ಆ್ಯಪ್ನಗರ

ಕೆಸಿ ವ್ಯಾಲಿ ತಡೆಯಾಜ್ಞೆ ತೆರವಿಗೆ ಸಂತಸ

ನೀರಿನ ಸಮಸ್ಯೆಗಳಿಂದ ಪಾರಾಗಲು, ಜಿಲ್ಲೆಯ ರೈತರನ್ನು ಉಳಿಸಲು ಜಾರಿಗೊಳಿಸಿದ್ದ ಕೆಸಿ ವ್ಯಾಲಿ ನೀರಾವರಿ ಯೋಜನೆಯನ್ನು ಮುಂದುವರಿಸಬಹುದು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿರುವುದು ಸಂತಸ ತಂದಿದೆ ಎಂದು ಗೌನಿಪಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಜಿ.ಟಿ.ರಮೇಶ್‌ ಬಾಬು ಸಂತಸ ವ್ಯಕ್ತಪಡಿಸಿದರು.

Vijaya Karnataka 6 Apr 2019, 5:00 am
ಶ್ರೀನಿವಾಸಪುರ ಗ್ರಾಮಾಂತರ:ನೀರಿನ ಸಮಸ್ಯೆಗಳಿಂದ ಪಾರಾಗಲು, ಜಿಲ್ಲೆಯ ರೈತರನ್ನು ಉಳಿಸಲು ಜಾರಿಗೊಳಿಸಿದ್ದ ಕೆಸಿ ವ್ಯಾಲಿ ನೀರಾವರಿ ಯೋಜನೆಯನ್ನು ಮುಂದುವರಿಸಬಹುದು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿರುವುದು ಸಂತಸ ತಂದಿದೆ ಎಂದು ಗೌನಿಪಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಜಿ.ಟಿ.ರಮೇಶ್‌ ಬಾಬು ಸಂತಸ ವ್ಯಕ್ತಪಡಿಸಿದರು.
Vijaya Karnataka Web kc valley stay vacate celebration
ಕೆಸಿ ವ್ಯಾಲಿ ತಡೆಯಾಜ್ಞೆ ತೆರವಿಗೆ ಸಂತಸ


ಗೌನಿಪಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕೆಸಿ ವ್ಯಾಲಿ ನೀರಾವರಿ ಯೋಜನೆ ಮೂಲಕ ಕೋಲಾರ ಜಿಲ್ಲೆಗೆ ನೀರು ಹರಿಸಬಹುದು ಎಂದು ತೀರ್ಪು ನೀಡಿದ ತಕ್ಷ ಣ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಆಚರಿಸಿ ಮಾತಾನಾಡಿದರು. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಕೋರ್ಟ್‌ ಮೆಟ್ಟಿಲೇರಿ ತಡೆಯಾಜ್ಞೆ ಮಾಡಲಾಗಿತ್ತು. ಆದರೆ ಸ್ಪೀಕರ್‌ ರಮೇಶ್‌ಕುಮಾರ್‌ ಅವರ ಸತತ ಪ್ರಯತ್ನದಿಂದ ಹಾಗೂ ಉತ್ತಮ ಕಾನೂನು ಪಂಡಿತರಿಂದ ಯೋಜನೆಯ ಉದ್ದೇಶವನ್ನು ತಿಳಿಸಿ ರೈತರ ನೆರವಿಗೆ ಬಂದಿದ್ದಾರೆಂದು ವಿವರಿಸಿದರು.

ಈ ಸಂದರ್ಭದಲ್ಲಿ ಸತ್ಯನಾರಯಣ, ಎಚ್‌.ರಹಮತ್ತುಲ್ಲ, ಎಂ.ನಾರಾಯಣಸ್ವಾಮಿ, ಅಮೀರ್‌ ಖಾನ್‌, ಮಂಜುನಾಥ್‌, ನಯಾಜ್‌ಖಾನ್‌, ಅಜಾಂಖಾನ್‌, ಸೋಮಶೇಖರ್‌, ಮಧು ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ