ಆ್ಯಪ್ನಗರ

ಮೃತ ಕೊರೊನಾ ಸೋಂಕಿತರನ್ನು ಅಮಾನವೀಯವಾಗಿ ಅಂತ್ಯಕ್ರಿಯೆ ಮಾಡಿದ್ದು ತಪ್ಪು, ಮಾನವೀಯತೆ ಸತ್ತು ಹೋಗಿದೆ: ರಮೇಶ್‌ಕುಮಾರ್‌

ಕೋವಿಡ್ ಸೋಂಕಿತರನ್ನ ಅಮಾನವೀಯವಾಗಿ ಅಂತ್ಯಕ್ರಿಯೆ ಮಾಡಿರುವುದು ನಾವು ಎತ್ತ ಸಾಗಿದ್ದೇವೆ ಎಂಬುದನ್ನು ತೋರಿಸುತ್ತದೆ. ಸೋಂಕಿತರನ್ನ ವ್ಯವಸ್ಥಿತವಾಗಿ ಅಂತ್ಯಕ್ರಿಯೇ ಮಾಡಬೇಕಿತ್ತು ಎಂದು ಮಾಜಿ ಸ್ಪೀಕರ್ ಹೇಳಿದರು.

Vijaya Karnataka Web 3 Jul 2020, 4:39 pm
ಕೋಲಾರ: ರಾಜ್ಯದಲ್ಲಿ ಕೊರೊನಾ ಸೋಂಕಿತರನ್ನ ಅಮಾನವೀಯವಾಗಿ ಅಂತ್ಯಕ್ರಿಯೆ ಮಾಡಿದ್ದು ನಿಜಕ್ಕೂ ಬೇಸರ ತರಿಸಿದೆ. ಮಾನವೀಯತೆ ನೆಲೆಯಲ್ಲಾದರೂ ಗೌರವಯುತ ಬೀಳ್ಗೊಡುಗೆ ನೀಡಬೇಕಾಗಿತ್ತು ಎಂದು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ತಿಳಿಸಿದ್ದಾರೆ.
Vijaya Karnataka Web ರಮೇಶ್‌ ಕುಮಾರ್‌
ರಮೇಶ್ ಕುಮಾರ್


ಕೋಲಾರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಸರಕಾರಕ್ಕೆ ತಿಳಿವಳಿಕೆ ಕೊರತೆ ಇದೆ, ಬೇಜವಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದು ಸರಕಾರದ ವಿರುದ್ದ ಬೇಸರ‌ ವ್ಯಕ್ತಪಡಿಸಿದರು.

ಜನರಲ್ಲಿ ಜಾಗೃತಿ ಬದಲಾಗಿ ಹೆದರಿಕೆ ಬಂದಿದೆ. ಅರಿವಿನ ಕೊರತೆಯಿಂದ ಕೊರೊನಾ ವಾರಿಯರ್ಸ್‌ಗಳಿಗೂ ಇದರಿಂದ ಭಯವಾಗಿದೆ. ನಮ್ಮಲ್ಲಿ ಬಂಧ ಬಳಗ, ರಕ್ತ ಸಂಬಂಧ, ಮಾನವೀಯತೆ ಸತ್ತು ಹೋಗಿದೆ. ಕಾಯಿಲೆಗಿಂತ ಹೆಚ್ಚಾಗಿ ರಾಕ್ಷರಂತೆ ವರ್ತಿಸುತ್ತಿದ್ದೇವೆ ಎಂದು ರಮೇಶ್‌ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಕೋವಿಡ್ ಸೋಂಕಿತರನ್ನ ಅಮಾನವೀಯವಾಗಿ ಅಂತ್ಯಕ್ರಿಯೆ ಮಾಡಿರುವುದು ನಾವು ಎತ್ತ ಸಾಗಿದ್ದೇವೆ ಎಂಬುದನ್ನು ತೋರಿಸುತ್ತದೆ. ಸೋಂಕಿತರನ್ನ ವ್ಯವಸ್ಥಿತವಾಗಿ ಅಂತ್ಯಕ್ರಿಯೇ ಮಾಡಬೇಕಿತ್ತು ಎಂದು ಮಾಜಿ ಸ್ಪೀಕರ್ ಹೇಳಿದರು.

15 ಅಡಿ ಆಳ ತೆಗೆದ ಅಂತ್ಯಕ್ರಿಯೇ ಮಾಡಬಹುದು, ಆದರೆ ತಿಳಿವಳಿಕೆ ಕೊರತೆ ಇದೆ. ನನ್ನ ರಕ್ತ ಸಂಬಂಧಿಗಳೇ ಯಾರಾದ್ರು ಹೀಗೆ ಆದ್ರೆ ಹೇಗೆ ಅನ್ನೋ ಪ್ರಜ್ಞೆ ಸರಕಾರಕ್ಕೆ ಇರಬೇಕು. ನಾನು ಮಂತ್ರಿ, ಸರಕಾರ ಅನ್ನೋದನ್ನ ಬಿಡಬೇಕಿದೆ, ಅಧಿಕಾರ ಶಾಶ್ವತವಲ್ಲ, ಮಾನವೀಯತೆ ಶಾಶ್ವತ ಎಂದು ಕೆಆರ್‌ ರಮೇಶ್‌ ಕುಮಾರ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ