ಆ್ಯಪ್ನಗರ

ಕೋಲಾರ ಜಿಲ್ಲೆಯವರು ಚಿನ್ನದಂಥ ಜನರು; ಜಿ.ಜಗದೀಶ್‌

ಸರಕಾರಿ ಕೆಲಸ ದೇವರ ಕೆಲಸ ಇಂತಹ ನುಡಿ ವಿಧಾನಸೌಧದ ಮುಂಭಾಗ ಇದೆ. ಇದನ್ನು ಸಾರ್ಥಕ ಪಡಿಸಬೇಕಾದರೆ ಸರಕಾರಿ ನೌಕರರು ಸೇವಾ ಮನೋಭಾವದಿಂದ ದುಡಿಯಬೇಕು. ಈ ನಿಟ್ಟಿನಲ್ಲಿಕೋಲಾರ ಜನರು ಚಿನ್ನದಂಥ ಜನರು ಎಂದು ಉಡುಪಿ ಜಿಲ್ಲಾಧಿಧಿಕಾರಿ ಜಿ.ಜಗದೀಶ್‌ ಬಣ್ಣಿಸಿದರು.

Vijaya Karnataka 26 Aug 2019, 3:28 pm
ಕೋಲಾರ: ಸರಕಾರಿ ಕೆಲಸ ದೇವರ ಕೆಲಸ ಇಂತಹ ನುಡಿ ವಿಧಾನಸೌಧದ ಮುಂಭಾಗ ಇದೆ. ಇದನ್ನು ಸಾರ್ಥಕ ಪಡಿಸಬೇಕಾದರೆ ಸರಕಾರಿ ನೌಕರರು ಸೇವಾ ಮನೋಭಾವದಿಂದ ದುಡಿಯಬೇಕು. ಈ ನಿಟ್ಟಿನಲ್ಲಿಕೋಲಾರ ಜನರು ಚಿನ್ನದಂಥ ಜನರು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಬಣ್ಣಿಸಿದರು.
Vijaya Karnataka Web kolar district people golden people
ಕೋಲಾರ ಜಿಲ್ಲೆಯವರು ಚಿನ್ನದಂಥ ಜನರು; ಜಿ.ಜಗದೀಶ್‌


ಕೋಲಾರ ಜಿಲ್ಲಾಪಂಚಾಯಿತಿಯಿಂದ ವರ್ಗಾವಣೆಗೊಂಡ ಜಿ.ಜಗದೀಶ್‌ ಅವರಿಗೆ ಜಿಲ್ಲಾಸರಕಾರಿ ಸಂಘದ ವತಿಯಿಂದ ನೌಕರರ ಭವನದಲ್ಲಿಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜನಸಾಮಾನ್ಯರು ತಮ್ಮ ಸಂಕಷ್ಟಗಳಿಗೆ ಅದೆಷ್ಟೋ ನಿರೀಕ್ಷೆಗಳನ್ನು ಇರಿಸಿಕೊಂಡು ಕಚೇರಿಗೆ ಬಳಿಗೆ ಬರುತ್ತಾರೆ ಅವರನ್ನು ಪ್ರೀತಿಯಿಂದ ಸದ್ಭಾವನೆಯಿಂದ ಮಾತನಾಡುವುದು ಮೊದಲ ಕೆಲಸ ಆಗಬೇಕು ಆಗ ಅವರಿಗೆ ಕೆಲಸದ ಮೇಲೆ ತೃಪ್ತಿ ಸಿಗುತ್ತದೆ ಎಂದರು.

ಸದಾ ಕಚೇರಿ ಕಡತಗಳೊಂದಿಗೆ ವ್ಯವಹಾರ ಮಾಡುವ ಸರಕಾರಿ ನೌಕರರು ತಮ್ಮ ಬಿಡುವಿನ ವೇಳೆಯಲ್ಲಿಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಭಾಗವಹಿಸುವುದು ಒಳಿತು. ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಸರಕಾರಿ ನೌಕರ ಸಂಘದ ಅಧ್ಯಕ್ಷ ಕೆ.ಬಿ.ಅಶೋಕ್‌ ಮಾತನಾಡಿ, ಜಿಲ್ಲೆಯ ಜನ ಮಾನಸದಲ್ಲಿಉಳಿಯುವಂತಹ ಕೆಲಸ ಮಾಡಿರುವ ಜಗದೀಶ್‌ ಅವರು ಪ್ರಾಮಾಣಿಕ ವ್ಯಕ್ತಿತ್ವದಿಂದ ಉತ್ತಮ ಹೆಸರು ಮಾಡಿದ್ದಾರೆ ಎಂದು ಶ್ಲಾಘಿಘಿಸಿದರು.

ಸನ್ಮಾನಿಸಿದ ಈ ಸಮಾರಂಭದಲ್ಲಿಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಆರ್‌ ಅನಿಲ್‌ ಕುಮಾರ್‌, ಜಿಲ್ಲಾಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ ಶ್ರೀನಿವಾಸ್‌, ಪರಿಶಿಷ್ಟ ಜಾತಿ ವರ್ಗಗಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ಕೆಟಿ ನಾಗರಾಜ್‌, ಶಿಕ್ಷಣ ಸಂಯೋಜಕ ಆರ್‌ ಶ್ರೀನಿವಾಸನ್‌, ಜಿಲ್ಲಾಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಮುರಳಿಮೋಹನ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ