ಆ್ಯಪ್ನಗರ

ಸಾಮಾನ್ಯ ಹಾಲು ಮಾರುತ್ತಿದ್ದವನೊಬ್ಬ ಇಂದು ಸಂಸದ

ಸಾಮಾನ್ಯ ಹಾಲು ಮಾರುತ್ತಿದ್ದ ವ್ಯಕ್ತಿಯೊಬ್ಬ ಇಂದು ದಿಲ್ಲಿಯ ಸಂಸತ್‌ ಭವನಕ್ಕೆ ಸಂಸದನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರೇ ಕೋಲಾರ ಲೋಕಸಭಾ ಸದಸ್ಯರಾಗಿ ಬಿಜೆಪಿಯಿಂದ ಆಯ್ಕೆಯಾಗಿರುವ ಎಸ್‌.ಮುನಿಸ್ವಾಮಿ.

Vijaya Karnataka 24 May 2019, 5:00 am
ಟೇಕಲ್‌ : ಸಾಮಾನ್ಯ ಹಾಲು ಮಾರುತ್ತಿದ್ದ ವ್ಯಕ್ತಿಯೊಬ್ಬ ಇಂದು ದಿಲ್ಲಿಯ ಸಂಸತ್‌ ಭವನಕ್ಕೆ ಸಂಸದನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರೇ ಕೋಲಾರ ಲೋಕಸಭಾ ಸದಸ್ಯರಾಗಿ ಬಿಜೆಪಿಯಿಂದ ಆಯ್ಕೆಯಾಗಿರುವ ಎಸ್‌.ಮುನಿಸ್ವಾಮಿ.
Vijaya Karnataka Web one of the most common sellers of milk today is mp
ಸಾಮಾನ್ಯ ಹಾಲು ಮಾರುತ್ತಿದ್ದವನೊಬ್ಬ ಇಂದು ಸಂಸದ


ಇವರು ಮೂಲತಃ ಟೇಕಲ್‌ನ ಯಲುವಗುಳಿ ಗ್ರಾಮದವರಾಗಿದ್ದು ಸಾದಪ್ಪ ಗೌರಮ್ಮ ದಂಪತಿ ಮಗನಾಗಿ ಜನಿಸಿದ ಎಸ್‌.ಮುನಿಸ್ವಾಮಿ ಅವರು ಬದುಕಿಗಾಗಿ ನಾನಾ ರೀತಿಯ ವ್ಯಾಪಾರಗಳನ್ನು ಮಾಡಿದರು. ದ್ವಿತೀಯ ಪಿಯುಸಿ ಮುಗಿಸಿದ ನಂತರ, ಟೇಕಲ್‌ನಲ್ಲಿ ಹೆಚ್ಚು ದಿನಕಾಲ ಕಳೆಯದೆ ಬೆಂಗಳೂರಿಗೆ ಹೊರಟರು. ಜೀವನ ಸಾಗಿಸಲು ಮನೆ ಮನೆಗೆ ಹಾಲು ಹಾಕುತ್ತಿದ್ದರು. ಆ ವೃತ್ತಿಯಲ್ಲಿ ಮುನಿಸ್ವಾಮಿ ಸ್ವಲ್ಪ ಮಟ್ಟಿಗೆ ಅಭಿವೃದ್ಧಿಯಾದರು. ತದನಂತರ ಹಾಲು ವ್ಯಾಪಾರ ಬೃಹದಾಕಾರವಾಗಿ ಬೆಳೆಯಿತು. ನಂತರ ಕಾಡುಗೋಡಿ ವ್ಯಾಪ್ತಿಯ ಸೀಗೆಹಳ್ಳಿ ಗ್ರಾಪಂನಲ್ಲಿ ಗ್ರಾಪಂ ಸದಸ್ಯನಾಗಿ ನಂತರ ಉಪಾಧ್ಯಕ್ಷನಾಗಿ, ಅಧ್ಯಕ್ಷರು ಆದರೂ ಅಲ್ಲಿಂದ ಆತನ ರಾಜಕೀಯ ಜೀವನ ಪ್ರಾರಂಭಗೊಂಡಿತು.

ಮೊದಲಿಗೆ ಎಸ್‌.ಮುನಿಸ್ವಾಮಿ ಕಾಂಗ್ರೆಸ್‌ ಪಕ್ಷದಲ್ಲಿದ್ದರು. ಮಲ್ಲಿಕಾರ್ಜುನ ಖರ್ಗೆಯವರ ಬಲಗೈ ಬಂಟರಾಗಿದ್ದು ನಂತರ ಆರ್‌ಎಸ್‌ಎಸ್‌ನ ಸಕ್ರಿಯ ಕಾರ್ಯಕರ್ತರಾದರು. ಬೆಂಗಳೂರು ಮಹಾನಗರ ಪಾಲಿಕೆಯ ಕಾಡುಗೋಡಿ ವಾರ್ಡ್‌ನ ಕಾರ್ಪೋರೇಟರ್‌ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾದರು. ಅರವಿಂದ ಲಿಂಬಾವಳಿಯ ಶಿಷ್ಯರಾಗಿದ್ದು, ಹಿಂದೊಮ್ಮೆ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್‌ ಸ್ಥಾನಕ್ಕೂ ಸ್ಪರ್ಧಿಸಿದ್ದರು. ಇದೀಗ ಎಸ್‌.ಮುನಿಸ್ವಾಮಿ ಸಂಸದರಾಗಿ ಆಯ್ಕೆಯಾಗಿದ್ದಾರೆ.


ಶಾಸಕ, ಸಂಸದರನ್ನು ನೀಡಿದ ಟೇಕಲ್‌

ಕೋಲಾರ ಜಿಲ್ಲೆ, ಮಾಲೂರು ತಾಲೂಕು ತೇಕಂಚಿ ಕ್ಷೇತ್ರವೆಂದು ಖ್ಯಾತಿಪಡೆದಿರುವ ಟೇಕಲ್‌ ಹೋಬಳಿಯಿಂದ ಇದೀಗ ಇಬ್ಬರು ರಾಜಕೀಯ ಧುರೀಣರು ಸಂಸದರಾಗಿ ಹಾಗೂ ಶಾಸಕರಾಗಿ ಸೇವೆ ಮಾಡಲು ಜನತೆಯ ಆರ್ಶೀವಾದದ ಅದೃಷ್ಟ ಪಡೆದಿದ್ದು ಟೇಕಲ್‌ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.

ಭಾರಿ ಕುತೂಹಲ ಮೂಡಿಸಿದ್ದ ಕೋಲಾರ ಲೋಕಸಭಾ ಕ್ಷೇತ್ರದ ಫಲಿತಾಂಶದಲ್ಲಿ ಟೇಕಲ್‌ನ ಯಲುವಗುಳಿ ಗ್ರಾಮದ ಎಸ್‌.ಮುನಿಸ್ವಾಮಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಾರೆ.

ಮೊನ್ನೆಯಷ್ಟೆ ನಡೆದ ವಿಧಾನಸಭೆಯ ಚುನಾವಣೆಯಲ್ಲಿ ಟೇಕಲ್‌ನ ಕೊಮ್ಮನಹಳ್ಳಿ ಗ್ರಾಮದ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡರು ಗೆದ್ದು ಬೆಂಗಳೂರಿನ ವಿಧಾನಸಭೆಗೆ ಪಾದಾರ್ಪಣೆ ಮಾಡಿದ್ದರು. ಟೇಕಲ್‌ ಹೋಬಳಿಯಿಂದ ಒಬ್ಬ ಎಂಪಿ, ಒಬ್ಬ ಎಂಎಲ್‌ಎಯನ್ನು ನೀಡಿದ ಸೌಭಾಗ್ಯ ಇಲ್ಲಿನ ಜನತೆಗೆ ಸಿಕ್ಕಿದ್ದು ತಮ್ಮ ತವರು ಹೋಬಳಿ ಟೇಕಲನ್ನು ಈ ಇಬ್ಬರು ನಾಯಕರು ಪಕ್ಷಾತೀತವಾಗಿ ಅಭಿವೃದ್ಧಿ ಪಡಿಸುತ್ತಾರೆಂಬ ನಂಬಿಕೆ ಜನತೆ ಹೊರ ಹಾಕಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ