ಆ್ಯಪ್ನಗರ

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಅವಶ್ಯಕ

ರಾಷ್ಟ್ರೀಯ ಭಾವೈಕ್ಯತೆಯ ಭಾವನೆಗಳನ್ನು ವಿದ್ಯಾರ್ಥಿಗಳಲ್ಲಿ ಉದ್ದೀಪನಗೊಳಿಸುವುದರ ಜೊತೆಗೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ದಿಟ್ಟವಾಗಿ ಎದುರಿಸಲು ಇಂತಹ ನಾಯಕತ್ವ ಶಿಬಿರಗಳು ತಳಪಾಯವಿದ್ದಂತೆ ಎಂದು ಡಿ.ವೈಎಸ್‌.ಜಿ ಅನೂಷ ತಿಳಿಸಿದರು.

Vijaya Karnataka 16 Feb 2019, 4:33 pm
ಕೋಲಾರ: ರಾಷ್ಟ್ರೀಯ ಭಾವೈಕ್ಯತೆಯ ಭಾವನೆಗಳನ್ನು ವಿದ್ಯಾರ್ಥಿಗಳಲ್ಲಿ ಉದ್ದೀಪನಗೊಳಿಸುವುದರ ಜೊತೆಗೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ದಿಟ್ಟವಾಗಿ ಎದುರಿಸಲು ಇಂತಹ ನಾಯಕತ್ವ ಶಿಬಿರಗಳು ತಳಪಾಯವಿದ್ದಂತೆ ಎಂದು ಡಿ.ವೈಎಸ್‌.ಜಿ ಅನೂಷ ತಿಳಿಸಿದರು.
Vijaya Karnataka Web leadership quality essential for students
ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಅವಶ್ಯಕ


ತಾಲೂಕಿನ ಮುದುವತ್ತಿ ಗ್ರಾಮದಲ್ಲಿ ಇಂಡೋ ಏಷ್ಯನ್‌ ಅಕಾಡೆಮಿ ಕಾಲೇಜ್‌ ಕಲ್ಯಾಣ ನಗರ ಬೆಂಗಳೂರು-43 ರ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಶಿಸು,್ತ ಸಂಯಮ, ಕಲಿಕೆ ಆಸಕ್ತಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ಕರೆ ನೀಡುತ್ತಾ ಪೊಲೀಸ್‌ ಇಲಾಖೆಯಿಂದ ಬೇಕಾಗಿರುವ ಎಲ್ಲಾ ಭದ್ರತೆ ಒದಗಿಸುವುದಾಗಿ ತಿಳಿಸಿದರು.

ಕಸಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್‌ ಮಾತನಾಡಿ, ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿಯನ್ನು ಬೆಳಸಿಕೊಂಡು ಉಳಿಸಿ ಬೆಳೆಸಬೇಕಾದ ಕಾರ್ಯ, ಕರ್ತವ್ಯ ನಿಮ್ಮಿಂದ ಆಗಬೇಕು ಹಾಗೂ ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯ ಸೇವಾಯೋಜನೆ ಒಂದು ಮಹತ್ತರವಾದ ಬದಲಾವಣೆ ತರುವ ಯೋಜನೆ ಎಂದರು.

ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಕುಲಪತಿಗಳು ( ಮೌಲ್ಯಮಾಪನ) ಡಾ.ಸುಂದರ್‌ ರಾಜ್‌ ಅರಸ್‌ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ತಿಳಿಸಿ. ಜಿಲ್ಲೆಯ ರೈತರು ಎದುರಿಸುತ್ತಿರುವ ಸವಾಲುಗಳನ್ನು ಇಂದಿನ ಪೀಳಿಗೆ ವಿದ್ಯಾವಂತರಾಗಿ ಸರಕಾರಕ್ಕೆ ಪ್ರಶ್ನಿಸುವ ದೈರ್ಯ ನಿಮ್ಮಿಲ್ಲಿ ಬರಬೇಕು. ಹಾಗೂ ವಿದ್ಯಾರ್ಥಿಗಳು ಜೀವನದ ಮೌಲ್ಯಗಳನ್ನು ತಿಳಿದು ಸತ್ಯದ ದಾರಿಯಲ್ಲಿ ನಡೆಯಬೇಕು ಎಂದು ತಿಳಿಸಿದರು.

ಇಂಡೋ ಏಷ್ಯನ್‌ ಅಕಾಡೆಮಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಪ್ರೋ. ಚಂದ್ರಶೇಖರ್‌, ಮುದುವತ್ತಿ ಗ್ರಾಪಂ ಅಧ್ಯಕ್ಷೆ ನೀಲಮ್ಮ.ಸಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾಗರಾಜ್‌.ಡಿ ಮತ್ತಿತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ