ಆ್ಯಪ್ನಗರ

ಎಂವಿಕೆ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿ

ಕೇಂದ್ರ ಮಾಜಿ ಸಚಿವ ದಿವಂಗತ ಎಂ.ವಿ.ಕೃಷ್ಣಪ್ಪ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದರು. ಉತ್ತಮ ರಾಜಕಾರಣಿಯಾಗಿ ದೇಶದಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದರು. ಅವರು ರಾಜ್ಯ ಹಾಗೂ ಕೇಂದ್ರ ಸಚಿವರಾಗಿದ್ದಾಗ ಮಾಡಿರುವ ಸಾಧನೆಗಳು ಈಗಲೂ ಜೀವಂತವಾಗಿದೆ ಎಂದು ಹಿರಿಯ ರಾಜಕಾರಣಿ ಹಾಗೂ ಎಂ.ವಿ.ಕೃಷ್ಣಪ್ಪನವರ ಒಡನಾಡಿಯಾಗಿದ್ದ ವಿ.ವೆಂಕಟಮುನಿ ತಿಳಿಸಿದರು.

Vijaya Karnataka 4 Feb 2019, 5:00 am
ಮುಳಬಾಗಲು: ಕೇಂದ್ರ ಮಾಜಿ ಸಚಿವ ದಿವಂಗತ ಎಂ.ವಿ.ಕೃಷ್ಣಪ್ಪ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದರು. ಉತ್ತಮ ರಾಜಕಾರಣಿಯಾಗಿ ದೇಶದಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದರು. ಅವರು ರಾಜ್ಯ ಹಾಗೂ ಕೇಂದ್ರ ಸಚಿವರಾಗಿದ್ದಾಗ ಮಾಡಿರುವ ಸಾಧನೆಗಳು ಈಗಲೂ ಜೀವಂತವಾಗಿದೆ ಎಂದು ಹಿರಿಯ ರಾಜಕಾರಣಿ ಹಾಗೂ ಎಂ.ವಿ.ಕೃಷ್ಣಪ್ಪನವರ ಒಡನಾಡಿಯಾಗಿದ್ದ ವಿ.ವೆಂಕಟಮುನಿ ತಿಳಿಸಿದರು.
Vijaya Karnataka Web m v krishnappa had social concern
ಎಂವಿಕೆ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿ


ನಗರದ ಕೆಇಬಿ ವೃತ್ತದಲ್ಲಿ ದಿವಂಗತ ಎಂ.ವಿ.ಕೃಷ್ಣಪ್ಪ ಅವರ ಜನ್ಮಶತಾಬ್ದಿ ಅಂಗವಾಗಿ ಟಿಎಪಿಸಿಎಂಎಸ್‌. ವತಿಯಿಂದ ಏರ್ಪಡಿಸಿದ್ದ ಬೆಳ್ಳಿ ರಥ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ದಿವಂಗತ ಎಂ.ವಿ.ಕೃಷ್ಣಪ್ಪ ಅವರು ಜಾತ್ಯತೀತ ಮನೋಭಾವ ಹೊಂದಿದ್ದರು. ಅವರು ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಿದ್ದರಿಂದ ಈಗ ಸಾವಿರಾರು ಕುಟುಂಬಗಳು ಹೈನುಗಾರಿಕೆಯಿಂದ ಜೀವನ ನಡೆಸುತ್ತಿವೆ ಎಂದು ತಿಳಿಸಿದರು.

ಕೃಷ್ಣಪ್ಪ ಅವರ ಆದರ್ಶ, ತತ್ತ್ವ, ವಿಚಾರ ಧಾರೆಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಕೋಲಾರದಲ್ಲಿ ಎಲ್ಲಾ ಪಕ್ಷಗಳು ಹಾಗೂ ಎಲ್ಲಾ ಸಮುದಾಯದವರು ಕೃಷ್ಣಪ್ಪ ಅವರ ಜನ್ಮಶತಾಬ್ದಿಯನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿರುವುದು ಸ್ವಾಗತರ್ಹವಾಗಿದೆ ಎಂದು ತಿಳಿಸಿದರು.

ಬೆಳ್ಳಿ ರಥ ಕೋಲಾರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳಿದಾಗ ಸಾವಿರಾರು ಮಂದಿ ಅದ್ದೂರಿ ಸ್ವಾಗತ ನೀಡಿದರು.

ಜೆಡಿಎಸ್‌ ಹಿರಿಯ ಮುಖಂಡ ಆಲಂಗೂರು ಶಿವಣ್ಣ, ಟಿಎಪಿಸಿಎಂಎಸ್‌ ಅಧ್ಯಕ್ಷ ಎಂ.ಎಸ್‌.ಗೋವಿಂದರಾಮ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಸಿ ನೀಲಕಂಠೇಗೌಡ, ಕೋಚಿಮುಲ್‌ ನಿರ್ದೇಶಕ ಆರ್‌.ಆರ್‌ ರಾಜೇಂದ್ರಗೌಡ, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಸಿ.ವಿ.ಶ್ರೀನಾಥ್‌, ಎಪಿಎಂಸಿ ಅಧ್ಯಕ್ಷ ವಿಶ್ವನಾಥ್‌ಗೌಡ, ಟಿಎಪಿಸಿಎಂಎಸ್‌ ನಿರ್ದೇಶಕ ತಿಮ್ಮಪ್ಪ, ಕಾರ್ಯದರ್ಶಿ ರಾಮಕೃಷ್ಣಪ್ಪ, ಪ್ರಾಂಶುಪಾಲ ಡಾ.ಕೆ.ವಿ.ಪುರುಷೋತ್ತಮ್‌, ಕಾಂಗ್ರೆಸ್‌ ಮುಖಂಡರಾದ ಸಂತೋಷ್‌, ನವೀನ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ