ಆ್ಯಪ್ನಗರ

ಜಿಲ್ಲೆಯ ವಿದ್ಯಾರ್ಥಿನಿ ಅನುಶ್ರೀಗೆ ರಾಷ್ಟ್ರಮಟ್ಟದ ಪ್ರಶಸ್ತಿ

ಕೆಜಿಎಫ್‌ ತಾಲೂಕಿನ ದೊಡ್ಡಬೊಮ್ಮಪಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಅನುಶ್ರೀ ರಾಷ್ಟ್ರಮಟ್ಟದ ಇನ್ಸ್‌ಪೈರ್‌ ಅವಾರ್ಡ್‌ ಮಾನಕ್‌-2018ರ ಸ್ಪರ್ಧೆಯಲ್ಲಿ ಪರಿಸರ ಸ್ನೇಹಿ ಬಹು ಉಪಯೋಗಿ ಕೃಷಿ ಯಂತ್ರದ ಮಾದರಿ ಪ್ರದರ್ಶಿಸಿ ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿಕೊಂಡಿದ್ದಾರೆ.

Vijaya Karnataka 12 Mar 2019, 5:00 am
ಕೋಲಾರ: ಕೆಜಿಎಫ್‌ ತಾಲೂಕಿನ ದೊಡ್ಡಬೊಮ್ಮಪಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಅನುಶ್ರೀ ರಾಷ್ಟ್ರಮಟ್ಟದ ಇನ್ಸ್‌ಪೈರ್‌ ಅವಾರ್ಡ್‌ ಮಾನಕ್‌-2018ರ ಸ್ಪರ್ಧೆಯಲ್ಲಿ ಪರಿಸರ ಸ್ನೇಹಿ ಬಹು ಉಪಯೋಗಿ ಕೃಷಿ ಯಂತ್ರದ ಮಾದರಿ ಪ್ರದರ್ಶಿಸಿ ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿಕೊಂಡಿದ್ದಾರೆ.
Vijaya Karnataka Web inspire award anushree gets national award
ಜಿಲ್ಲೆಯ ವಿದ್ಯಾರ್ಥಿನಿ ಅನುಶ್ರೀಗೆ ರಾಷ್ಟ್ರಮಟ್ಟದ ಪ್ರಶಸ್ತಿ


ಬಡ ಕುಟುಂಬದಿಂದ ಬಂದ ಅದೇ ಗ್ರಾಮದ ನಾಗರಾಜ್‌, ಗೌರಮ್ಮ ದಂಪತಿ ಪುತ್ರಿಯಾದ ಅನುಶ್ರೀ ಅವರು ಮಾರ್ಗದರ್ಶಿ ಶಿಕ್ಷ ಕಿ ಕವಿತಾ ಅವರ ನೆರವಿನಿಂದ ಈ ಕೃಷಿ ಯಂತ್ರದ ಮಾದರಿ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.

ರಾಷ್ಟ್ರಮಟ್ಟದ ಎನ್‌ಎಲ್‌ಇಪಿಸಿ ಇನ್ಸ್‌ಫೇರ್‌ ಅವಾರ್ಡ್‌ ಮಾನಕ್‌-2018ರ ಸ್ವರ್ಧೆಯಲ್ಲಿ ಒಟ್ಟು 850 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ರಾಜ್ಯದಿಂದ 109 ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಅನುಶ್ರೀ ಕಠಿಣ ಸ್ಪರ್ಧೆ ಎದುರಿಸಿದ್ದರು.

ಅಂತಿಮವಾಗಿ 60 ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿದ್ದು, ಇವರಲ್ಲಿ ಐದು ಮಂದಿ ಮಾತ್ರ ಕರ್ನಾಟಕದವರಾಗಿದ್ದು, ಆ ಐವರಲ್ಲಿ ಅನುಶ್ರೀ ಒಬ್ಬರಾಗಿದ್ದಾರೆ.

ಮಾ.14 ರಿಂದ 18ರವರೆಗೂ ಗುಜರಾತ್‌ನ ಗಾಂಧಿನಗರದಲ್ಲಿ ಎನ್‌ಐಎಫ್‌ ಸಂಸ್ಥೆ ಆಯೋಜಿಸಿರುವ ಇಂಟರ್‌ ನ್ಯಾಷನಲ್‌ ಇನ್ನೋವೇಟಿವ್‌ ಫೆಸ್ಟಿವಲ್‌ನಲ್ಲಿ ಈ ವಿದ್ಯಾರ್ಥಿನಿ ಭಾಗವಹಿಸುತ್ತಿದ್ದು, ಮಾ.18ರಂದು ಈ ಕಾರ್ಯಕ್ರಮವನ್ನು ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಉದ್ಘಾಟಿಸಿ, ಬಹುಮಾನ ವಿತರಿಸಲಿದ್ದಾರೆಂದು ಡಯಟ್‌ ಪ್ರಾಂಶುಪಾಲ ಎಚ್‌.ವಿಕ್ಟರ್‌ ತಿಳಿಸಿದ್ದಾರೆ. ಈ ವಿದ್ಯಾರ್ಥಿಗೆ ಡಯಟ್‌ನ ಹಿರಿಯ ಉಪನ್ಯಾಸಕರು ಅಭಿನಂದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ