ಆ್ಯಪ್ನಗರ

ರಕ್ತದಾನದ ಬಗೆಗಿನ ಮೂಢನಂಬಿಕೆ ಹೋಗಲಾಡಿಸಿ

ರಕ್ತದಾನ ಮಾಡಿದರೆ ಏನೋ ಸಮಸ್ಯೆಯಾಗುವುದೆಂಬ ಮೂಢನಂಬಿಕೆ ಗ್ರಾಮೀಣ ಪ್ರದೇಶದಲ್ಲಿದ್ದು, ಅದನ್ನು ಹೋಗಲಾಡಿಸಲು ವಿದ್ಯಾರ್ಥಿಗಳು ಪಣತೊಡಬೇಕು ಎಂದು ಎಂದು ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜೇಂದ್ರ ಕರೆ ನೀಡಿದರು.

Vijaya Karnataka 17 Mar 2019, 5:00 am
ಕೋಲಾರ : ರಕ್ತದಾನ ಮಾಡಿದರೆ ಏನೋ ಸಮಸ್ಯೆಯಾಗುವುದೆಂಬ ಮೂಢನಂಬಿಕೆ ಗ್ರಾಮೀಣ ಪ್ರದೇಶದಲ್ಲಿದ್ದು, ಅದನ್ನು ಹೋಗಲಾಡಿಸಲು ವಿದ್ಯಾರ್ಥಿಗಳು ಪಣತೊಡಬೇಕು ಎಂದು ಎಂದು ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜೇಂದ್ರ ಕರೆ ನೀಡಿದರು.
Vijaya Karnataka Web get rid of superstition about blood donation
ರಕ್ತದಾನದ ಬಗೆಗಿನ ಮೂಢನಂಬಿಕೆ ಹೋಗಲಾಡಿಸಿ


ಸರಕಾರಿ ಮಹಿಳಾ ಕಾಲೇಜಿನಲ್ಲಿ ಶನಿವಾರ ಕಾಲೇಜಿನ ರೆಡ್‌ ಕ್ರಾಸ್‌ ಘಟಕ ಮತ್ತು ಎಸ್‌ಎನ್‌ಆರ್‌ ಆಸ್ಪತ್ರೆಯ ರಕ್ತನಿಧಿ ಆಶ್ರಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಕ್ತದಾನ ಮಾಡಲು ಮುಂದಾಗುವುದರಿಂದ ನಿಮ್ಮ ಆರೋಗ್ಯದ ಮಾಹಿತಿಯೂ ಸಿಗುತ್ತದೆ, ರಕ್ತದ ಗುಂಪು ಯಾವುದು ಎಂಬುದರ ಅರಿವು ಆಗುತ್ತದೆ ಎಂದ ಅವರು, ವಿದ್ಯಾರ್ಥಿಗಳು ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿ ಎಂದು ಹೇಳಿದರು.

ದೇಶದಲ್ಲಿ ಪ್ರತಿನಿತ್ಯ ಆಗುತ್ತಿರುವ ಅಪಘಾತಗಳಿಂದಾಗಿ ಅನೇಕರು ಸಾವನ್ನಪ್ಪುತ್ತಿದ್ದಾರೆ, ಲಕ್ಷಾಂತರ ಮಂದಿ ರಕ್ತಸ್ರಾವದಿಂದಾಗಿ ಜೀವ ಉಳಿಸಿಕೊಳ್ಳಲು ತೊಳಲಾಟ ನಡೆಸುತ್ತಾರೆ. ಇಂತಹ ಸಂದರ್ಭದಲ್ಲಿ ನೀವು ನೀಡುವ ರಕ್ತ ಮತ್ತೊಂದು ಜೀವದ ಉಳಿವಿಗೆ ಕಾರಣವಾಗುತ್ತದೆ ಎಂಬುದು ಸಂತಸದ ವಿಷಯವಲ್ಲವೇ ಎಂದರು.

ಮಹಿಳೆಯರು ಪ್ರಸವದ ಸಂದರ್ಭದಲ್ಲಿ ಅನಿಮಿಯಾ ಅಥವಾ ರಕ್ತಹೀನತೆಯಿಂದ ತೊಂದರೆಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ನಿದರ್ಶನಗಳು ಇವೆ, ಇಂತಹವರಿಗೂ ನೀವುನೀಡುವ ರಕ್ತ ಜೀವ ದ್ರವ್ಯವಾಗಿ ಬದುಕು ನೀಡುತ್ತದೆ ಎಂಬುದನ್ನು ಅರಿತು ರಕ್ತದಾನಕ್ಕೆ ಮುಂದಾಗಬೇಕು ಎಂದರು.

ಮತ್ತೊಂದು ಜೀವದ ರಕ್ಷ ಣೆಗೆ ಕಾರಣವಾಗುವ ರಕ್ತದಾನದಂತಹ ಮಹತ್ಕಾರ್ಯದಲ್ಲಿ ವಿದ್ಯಾರ್ಥಿ ಸಮುದಾಯ ಹೆಚ್ಚಿನ ರೀತಿಯಲ್ಲಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಕಾಳಜಿ ಬೆಳೆಸಿಕೊಳ್ಳಬೇಕು ಎಂದರು.

ರಕ್ತದಾನದಿಂದ ನಿಮ್ಮ ಆರೋಗ್ಯ ಉತ್ತಮವಾಗುತ್ತದೆ, ಯಾವುದೇ ತೊಂದರೆಗಳು ಆಗುವುದಿಲ್ಲ ಎಂದ ಅವರು, ದೇಹದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೊಸ ರಕ್ತ ಸಂಗ್ರಹವಾಗುತ್ತದೆ ಭಯಪಡುವ ಅಗತ್ಯವೇ ಇಲ್ಲ.

ಇತ್ತೀಚಿನ ದಿನಗಳಲ್ಲಿ ರಕ್ತವನ್ನು ವಿಭಜಿಸಿ ಯಾವ ಅಂಶದ ಕೊರತೆ ಇದೆಯೋ ಅದನ್ನು ಮಾತ್ರ ರೋಗಿಗೆ ನೀಡುವ ತಂತ್ರಜ್ಞಾನ ಅಭಿವೃದ್ದಿಯಾಗಿದ್ದು, ಇದರಿಂದ ರಕ್ತದ ಅಭಾವಕ್ಕೆ ಸ್ವಲ್ಪಮಟ್ಟಿನ ಪರಿಹಾರ ಸಿಗುತ್ತಿದೆ ಎಂದರು.

ಶಿಬಿರದಲ್ಲಿ 21 ಯುನಿಟ್‌ ರಕ್ತ ಸಂಗ್ರಹವಾಗಿದ್ದು, ಕೆಲವು ವಿಶೇಷ ಗುಂಪಿನ ರಕ್ತದವರಿಂದ ರಕ್ತ ಸಂಗ್ರಹಿಸದೇ ಅವರ ವಿಳಾಸ ಪಡೆದು ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಲು ಬನ್ನಿ ಎಂದು ರಕ್ತನಿಧಿಯ ಅಧಿಕಾರಿಗಳು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರಕ್ತನಿಧಿ ಅಧಿಕಾರಿ ಡಾ.ಕಿಶೋರ್‌, ಕಾಲೇಜಿನ ಅಧೀಕ್ಷ ಕ ಗೋಪಿನಾಥ್‌, ಪ್ರಾಧ್ಯಾಪಕರಾದ ಮುನಿರಾಜು, ಪ್ರಕಾಶ್‌, ಪ್ರೊ.ಬೃಂದಾ, ವಿನುತಾ, ನಾಗೇಶ್‌, ನಾಗರಾಜ್‌, ಭಾಗ್ಯಲಕ್ಷ್ಮಿ, ದ್ಯಾವಪ್ಪ, ಸಿಬ್ಬಂದಿ ಸುರೇಶ್‌ ಮತ್ತಿತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ