ಆ್ಯಪ್ನಗರ

ಕೋಟಿಲಿಂಗದಲ್ಲಿ ಉಚಿತ ವೈದ್ಯಕೀಯ ಸೇವೆಗೆ ಚಾಲನೆ

ಕೋಟಿಲಿಂಗ ದೇವಾಲಯದ ವಾಹನ ನಿಲ್ದಾಣದಲ್ಲಿ ನೂತನವಾಗಿ ಪ್ರಾರಂಭಿಸಿರುವ ಉಚಿತ ವೈದ್ಯಕೀಯ ಸೇವೆ ಘಟಕಕ್ಕೆ ಕೋಟಿಲಿಂಗ ದೇವಾಲಯದ ಧರ್ಮಾಧಿಕಾರಿ ಸಾಂಬಶಿವಮೂರ್ತಿ ಸ್ವಾಮೀಜಿ ಪುತ್ರ ಡಾ: ಶಿವಪ್ರಸಾದ ಚಾಲನೆ ನೀಡಿದರು.

Vijaya Karnataka 14 Mar 2019, 5:00 am
ಕೆಜಿಎಫ್‌: ಕೋಟಿಲಿಂಗ ದೇವಾಲಯದ ವಾಹನ ನಿಲ್ದಾಣದಲ್ಲಿ ನೂತನವಾಗಿ ಪ್ರಾರಂಭಿಸಿರುವ ಉಚಿತ ವೈದ್ಯಕೀಯ ಸೇವೆ ಘಟಕಕ್ಕೆ ಕೋಟಿಲಿಂಗ ದೇವಾಲಯದ ಧರ್ಮಾಧಿಕಾರಿ ಸಾಂಬಶಿವಮೂರ್ತಿ ಸ್ವಾಮೀಜಿ ಪುತ್ರ ಡಾ: ಶಿವಪ್ರಸಾದ ಚಾಲನೆ ನೀಡಿದರು.
Vijaya Karnataka Web free health service at kotilingeshwara
ಕೋಟಿಲಿಂಗದಲ್ಲಿ ಉಚಿತ ವೈದ್ಯಕೀಯ ಸೇವೆಗೆ ಚಾಲನೆ


ಈ ವೇಳೆ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ನಮ್ಮ ತಂದೆಯವರು ಕಮ್ಮಸಂದ್ರ ಎಂಬ ಒಂದು ಸಣ್ಣ ಗ್ರಾಮವನ್ನು ಗೂಗಲ್‌ನಲ್ಲೂ ಕಾಣಬಹುದಾದ ಶ್ರೀಕ್ಷೇತ್ರವಾಗಿ ರೂಪಿಸಿದ್ದಾರೆ. ಕಮ್ಮಸಂದ್ರ ಎಂಬುದಕ್ಕಿಂತ ಕೋಟಿಲಿಂಗ ಎಂದೇ ಖ್ಯಾತಿ ಪಡೆದಿದೆ. ಈ ಕ್ಷೇತ್ರದ ಜನರ ಋುಣವನ್ನು ತೀರಿಸುವ ಜವಾಬ್ದಾರಿ ಹೊತ್ತಿದ್ದ ತಂದೆಯವರು ಹಲವು ಸಾಮಾಜಿಕ ಸೇವೆಗಳನ್ನು ಮಾಡಿದ್ದರು. ಜೀವಂತವಾಗಿದ್ದ ಸಂದರ್ಭದಲ್ಲಿ ಈ ಭಾಗದ ಬಡ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಉಚಿತ ವೈದ್ಯಕೀಯ ಆಸ್ಪತ್ರೆ ಪ್ರಾರಂಭಿಸಬೇಕು ಎಂಬ ಮಹಾದಾಸೆಯನ್ನು ಹೊಂದಿದ್ದರು. ಅವರ ಅಕಾಲಿಕ ನಿಧನದ ನಂತರ ಆಸೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಅವರ ಸಮಾಧಿ ಮುಂಭಾಗದಲ್ಲೇ ಕ್ಲಿನಿಕ್‌ ಪ್ರಾರಂಭಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಪ್ರಥಮ ಚಿಕಿತ್ಸೆಯನ್ನು ನೀಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ ಮತ್ತು ರೋಗಿಗಳಿಗೆ ಉಚಿತವಾಗಿ ಔಷಧಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ಉಚಿತ ಶಿಕ್ಷ ಣ ನನ್ನ ಕನಸು: ನಮ್ಮ ತಂದೆ ಸ್ಪಾಪನೆ ಮಾಡಿರುವ ಆಕ್ಸ್‌ಫರ್ಡ್‌ ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷ ಣವನ್ನು ನೀಡಬೇಕು ಎಂಬ ಚಿಂತನೆ ನಡೆಸಲಾಗುತ್ತಿದ್ದು ದೈವ ಇಚ್ಛೆಯಂತೆ ನಡೆಯಲಿದೆ ಎಂದು ಹೇಳಿದರು.

ಕೆಡಿಎ ಮಾಜಿ ಅಧ್ಯಕ್ಷ ಮುನಿರತ್ನಂನಾಯ್ಡು ಮಾತನಾಡಿ, ಸಾಂಬಶಿವಮೂರ್ತಿಗಳು ಭವ್ಯವಾದ ಸಂಸ್ಥೆಯನ್ನು ಕಟ್ಟಿ ಪೋಷಣೆ ಮಾಡಿದ್ದು ಅವರು ಹಾಕಿಕೊಟ್ಟ ಹಾದಿಯಲ್ಲಿ ಪುತ್ರ ಡಾ: ಶಿವಪ್ರಸಾದ ಮುನ್ನಡೆಸಿಕೊಂಡು ಹೊಗಬೇಕಿದೆ. ಅವರಿಗೆ ಬೆನ್ನೆಲುಬಾಗಿ ನಾವು ನಿಲ್ಲಲಿದ್ದೇವೆ. ಕೋಟಿಲಿಂಗ ಕ್ಷೇತ್ರ ಬೃಹದಾಕಾರವಾಗಿ ಬೆಳೆಯಲಿ ಎಂಬು ಶುಭ ಕೋರಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯ ಮಂಜುನಾಥ್‌, ನಿವೃತ್ತ ಪೊಲೀಸ್‌ ಅಧಿಕಾರಿ ಗಿರಿಜಾಪತಿ, ಕಮ್ಮಸಂದ್ರ ಗ್ರಾಪಂ ಅಧ್ಯಕ್ಷ ನಾಗರಾಜ್‌, ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ನಾಗರಾಜ್‌, ಶ್ರೀನಿವಾಸ, ರಘು, ನಾಯ್ಡು, ಗೋಪಾಲ್‌, ನಂಜುಂಡಪ್ಪ, ಶಿವಣ್ಣ, ರಾಮಮೂರ್ತಿನಾಯ್ಡು ಹಾಗೂ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ