಾಂಬರಂ ಮನೆಯ ಮುಂದೆ ನಂದಿನಿಬಾಯಿ ಶವಕ್ಕೆ ಬೆಂಕಿ ಇಟ್ಟು ಸಂಸ್ಕಾರವನ್ನು ಮಾಡಲಾಯಿತು.

ನಂತರ ಮೃತಳ ಸಂಬಂಧಿಕರು ನಂದಿನಿಬಾಯಿ ಸಾವಿಗೆ ಕಾರಣರಾದ ಅತ್ತೆ, ಮಾವ ಗಂಡ ವಾಸವಿದ್ದ ಮನೆಯ ಬಾಗಿಲು ಮುರಿದು ಮನೆಯೊಳಗೆ ನುಗ್ಗಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ನಾಶಪಡಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಬರುವಷ್ಟರಲ್ಲಿ ಉದ್ರಿಕ್ತರು ಜಾಗ ಖಾಲಿ ಮಾಡಿದ್ದು, ಮನೆಯ ಮುಂಭಾಗ ನಂದಿನಿಬಾಯಿ ಅವರ ಶವಸಂಸ್ಕಾರ ಮಾಡಿದ್ದ ಬೆಂಕಿ ಉರಿಯುತ್ತಲೇ ಇತ್ತು. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ