ಆ್ಯಪ್ನಗರ

ಸ್ವಾತಂತ್ರ್ಯಬಂದು 70 ವರ್ಷ ಕಳೆದರು ಸೂರಿಗಾಗಿ ಪರದಾಟ: ಶಾಸಕ ವಿಷಾದ

ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದರೂ ಸೂರಿಲ್ಲದೆ ಲಕ್ಷಾಂತರ ಕುಟುಂಬಗಳು ಬಳಲುತ್ತಿವೆ ಎಂದು ಶಾಸಕ ಎಚ್‌.ನಾಗೇಶ್‌ ಆತಂಕ ವ್ಯಕ್ತಪಡಿಸಿದ್ದಾರೆ.

Vijaya Karnataka 27 Jan 2019, 5:00 am
ಮುಳಬಾಗಲು: ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದರೂ ಸೂರಿಲ್ಲದೆ ಲಕ್ಷಾಂತರ ಕುಟುಂಬಗಳು ಬಳಲುತ್ತಿವೆ ಎಂದು ಶಾಸಕ ಎಚ್‌.ನಾಗೇಶ್‌ ಆತಂಕ ವ್ಯಕ್ತಪಡಿಸಿದ್ದಾರೆ.
Vijaya Karnataka Web independence day 70 years farewell to suri mlas regret
ಸ್ವಾತಂತ್ರ್ಯಬಂದು 70 ವರ್ಷ ಕಳೆದರು ಸೂರಿಗಾಗಿ ಪರದಾಟ: ಶಾಸಕ ವಿಷಾದ

ನೇತಾಜಿ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಮಾತನಾಡಿ ವಿದ್ಯಾರ್ಹತೆಗೆ ಅನುಗುಣವಾಗಿ ಕಂಪನಿಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗುವುದು ಇದರಿಂದ ನಿರುದ್ಯೋಗಿ ಸಮಸ್ಯೆಬಗೆ ಹರಿಯಲಿದೆ ಎಂದರು.

ಮನೆ ಮತ್ತು ನಿವೇಶನ ಇಲ್ಲದೇ ಇರುವ ಫಲಾನುಭವಿಗಳು ಅರ್ಜಿ ಸಲ್ಲಿಸಿದರೆ, ನಾನಾ ವಸತಿಯೋಜನೆಗಳಡಿ ಮನೆ ನಿರ್ಮಾಣಕ್ಕೆ ಸರಕಾರದಿಂದ ಧನಸಹಾಯ ಒದಗಿಸುವುದಾಗಿ ಭರವಸೆ ನೀಡಿದರು.

ಸರಕಾರದ ನಾನಾ ಯೋಜನೆಗಳನ್ನು ಪ್ರತಿಯೊಬ್ಬರು ಬಳಸಿಕೊಂಡು ಆರ್ಥಿಕವಾಗಿ ಸದೃಢÜರಾಗಬೇಕೆಂದು ತಿಳಿಸಿದ ಅವರು ನಗರಾಭಿವೃದ್ಧಿಗೆ ಈ ಗಾಗಲೇ ಸರಕಾರದಿಂದ 4ಕೋಟಿ ರೂ. ಬಿಡುಗಡೆ ಮಾಡಿಸಲಾಗಿದ್ದು, ಹತ್ತಿರದಲ್ಲೇ ನಾನಾ ಕಾಮಗಾರಿಗಳು ಆರಂಭವಾಗಲಿವೆ ಅದೇರೀತಿ ಗ್ರಾಮೀಣ ಪ್ರದೇಶಕ್ಕೆ 6ಕೋಟಿ ರೂ. ಮಂಜೂರಾತಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಹಣ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ನೇತಾಜಿ ಕ್ರೀಡಾಂಗಣ ಜೀರ್ಣೋದ್ಧಾರಕ್ಕೆ 10 ಲಕ್ಷ ರೂ. ಮಂಜೂರಾಗಿದ್ದು, ಕ್ರೀಡಾಂಗಣ ಸುತ್ತಲೂ ಮೇಲ್ಚಾವಣಿ ನಿರ್ಮಿಸಿ ಮುಂದಿನ ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ನಾನಾ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಹಕ್ಕು ಪತ್ರ ವಿತರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ