ಆ್ಯಪ್ನಗರ

Kolar Assembly Election 2023: ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ವರ್ತೂರು, ಜೆಡಿಎಸ್‌ನಲ್ಲಿ ಗೊಂದಲ

Kolar Assembly Election 2023: ಮಾಜಿ ಸಿಎಂ ಕೋಲಾರಕ್ಕೆ ಬಂದರೆ ರಾಜಕೀಯ ಸಮೀಕರಣ ಬದಲಾಗಲಿದೆ. ಸಿದ್ದರಾಮಯ್ಯ ವಿರುದ್ಧವಾಗಿ ತೊಡೆ ತಟ್ಟಲು ಸಿದ್ಧವಾಗಿರುವಂತಹ ವರ್ತೂರು ಪ್ರಕಾಶ್‌ಗೆ ಕಾಂಗ್ರೆಸ್‌ನಲ್ಲಿರುವ ಸಿದ್ದು ವಿರೋಧಿಗಳು ಬೆಂಬಲ ಸೂಚಿಸಿದ್ದಾರೆ ಎಂದು ವರ್ತೂರು ಪ್ರಕಾಶ್‌ ಹೇಳಿರುವುದು ಕುತೂಹಲ ಮೂಡಿಸಿದೆ. ಜೆಡಿಎಸ್‌ನಲ್ಲಿ, ತಾನೇ ಅಭ್ಯರ್ಥಿಯೆಂದು ಸಿಎಂಆರ್‌ ಶ್ರೀನಾಥ್‌ ಓಡಾಡುತ್ತಿದ್ದರೂ, ಸಿದ್ದರಾಮಯ್ಯ ತೀರ್ಮಾನದ ಮೇಲೆ ಜೆಡಿಎಸ್‌ ಅಭ್ಯರ್ಥಿ ತೀರ್ಮಾನವಾಗಲಿದೆ.

Edited byಸೌಮ್ಯಶ್ರೀ ಮಾರ್ನಾಡ್ | Vijaya Karnataka Web 17 Nov 2022, 12:10 pm

ಹೈಲೈಟ್ಸ್‌:

  • ಸಿದ್ದು ಎಂಟ್ರಿಯಿಂದ ರಾಜಕೀಯ ಸಮೀಕರಣ ಬದಲು, ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಲ್ಲೂಆತಂಕ
  • ಸಿದ್ದರಾಮಯ್ಯ ಸಮುದಾಯದವರೇ ಆದ ವರ್ತೂರು ಪ್ರಕಾಶ್‌ ಅವರನ್ನು ಮುಂದೆ ಬಿಟ್ಟು ಸಿದ್ದು ಹಣಿಯಲು ಕಮಲ ಪಾಳಯ ತಯಾರಿ ನಡೆಸಿದೆ.
  • ತಾನೇ ಅಭ್ಯರ್ಥಿಯೆಂದು ಸಿಎಂಆರ್‌ ಶ್ರೀನಾಥ್‌ ಓಡಾಡುತ್ತಿದ್ದರೂ, ಸಿದ್ದರಾಮಯ್ಯ ತೀರ್ಮಾನದ ಮೇಲೆ ಜೆಡಿಎಸ್‌ ಅಭ್ಯರ್ಥಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಸಿದ್ದರಾಮಯ್ಯ
ವೆಂ.ಸುನೀಲ್‌ ಕುಮಾರ್‌
ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರಕ್ಕೆ ಭೇಟಿ ನೀಡಿರುವುದು ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿಸಿದೆ. ಮಾಜಿ ಸಿಎಂ ಕೋಲಾರಕ್ಕೆ ಬಂದರೆ ರಾಜಕೀಯ ಸಮೀಕರಣ ಬದಲಾಗಲಿದ್ದು, ಎಂತಹದ್ದೇ ಸನ್ನಿವೇಶದಲ್ಲೂ ತೊಡೆತಟ್ಟಿ ನಿಲ್ಲಲು ಬಿಜೆಪಿ ನಿರ್ಧರಿಸಿದೆ.

ಸಿದ್ದರಾಮಯ್ಯ ಅವರ ಸಮುದಾಯದವರೇ ಆದ ವರ್ತೂರು ಪ್ರಕಾಶ್‌ ಅವರನ್ನು ಮುಂದೆ ಬಿಟ್ಟು ಸಿದ್ದು ಹಣಿಯಲು ಕಮಲ ಪಾಳಯ ತಯಾರಿ ನಡೆಸಿದೆ. ಆದರೆ, ಪ್ರಬಲ ಸ್ಪರ್ಧೆಯೊಡ್ಡುವ ಆಸೆಯಲ್ಲಿದ್ದ ಜೆಡಿಎಸ್‌ ಗೊಂದಲದಲ್ಲಿ ಸಿಲುಕಿದೆ. ಅಷ್ಟೇ ಅಲ್ಲ, ಕಾಂಗ್ರೆಸ್‌ ಆಕಾಂಕ್ಷಿಗಳಲ್ಲೂಆತಂಕ ಶುರುವಾಗಿದೆ.
Varthur Prakash - ಸಿದ್ದರಾಮಯ್ಯ ಕೋಲಾರ ಪ್ರವಾಸ ಟುಸ್ ಪಟಾಕಿ, ಬಂದವರೆಲ್ಲ ಬಾಡಿಗೆ ಜನ: ಮಾಜಿ ಶಾಸಕ ವರ್ತೂರು ಪ್ರಕಾಶ್ ವ್ಯಂಗ್ಯ

ಸಿದ್ದರಾಮಯ್ಯ ಅವರನ್ನು ಜಿಲ್ಲೆಯಲ್ಲಿ ಕಣಕ್ಕಿಳಿಸುವ ಮೂಲಕ ಅವರ ಪ್ರಭಾವ ಬಳಸಿ ಮೂರು ಜಿಲ್ಲೆಗಳಲ್ಲಿಹೆಚ್ಚಿನ ಫಲಿತಾಂಶ ಪಡೆಯುವ ತಂತ್ರ ಜಿಲ್ಲೆಯ ಕಾಂಗ್ರೆಸ್‌ ನಾಯಕರದ್ದಾಗಿದೆ. ಇವರ ಒತ್ತಾಸೆಗೆ ಮಣಿದ ಸಿದ್ದರಾಮಯ್ಯ ಜಿಲ್ಲೆಯಾದ್ಯಂತ ಮಿಂಚಿನ ಸಂಚಾರ ನಡೆಸಿ ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿ ಹೋಗಿದ್ದಾರೆ.

ಲೆಕ್ಕಾಚಾರಗಳು ತಲೆಕೆಳಗು:
ಯಾರು ಏನೇ ಹೇಳಿದರೂ, ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ಎಲ್ಲಾರಾಜಕೀಯ ಲೆಕ್ಕಾಚಾರಗಳೂ ತಲೆಕೆಳಗಾಗಲಿವೆ. ಇದೇ ಕಾರಣದಿಂದ ಸಿದ್ದರಾಮಯ್ಯ ಅವರಿಗೆ ಸಮರ್ಥವಾಗಿ ಪೈಪೋಟಿ ನೀಡಬಲ್ಲಅಭ್ಯರ್ಥಿಗಾಗಿ ಹುಡುಕಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿಕೊಳ್ಳುವುದು ಹೇಗೆಂದು ಅವರ ಬೆಂಬಲಿಗರ ಪಡೆ ಚಿಂತಿಸಿದರೆ, ಸೋಲಿಸುವುದು ಹೇಗೆ ಎಂಬ ರಣತಂತ್ರವನ್ನು ಬಿಜೆಪಿ ಮಾಡುತ್ತಿದೆ.

ಜೆಡಿಎಸ್‌ಗೆ ಅಭ್ಯರ್ಥಿ ಆಯ್ಕೆ ಗೊಂದಲ:
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನ ಪಡೆಯಲು ರಣತಂತ್ರ ರೂಪಿಸಿರುವ ಜೆಡಿಎಸ್‌ ಪಕ್ಷವು ಅದೇ ಕಾರಣದಿಂದ ಪಂಚರತ್ನ ಯೋಜನೆಗೆ ಮುಳಬಾಗಿಲಿನಲ್ಲಿ ಚಾಲನೆ ನೀಡುತ್ತಿದೆ. ಆದರೆ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿದರೆ ಜೆಡಿಎಸ್‌ಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ.

Siddaramaiah: ಸಿದ್ದರಾಮಯ್ಯ ಕೋಲಾರ ಭೇಟಿ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ! ರಮೇಶ್‌ ಕುಮಾರ್‌ ವಿರುದ್ಧ ಆಕ್ರೋಶ
ಇದೇ ಕಾರಣದಿಂದಲೇ ಕೋಲಾರ ಕ್ಷೇತ್ರದ ಅಭ್ಯರ್ಥಿ ಯಾರೆಂದು ಈವರೆಗೂ ಅಧಿಕೃತವಾಗಿ ಘೋಷಣೆ ಮಾಡಲು ಜೆಡಿಎಸ್‌ ವರಿಷ್ಠರು ಮುಂದಾಗಿಲ್ಲ. ತಾನೇ ಅಭ್ಯರ್ಥಿಯೆಂದು ಸಿಎಂಆರ್‌ ಶ್ರೀನಾಥ್‌ ಓಡಾಡುತ್ತಿದ್ದರೂ, ಸಿದ್ದರಾಮಯ್ಯ ತೀರ್ಮಾನದ ಮೇಲೆ ಜೆಡಿಎಸ್‌ ಅಭ್ಯರ್ಥಿ ಯಾರೆಂಬುದು ನಿರ್ಧಾರವಾಗಲಿದೆ.

ಸಿದ್ದುಗೆ ಎದುರಾಗಿ ಇಬ್ರಾಹಿಂ ಕಣಕ್ಕೆ?
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿದರೆ ಅವರಿಗೆ ಪೈಪೋಟಿ ನೀಡಲು ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಜೆಡಿಎಸ್‌ ತಯಾರಿ ನಡೆಸಿದೆ. ಅದೇ ಉದ್ದೇಶದಿಂದ ಕೋಲಾರದ ಮುಖಂಡರು ಕುಮಾರಸ್ವಾಮಿ ಅವರನ್ನು ಆಹ್ವಾನಿಸಿದರೂ ಅವರು ಈಗಾಗಲೇ ಚನಪಟ್ಟಣದಲ್ಲಿಸ್ಪ ರ್ಧಿಸುವುದಾಗಿ ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿಒಂದು ಕಾಲದ ಸಿದ್ದರಾಮಯ್ಯ ಗೆಳೆಯ ಸದ್ಯದ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರನ್ನು ಕಣಕ್ಕಿಳಿಸುವ ಚಿಂತನೆ ನಡೆದಿದೆ ಎನ್ನಲಾಗಿದೆ.

ತೊಡೆ ತಟ್ಟಲು ವರ್ತೂರು ಸಿದ್ಧ
ಕೋಲಾರದಿಂದ ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾದಂತಹ ಮಾಜಿ ಸಚಿವ ವರ್ತೂರು ಪ್ರಕಾಶ್‌ ಅವರು ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, 50 ಸಾವಿರ ಮತಗಳ ಅಂತರದಿಂದ ಸೋಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಜಾತಿ ಅಸ್ತ್ರ ಪ್ರಯೋಗಿಸಿರುವ ವರ್ತೂರು ಪ್ರಕಾಶ್‌, ಈಗಾಗಲೇ ಕ್ಷೇತ್ರದಲ್ಲಿ ಕುರುಬ ಸಮುದಾಯಕ್ಕೆ ಸೇರಿದ ನಾನಿರುವಾಗ ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ರಾಜ್ಯದ ಜನರೇ ಛೀಮಾರಿ ಹಾಕುತ್ತಾರೆಂದು ಹೇಳಿಕೆ ಸಂಚಲನ ಮೂಡಿಸಿದ್ದು, ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ಖಚಿತವಾಗಿ ಸೋಲುತ್ತಾರೆಂದು ಭವಿಷ್ಯ ನುಡಿದ್ದಾರೆ.

ಸಿದ್ದು ವಿರೋಧಿಗಳ ಬೆಂಬಲ?ಸಿದ್ದರಾಮಯ್ಯ ವಿರುದ್ಧವಾಗಿ ತೊಡೆ ತಟ್ಟಲು ಸಿದ್ಧವಾಗಿರುವಂತಹ ವರ್ತೂರು ಪ್ರಕಾಶ್‌ಗೆ ಕಾಂಗ್ರೆಸ್‌ನಲ್ಲಿರುವ ಸಿದ್ದು ವಿರೋಧಿಗಳು ಬೆಂಬಲ ಸೂಚಿಸಿದ್ದಾರೆ ಎಂದು ಎಂದು ವರ್ತೂರು ಪ್ರಕಾಶ್‌ ಹೇಳಿರುವುದು ಕುತೂಹಲ ಮೂಡಿಸಿದೆ.
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ