ಆ್ಯಪ್ನಗರ

ಅಸುರಕ್ಷಿತ ಕಾಂಪೌಂಡ್‌: ಕ್ರಮಕ್ಕೆ ಒತ್ತಾಯ

ಇಲ್ಲಿನ ಕುರುಡುಮಲೆ ಗ್ರಾಮದಲ್ಲಿನ ಕಿತ್ತೂರುರಾಣಿ ಚನ್ನಮ್ಮ ಶಾಲೆಗೆ ನಿರ್ಮಿಸಿರುವ ಕಾಂಪೌಂಡ್‌ ಅಸುರಕ್ಷ ತೆಯಿಂದ ಕೂಡಿದ್ದು, ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದಾರೆ.

Vijaya Karnataka 4 Jan 2019, 5:00 am
ದುಗ್ಗಸಂದ್ರ : ಇಲ್ಲಿನ ಕುರುಡುಮಲೆ ಗ್ರಾಮದಲ್ಲಿನ ಕಿತ್ತೂರುರಾಣಿ ಚನ್ನಮ್ಮ ಶಾಲೆಗೆ ನಿರ್ಮಿಸಿರುವ ಕಾಂಪೌಂಡ್‌ ಅಸುರಕ್ಷ ತೆಯಿಂದ ಕೂಡಿದ್ದು, ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದಾರೆ.
Vijaya Karnataka Web insecure compound enforced order
ಅಸುರಕ್ಷಿತ ಕಾಂಪೌಂಡ್‌: ಕ್ರಮಕ್ಕೆ ಒತ್ತಾಯ


ಇತ್ತೀಚೆಗೆ ತಾಲೂಕಿನಲ್ಲಿ ನಡೆದಂತಹ ಘಟನೆಯಲ್ಲಿ ಶೌಚಾಲಯದ ಕಟ್ಟಡ ಕುಸಿದು ವಿದ್ಯಾರ್ಥಿನಿ ಮೃತಪಟ್ಟ ಹಿನ್ನೆಲೆಯಲ್ಲಿ ಕೆಲವೊಂದು ವಸತಿ ಶಾಲೆಗಳ ಮಕ್ಕಳನ್ನು ಈಗಾಗಲೇ ಕಟ್ಟಡ ಸಿದ್ಧಗೊಂಡಂತಹ ಶಾಲೆಗಳಿಗೆ ಸ್ಥಳಾಂತರಿಸಲಾಗಿತ್ತು.

ಅದರಂತೆ ಕುರುಡುಮಲೆ ಗ್ರಾಮದ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಗೆ ಮುಳಬಾಗಲು ವಸತಿ ಶಾಲಾ ಮಕ್ಕಳನ್ನು ಸ್ಥಳಾಂತರಿಸಲಾಗಿದೆ. ಈ ಹೊಸ ಕಟ್ಟಡದ ಸುತ್ತಲೂ ಕಾಂಪೌಂಡ್‌ ನಿರ್ಮಿಸಲಾಗಿದ್ದು, ತಳಭಾಗದಲ್ಲಿ ಸುಮಾರು ಎರಡು ಅಡಿಯವರೆಗೆ ಗೋಡೆ ನಿರ್ಮಿಸದೆ, ಕಬ್ಬಿಣದ ಕಂಬಿಗಳನ್ನು ಮಳೆ ನೀರು ಹರಿಯುವ ಉದ್ದೇಶದಿಂದ ಹಾಗೇ ಬಿಟ್ಟು ಮೇಲ್ಭಾಗದಲ್ಲಿ ಗೋಡೆ ನಿರ್ಮಿಸಲಾಗಿದೆ.

ಆದರೆ ಬೆಟ್ಟದ ಕಡೆಯಿಂದ ಹಾವುಗಳು ಅಲ್ಲದೆ ಇತರೆ ಪ್ರಾಣಿಗಳು ಹಾಗೂ ವಿಷಜಂತುಗಳು ಕಟ್ಟಡದ ಒಳಗೆ ಬರುವ ಸಾಧ್ಯತೆ ಇರುವುದರಿಂದ ಸಂಬಂದಪಟ್ಟ ಅಧಿಕಾರಿಗಳು ಇದರ ಬಗ್ಗೆ ಸರಿಯಾದ ಸುರಕ್ಷ ತಾ ಕ್ರಮಗಳನ್ನು ಕೈಗೊಂಡು, ಉತ್ತಮವಾಗಿ ಕಾಂಪೌಂಡ್‌ ನಿರ್ಮಿಸಬೇಕು ಎಂದು ಇಲ್ಲಿನ ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ