ಆ್ಯಪ್ನಗರ

ಖನಿಜ ಸಂಪತ್ತಿರುವ ಖಾಸಗಿ ಜಮೀನುದಾರರಿಗೆ ಪರಿಹಾರಕ್ಕೆ ಪತ್ರ: ಜಿಲ್ಲಾಧಿಕಾರಿ

ಕೆಜಿಎಫ್‌ ಬಳಿಯ ಪೆದ್ದಪಲ್ಲಿಯಲ್ಲಿನ ಪೈರೋಕ್ಲಾಸ್ಟಿಕ್‌ ರಾಕ್ಸ್‌ ಎಂಬ ಅಪರೂಪದ ಖನಿಜ ಸಂಪತ್ತಿರುವ ಖಾಸಗಿ ಜಮೀನಿನವರಿಗೆ ಪರಿಹಾರ ನೀಡುವ ಸಂಬಂಧಿಸಿದಂತೆ ಜಿಎಸ್‌ಐ (ಜಿವಾಲಜಿಕಲ್‌ ಸರ್ವೇ ಆಫ್‌ ಇಂಡಿಯಾ) ಸಂಸ್ಥೆಗೆ ಶೀಘ್ರವೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹೇಳಿದರು.

Vijaya Karnataka 19 Jan 2019, 5:00 am
ಕೋಲಾರ: ಕೆಜಿಎಫ್‌ ಬಳಿಯ ಪೆದ್ದಪಲ್ಲಿಯಲ್ಲಿನ ಪೈರೋಕ್ಲಾಸ್ಟಿಕ್‌ ರಾಕ್ಸ್‌ ಎಂಬ ಅಪರೂಪದ ಖನಿಜ ಸಂಪತ್ತಿರುವ ಖಾಸಗಿ ಜಮೀನಿನವರಿಗೆ ಪರಿಹಾರ ನೀಡುವ ಸಂಬಂಧಿಸಿದಂತೆ ಜಿಎಸ್‌ಐ (ಜಿವಾಲಜಿಕಲ್‌ ಸರ್ವೇ ಆಫ್‌ ಇಂಡಿಯಾ) ಸಂಸ್ಥೆಗೆ ಶೀಘ್ರವೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹೇಳಿದರು.
Vijaya Karnataka Web issue of compensation to private landholders with mineral wealth deputy commissioner
ಖನಿಜ ಸಂಪತ್ತಿರುವ ಖಾಸಗಿ ಜಮೀನುದಾರರಿಗೆ ಪರಿಹಾರಕ್ಕೆ ಪತ್ರ: ಜಿಲ್ಲಾಧಿಕಾರಿ


ಖನಿಜ ಸಂಪತ್ತಿರುವ ಜಮೀನಿನ ಸರ್ವೇ: ನಗರದ ಹೊರವಲಯದಲ್ಲಿರುವ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿವಾಲಜಿಕಲ್‌ ಸರ್ವೇ ಆಫ್‌ ಇಂಡಿಯಾ ಸಂಸ್ಥೆಯ ಭೂ ವಿಜ್ಞಾನಿಗಳು, ಇನ್ನಿತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆದ್ದಪಲ್ಲಿಯಲ್ಲಿ ಪೈರೋಕ್ಲಾಸ್ಟಿಕ್‌ ರಾಕ್ಸ್‌ ಎಂಬ ಅಪರೂಪದ ಖನಿಜ ಇರುವ ಕುರಿತಂತೆ 1974ನೇ ಸಾಲಿನಲ್ಲಿ ಗುರಿಸಲಾಗಿತ್ತು. ಆ ಖನಿಜ ಸಂಪತ್ತಿರುವ ಜಮೀನನ್ನು ಸರ್ವೇ ಮಾಡಲು ಜಿಲ್ಲಾಡಳಿತಕ್ಕೆ ತಿಳಿಸಲಾಗಿತ್ತು. ಅದರಂತೆ ಈಗಾಗಲೆ ಸರ್ವೇ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

ಅಪರೂಪದ ಪೈರೋಕ್ಲಾಸ್ಟಿಕ್‌ ರಾಕ್ಸ್‌ ಖನಿಜ: ಪೈರೋಕ್ಲಾಸ್ಟಿಕ್‌ ರಾಕ್ಸ್‌ ಸುಮಾರು 3.13 ಎಕರೆ ಜಮೀನಿನಲ್ಲಿದೆ. ಇದರಲ್ಲಿ ಸರಕಾರಿ ಖರಾಬು ಜಮೀನು ಬಿಟ್ಟರೆ, ಸುಮಾರು ಎರಡು ಎಕರೆ ಜಮೀನು ಖಾಸಗಿಯವರದ್ದಾಗಿದೆ. ಅಪರೂಪದ ಆ ಖನಿಜ ಸಂಪತ್ತನ್ನು ಸಂರಕ್ಷಿಸಬೇಕಾದರೆ, ಖಾಸಗಿಯವರ ಜಮೀನನ್ನು ಖರೀದಿಸಬೇಕಿದೆ. ಸರಕಾರದ ಮಾರ್ಗಸೂಚಿ ಪ್ರಕಾರ ಆ ಜಮೀನು ಸ್ವಾದೀನಪಡಿಸಿಕೊಂಡು, ಸೂಕ್ತ ಪರಿಹಾರ ನೀಡಬೇಕಿದೆ. ಈ ಸಂಬಂಧ ಜಿವಾಲಜಿಕಲ್‌ ಸರ್ವೇ ಆಫ್‌ ಇಂಡಿಯಾ ಸಂಸ್ಥೆಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.

ಖನಿಜದಲ್ಲಿ ವಜ್ರವಿದೆ ಎಂಬುದು ಸುಳ್ಳು ವದಂತಿ: ಭೂವಿಜ್ಞಾನಿಗಳು ಪೈರೋಕ್ಲಾಸ್ಟಿಕ್‌ ರಾಕ್ಸ್‌ ಇರುವ ಜಮೀನನ್ನು ಮತ್ತೊಮ್ಮೆ ಪರಿಶೀಲನೆ ನಡೆಸಲಿದ್ದಾರೆ. ಈ ಅಪರೂಪದ ಖನಿಜ ಸಂಪತ್ತನ್ನು ಸಂರಕ್ಷಿಸಿ, ಸಂಶೋಧನೆಗೆ ಉಪಯೋಗವಾಗುವಂತೆ ಕ್ರಮಕ್ಕೆ ಮುಂದಾಗುತ್ತಿರುವ ಜಿಎಸ್‌ಐ ಸಂಸ್ಥೆಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಆ ಪ್ರದೇಶದಲ್ಲಿ ಪತ್ತೆಯಾದ ಅಪರೂಪದ ಖನಿಜ ಸಂಪತ್ತಿನಲ್ಲಿ ವಜ್ರವಿದೆ ಎಂಬುದು ಸುಳ್ಳೆಂದು ಪುನರುಚ್ಚರಿಸಿದರು.

ಅಪರೂಪದ ಖನಿಜ ಸಂಪತ್ತಿರುವ ಪ್ರದೇಶದ ಸುತ್ತ ತಂತಿ ಬೇಲಿ ಅಳವಡಿಸಲಾಗುವುದು. ಈ ಸ್ಥಳಕ್ಕೆ ಭೇಟಿ ನೀಡುವವರಿಗೆ ರಸ್ತೆ ಮತ್ತಿತರ ವ್ಯವಸ್ಥೆ ಇರುವ ಕುರಿತು ಪರಿಶೀಲನೆ ನಡೆಸಬೇಕಿದೆ ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಯಿತು.

ಕೆಜಿಎಫ್‌ ನಗರಸಭೆ, ಗಣಿ, ಭೂ ವಿಜ್ಞಾನ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ