ಆ್ಯಪ್ನಗರ

ಯೋಧರ ಹತ್ಯೆಗೆ ಖಂಡನೆ; ಜಿಲ್ಲೆಯಲ್ಲಿ ಸಂಘಟನೆಗಳಿಂದ ಪ್ರತಿಭಟನೆ

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ನಡೆದ ಸುಮಾರು 44 ಯೋಧರ ಹತ್ಯೆ ಖಂಡಿಸಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಪ್ರಗತಿಪರ ಸಂಘಟನೆಗಳು ಶುಕ್ರವಾರ ಉಗ್ರರ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ, ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

Vijaya Karnataka 16 Feb 2019, 4:09 pm
ಕೋಲಾರ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ನಡೆದ ಸುಮಾರು 44 ಯೋಧರ ಹತ್ಯೆ ಖಂಡಿಸಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಪ್ರಗತಿಪರ ಸಂಘಟನೆಗಳು ಶುಕ್ರವಾರ ಉಗ್ರರ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ, ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
Vijaya Karnataka Web large scale protest against killing of soldiers
ಯೋಧರ ಹತ್ಯೆಗೆ ಖಂಡನೆ; ಜಿಲ್ಲೆಯಲ್ಲಿ ಸಂಘಟನೆಗಳಿಂದ ಪ್ರತಿಭಟನೆ


ರೈತ ಸಂಘ, ಶ್ರೀರಾಮಸೇನೆ, ಕರವೇ ಸೇರಿದಂತೆ ದಲಿತ, ವಿದ್ಯಾರ್ಥಿಪರ ಸಂಘಟನೆಗಳು ವಿವಿಧೆಡೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಘಟನೆಯಲ್ಲಿ ವೀರಮರಣವನ್ನಪ್ಪಿದ ಯೋಧರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದರು.

ಪಾಕ್‌ ಧ್ವಜ ಸುಟ್ಟು ಆಕ್ರೋಶ: ಯೋಧರ ಮೇಲೆ ಉಗ್ರರ ದಾಳಿ ನಡೆಸಿರುವುದನ್ನು ಖಂಡಿಸಿ ಶ್ರೀರಾಮಸೇನೆ, ಬಜರಂಗದಳ ಸೇರಿದಂತೆ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಬೃಹತ್‌ ರಾಷ್ಟ್ರಧ್ವಜ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರಾರ‍ಯಲಿ ನಡೆಸಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆದ ಪ್ರತಿಭಟನಾಕಾರರು, ಪಾಕಿಸ್ತಾನದ ಧ್ವಜವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಯುದ್ಧ ಮಾಡುವ ತಾಕತ್ತು ಇಲ್ಲದೆ ಹೇಡಿಗಳಂತೆ ಆತ್ಮಹತ್ಯಾ ದಾಳಿ ಮಾಡಿರುವ ಪಾಕಿಸ್ತಾನಿ ಉಗ್ರರ ಮೇಲೆ ಈ ಕೂಡಲೇ ಕ್ರಮ ಕೈಗೊಳ್ಳಲು ಪ್ರಧಾನಮಂತ್ರಿ ಮುಂದಾಗಬೇಕು ಎಂದು ಆಗ್ರಹಿಸಿದರು.

ಉಗ್ರರ ದಾಳಿಯಲ್ಲಿ ಸಾವನ್ನಪಿದ ಯೋಧರ ಕುಟುಂಬಳಿಗೆ ಸರಕಾರ ಸೂಕ್ತ ಪರಿಹಾರ ಘೋಷಣೆ ಮಾಡಿ, ಇಸ್ರೇಲ್‌ ದೇಶದಲ್ಲಿ ಒಬ್ಬ ಯೋಧರನ್ನು ಕೊಂದರೆ 10 ಜನ ಉಗ್ರರನ್ನು ಕೊಲ್ಲುವ ರೀತಿಯಲ್ಲಿ ಭಾರತ ಸರಕಾರ ಕ್ರಮವಹಿಸಿ ಪಾಕಿಸ್ತಾನದ 440 ಉಗ್ರರನ್ನು ಈ ಕೂಡಲೇ ಕೊಂದು ನಮ್ಮ ವೀರಯೋಧರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಸರ್ಜಿಕಲ್‌ ಸ್ಟೈಕ್‌ ಮಾಡಲು ಒತ್ತಾಯ: ನಗರದ ಕಾಲೇಜು ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಶ್ರದ್ದಾಂಜಲಿ ಅರ್ಪಿಸಿದ ರೈತಸಂಘ, ಕರವೇ ಸೇರಿದಂತೆ ಇತರೆ ಸಂಘಟನೆಗಳ ಮುಖಂಡರು ಮತ್ತು ರವಿ ಬಿಎಡ್‌ ಕಾಲೇಜು ವಿದ್ಯಾರ್ಥಿಗಳು 44 ಮಂದಿ ವೀರ ಯೋಧರು ಬಲಿಯಾಗಿರುವುದು ಅತ್ಯಂತ ಶೋಚನಿಯ ಮತ್ತು ರಣಹೇಡಿಗಳ ಕುತಂತ್ರದ ಸಂಗತಿಯಾಗಿದ್ದು, ಇದರ ವಿರುದ್ದ ಭಾರತವು ಸರ್ಜಿಕಲ್‌ಸ್ಟ್ರೈಕ್‌ ಮಾಡಬೇಕೆಂದು ಪ್ರಧಾನಿಯವರನ್ನು ಒತ್ತಾಯಿಸಿದರು.

ಇತ್ತೀಚೆಗೆ ಭಯೋತ್ಪಾದಕರ ಅಟ್ಟಹಾಸ ಮಿತಿಮೀರುತ್ತಿದೆ. ಉಗ್ರರು ಸಿಆರ್‌ಪಿಎಫ್‌ ಬಸ್‌ಗಳಿಗೆ ಸ್ಪೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿರುವುದು ಪೂರ್ವನಿಯೋಜಿತ ವಿದ್ವಂಸಕ ಕೃತ್ಯವಾಗಿದ್ದು, ಘಟನೆಯ ಹಿಂದೆ ಪಾಕ್‌ ಪ್ರೇರಿತ ಸಂಚು ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದುಷ್ಕೃತ್ಯದಲ್ಲಿ ಸಾವನ್ನಪ್ಪಿರುವ ವೀರಯೋಧರ ಕುಟುಂಬದ ಜತೆ ದುಖದಲ್ಲಿ ಇಡೀ ದೇಶ ಭಾಗಿಯಾಗಲಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೆಯೇ ಗಾಯಗೊಂಡಿರುವ ಯೋಧರು ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಎಪಿಎಂಸಿ ಪುಟ್ಟರಾಜು, ನಗರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್‌, ಖಾಸಗಿ ಶಿಕ್ಷ ಣ ಸಂಸ್ಥೆಗಳ ಮುಖಂಡ ಎಸ್‌.ಮುನಿಯಪ್ಪ, ಕರವೇ ಚಂಬೇ ರಾಜೇಶ್‌, ಡಿಪಿಎಸ್‌. ಮುನಿರಾಜು, ಕಲಾವಿದ ಬಿ.ವಿ.ವಿ.ಗಿರಿ, ರವಿ ಬಿಎಡ್‌ ಕಾಲೇಜಿನ ಪ್ರಿನ್ಸಿಪಾಲ್‌ ಮಂಜುನಾಥ್‌ರೆಡ್ಡಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ